ಬೆಂಗಳೂರನ್ನೇ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಯುವಕನೊಬ್ಬ ಸ್ನೇಹಿತನ ಪತ್ನಿಯನ್ನು ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿ, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.
ಹೆಬ್ಬಗೋಡಿಯ ತಿರುಪಾಳ್ಯ ನಿವಾಸಿ 27 ವರ್ಷದ ಮಂದಿರಾ ಮಂಡಲ್ ಎಂಬುವವಳನ್ನು ಕೊಂದು, ಬಳಿಕ ಋತ್ಯ ಎಸಗಿದ ಆರೋಪಿ 28 ವರ್ಷದ ಸುಮನ್ ಮಂಡಲ್ ಅದೇ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಶ್ಚಿಮ ಬಂಗಾಳ ಮೂಲದ ಮಂದಿರಾ ಮಂಡಲ್ 8 ವರ್ಷಗಳ ಹಿಂದೆ ಬಿಜೋನ್ ಮಂಡಲ್ ಎಂಬಾತತನನ್ನು ಮಾದುವೆಯಾಗಿದ್ದು, ಈ ದಂಪತಿಗೆ 6 ವರ್ಷದ ಮಗ ಇದ್ದಾನೆ. ಹೆಬ್ಬಗೋಡಿಯ ತಿರುಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಈ ಮಧ್ಯೆ ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ಕಲಹವಾಗಿದ್ದ 2 ವರ್ಷಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಹೀಗಾಗಿ ಮಂದಿರಾ ಮಂಡಲ್ ತನ್ನ ಮಗನನ್ನು ಮನೆ ಮುಂದೆಯೇ ವಾಸವಾಗಿದ್ದ ಪಾಲಕರ ಮನೆಯಲ್ಲೇ ಇರಿಸಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಸುಮನ್ ಮಂಡಲ್ ಕೂಡ ತಿರುಪಾಳ್ಯದಲ್ಲೇ ವಾಸವಾಗಿದ್ದ. ಮಂದಿರಾ ಮತ್ತು ಸುಮನ್ ನಡುವೆ ಆತ್ಮೀಯತೆ ಇತ್ತು ಎಂದು ಹೇಳಲಾಗಿದೆ. ಸ್ನೇಹಿತರಾಗಿದ್ದ ಬಿಜೋನ್ ಮಂಡಲ್ ಮತ್ತು ಸುಮನ್ ತಿಂಗಳ ಹಿಂದೆ ಕಾರ್ಯನಿಮಿತ್ತ ಅಂಡಮಾನ್‌ಗೆ ಹೋಗಿದ್ದರು.
ಮೂರು ದಿನಗಳ ಹಿಂದೆ ಸುಮನ್ ಒಬ್ಬನೇ ವಾಪಸ್ ಬಂದಿದ್ದಾನೆ. ಮಂಗಳವಾರ ರಾತ್ರಿ ಮಂದಿರಾ ಮನೆಗೆ ಆರೋಪಿ ಬಂದಿದ್ದಾನೆ. ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು ಅದು ವಿಕೋಪಕ್ಕೆ ಹೋದಾಗ ಆರೋಪಿ ಚಾಕುಬಿನಿಂದ ಮಂದಿರಾ ಕುತ್ತಿಗೆಗೆ ಇರಿದು ಹತ್ಯೆಗೈದಿದ್ದಾನೆ. ಬಳಿಕ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ಹೊತ್ತಿನ ಬಳಿಕ ಗಲಾಟೆಯ ಸದ್ದು ಕೇಳಿ ಸ್ಥಳೀಯರು ಬಂದು ನೋಡಿದಾಗ ಮಂದಿರಾ ಕೊಲೆಯಾಗಿರುವುದು ಗೊತ್ತಾಗಿದೆ.
ಪ್ರರಣ ದಾಖಲಿಸಿಕೊಂಡ ಪೊಲೀಸರು ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ