ದಸರಾ ಗೋಲ್ಡ್ ಕಾರ್ಡ್ ದರ ಎಷ್ಟು? ಖರೀದಿ ಹೇಗೆ? ಸಂಪೂರ್ಣ ಮಾಹಿತಿ

ನಾಡಹಬ್ಬ ಮೈಸೂರು ದಸರಾ–2025ರ ಟಿಕೆಟ್‌ಗಳು ಹಾಗೂ ಗೋಲ್ಡ್ ಕಾರ್ಡ್‌ಗಳನ್ನು ಜಿಲ್ಲಾಡಳಿತ ಅಧಿಕೃತ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ನಡೆಯಲಿರುವ ದಸರಾ ಹಬ್ಬದಲ್ಲಿ ಅರಮನೆ, ಜಂಬೂಸವಾರಿ, ಪಂಜಿನ ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಎಲ್ಲಾ ಆಕರ್ಷಣೆಗಳನ್ನು ಕಣ್ತುಂಬಿಕೊಳ್ಳಲು ರೂ. 6500 ಮೌಲ್ಯದ ಗೋಲ್ಡ್ ಕಾರ್ಡ್ ಅನ್ನು ಪರಿಚಯಿಸಲಾಗಿದೆ.

ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಜಿ. ಲಕ್ಷ್ಮೀಕಾಂತ್‌ ರೆಡ್ಡಿ ಅವರ ಪ್ರಕಟಣೆಯ ಪ್ರಕಾರ, ಗೋಲ್ಡ್ ಕಾರ್ಡ್‌ ಖರೀದಿಸಿದವರಿಗೆ ಮೈಸೂರು ಅರಮನೆ, ಚಾಮುಂಡಿ ಬೆಟ್ಟ ಹಾಗೂ ಚಾಮರಾಜೇಂದ್ರ ಮೃಗಾಲಯಕ್ಕೆ ಒಂದು ಬಾರಿ ಉಚಿತ ಪ್ರವೇಶ ದೊರೆಯಲಿದೆ. ಜೊತೆಗೆ ಡ್ರೋನ್ ಶೋ, ಜಂಬೂಸವಾರಿ ಹಾಗೂ ಪಂಜಿನ ಕವಾಯತು ವೀಕ್ಷಣೆಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಇನ್ನು ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಟಿಕೆಟ್ 3500 ಹಾಗೂ ಪಂಜಿನ ಕವಾಯತು ಟಿಕೆಟ್‌ಗೆ 1500 ರೂಪಾಯಿ ನಿಗದಿ ಮಾಡಲಾಗಿದ್ದು, ಆನ್ಲೈನ್ ಮೂಲಕ ಸಹ ಪಡೆಯಬಹುದಾಗಿದೆ. ಸಾರ್ವಜನಿಕರಿಗೆ ದಸರಾ ಗೋಲ್ಡ್‌ ಕಾರ್ಡ್ ಮತ್ತು ಟಿಕೆಟ್‌ಗಳನ್ನು ಮೈಸೂರು ದಸರಾ ಅಧಿಕೃತ ಜಾಲತಾಣ mysoredasara.gov.in/ ಮೂಲಕ ಖರೀದಿಸಬಹುದಾಗಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author