ಮುಡಾ ಕೇಸ್‌ನಲ್ಲಿ ಸಿಎಂ ಪಾತ್ರ ಏನಿದೆ..? ಅವರೇಕೆ ರಾಜೀನಾಮೆ ನೀಡಬೇಕು..?: ಜಮೀರ್ ಅಹಮದ್‌

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಚಿವ ಜಮೀರ್ ಅಹ್ಮದ್ ಮಾಧ್ಯಮದವರ ಜೊತೆ ಮಾತನಾಡಿದ್ದು, ಉಪಚುನಾವಣೆಯ ಮೂರೂ ಕ್ಷೇತ್ರದಲ್ಲಿ ನಾವು ಗೆಲ್ಲುವ ವಿಶ್ವಾಸ ಇದೆ. ಇದಕ್ಕಿಂತ ಮುಂಚೆ ಶಿಗ್ಗಾವಿ ಪ್ರಚಾರ ಮಾಡಿದ್ದೇನೆ. ಶಿಗ್ಗಾವಿನಲ್ಲಿ ಸಿಎಂ ಅವರು ಪ್ರಚಾರ ಮಾಡಿದ ನಂತರ ತುಂಬಾ ಚೆನ್ನಾಗಿದೆ, ನಾವು ಗೆದ್ದೇ ಗೆಲ್ತೇವೆ. ಸಿದ್ದರಾಮಯ್ಯ ಅವರಿಗೆ ತನಿಖೆಗೆ ನೋಟಿಸ್ ಕೊಟ್ಟಿದ್ದಾರೆ, ಹೋಗಿದ್ದಾರೆ. ಜನರಿಗೆ ಗೊತ್ತಿದೆ ಮುಡಾದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ ಎಂದು ಜಮೀರ್ ಅಹಮದ್ ಹೇಳಿದ್ದಾರೆ.

ಆರ್ ಅಶೋಕ ಮ್ಯಾಚ್ ಫಿಕ್ಸಿಂಗ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಜಮೀರ್, ಏನು ಮ್ಯಾಚ್ ಫಿಕ್ಸಿಂಗ್ ಆಗಿದೆ..? ಬಿಜೆಪಿ ಕಾಲದಲ್ಲೂ ಬಹಳಷ್ಟು ಕೇಸ್ ಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದಾರೆ. ಅವಾಗೆಲ್ಲ ಮ್ಯಾಚ್ ಫಿಕ್ಸಿಂಗ್ ಇತ್ತಾ? 2019ರಲ್ಲಿ ನನ್ನ ಕೇಸ್ ನಲ್ಲೂ ಸಿಬಿಐ ಅಧಿಕಾರಿಗಳು ಕರೆದಿದ್ರು. ಕೇವಲ ಅರ್ಧ ಗಂಟೆಯಲ್ಲಿ ಬಿಟ್ಟು ಕಳ್ಸಿದ್ರು. ಅವರ ಪ್ರಶ್ನೆಗೆ ಉತ್ತರ ಕೊಟ್ಟೆ ಬಿಟ್ರು, ಅದು ವಿಚಾರಣಾ ಅಧಿಕಾರಿ ಮೇಲೆ ಇರುತ್ತೆ. ಸಿಎಂ ಅವರ ಪಾತ್ರ ಇದರಲ್ಲೇನಿದೆ ಅವರು ಯಾಕೆ ರಾಜೀನಾಮೆ ಕೊಡಬೇಕು..?. ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ಪಾತ್ರ ಇಲ್ಲ ಅಂತ ಎಲ್ಲರಿಗೂ ಗೊತ್ತಿದೆ. ನ್ಯಾಯಾಲಯದ ಆದೇಶಕ್ಕೆ ನಾವೆಲ್ಲಾ ತಲೆ ಬಾಗಲೇ ಬೇಕು. ತನಿಖೆ ಆಗಬೇಕು, ತನಿಖೆ ಆಗಲಿ ತಪ್ಪೇನಿದೆ..? ಎಂದು ಜಮೀರ್ ಪ್ರಶ್ನಿಸಿದ್ದಾರೆ.

About The Author