ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಐಷಾರಾಮಿ ಸ್ಲೀಪರ್ ಖಾಸಗಿ ಬಸ್ ಧಗಧಗಿಸಿ ಹೊತ್ತಿ ಉರಿದಿದೆ. ಡ್ರೈವರ್, ಕಂಡಕ್ಟರ್ ಸೇರಿ 42 ಪ್ರಯಾಣಿಕರಲ್ಲಿ, 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಈ ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ಒಬ್ಬರು ಘಟನೆ ಬಗ್ಗೆ ವಿವರಿಸಿದ್ದಾರೆ. ಎಳೆ ಎಳೆಯಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಹೈಮಾ ಅನ್ನುವ ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ಪುಟ್ಟಬರ್ತಿಗೆ ಹೋಗಿ ವಾಪಾಸ್ ಬರುತ್ತಿದ್ದರು. ಮುಂದೆ ಇವರ ಕಾರು ಹೋಗ್ತಾಯಿತ್ತು. ಅದರ ಹಿಂದೆ ಕಾವೇರಿ ಟ್ರಾವೆಲ್ಸ್ ವೋಲ್ವೊ ಬಸ್ ಬರ್ತಾಯಿತ್ತು. ಇದು ಡೆಹ್ರಾಡೂನ್ ರೆಜಿಸ್ಟ್ರೇಷನ್ ಇರುವ ವಾಹನ. ಈ ವೋಲ್ವೋ ಬಸ್ ನಲ್ಲಿ 42 ಸಿಟ್ ಪೈಕಿ 40 ಜನ ಆ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದರು. ಬೆಳಗಿನ ಜಾವಾ 3 ಗಂಟೆ ಸುಮಾರಿಗೆ ಅವರ ಕಾರಿನ ಹಿಂದೆ ಇದ್ದ ಬಸ್ ಗೆ ಬೆಂಕಿ ಧಗಧಗ ಅಂತ ಹೊತ್ತಿ ಉರಿಯುತ್ತಿದೆ.
ಅದನ್ನ ಗಮನಿಸಿದಂತಹ ಹೈಮಾ ಅವರು ಕಾರನ್ನ ನಿಲ್ಲಿಸುವಂತೆ ತಮ್ಮ ಕಾರು ಚಾಲಕನಿಗೆ ಹೇಳಿ ಓಡೋಡಿ ಬಂದಿದ್ದಾರೆ. ಅವರು ಬಂದು ನೋಡೋ ಅಷ್ಟರಲ್ಲಿ ಅಲ್ಲಿನ ದೃಶ್ಯ ಹೇಗಿತ್ತು ಅಂದ್ರೆ ಬಸ್ ನಲ್ಲಿರುವಂತಹ ಕಿಟಕಿ, ಕಂಬಿಗಳನ್ನ ಹಿಡಿದುಕೊಂಡು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕೆಲವರ ಅಸ್ಥಿಪಂಜರಗಳು ಕಾಣಿಸಿವೆ. ತಂದೆ, ತಾಯಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
ಆ ಒಂದು ಮಗು ತನ್ನ ತಂದೆ ತನ್ನನ್ನ ಕಾಪಾಡ್ತಾನೆ ಅಂತ ಆ ಮಗು ತನ್ನ ತಂದೆಯ ಕಾಲನ್ನ ಬಿಗಿಯಾಗಿ ಹಿಡಿದುಕೊಂಡಿತ್ತು ಅಂತ ತೆಲುಗಿನಲ್ಲಿ ವಿವರಿಸಿದ್ದಾರೆ. ಬಸ್ ಗೆ ಬೆಂಕಿ ಹತ್ತಿ ಉರಿಯುತ್ತಿತ್ತು. ಕೆಲವರು ನಮ್ಮವರು ಸತ್ತು ಹೋದ್ರು ಅಂತ ಕೆಳಗಡೆ ಕೂತು ಜೋರಾಗಿ ಅಳುತ್ತಿದ್ದರು. ವಸ್ತುಗಳೆಲ್ಲವೂ ಸುಟ್ಟು ಹೋಗಿದ್ದವು.
ಸ್ವಲ್ಫ ಬಸ್ ನಿಂದ ಕೆಳಗೆ ಇಳಿಯೋಕೆ ಪ್ರಯತ್ನಿಸುತ್ತಿದ್ದರು. ಇನ್ನು ಕೆಲವರು ಓಡೋಡಿ ಬಂದು ವಿಡಿಯೋ ಮಾಡ್ತಾಯಿದ್ರು. ನೋಡೋಕೆ ಸಂಕಟವಾಗ್ತಾಯಿತ್ತು. ಬಳಿಕ ಸ್ಥಳೀಯ ಪೊಲೀಸರಿಗೆ ಫೋನ್ ಮಾಡಿ ಕರಿಸಿದ್ದಾರೆ. ಆದ್ರೆ ಪೊಲೀಸರು ಬರುವಷ್ಟರಲ್ಲಿ ಭಾರಿ ದುರಂತ ಸಂಭವಿಸಿತ್ತು. ೨೦ ಮಂದಿ ಬೆಂದು ಸುಟ್ಟು ಹೋಗಿದ್ದರು ಅಂತ ಕರ್ನೂಲ್ ಬೆಂಕಿ ದುರಂತವನ್ನ ಹೇಳಿಕೊಂಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ

