Dharwad News: ಧಾರವಾಡ: ಧಾರವಾಡದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಗೃಹ ಸಚಿವ ಅಮೀತ್ ಶಾಗೆ ಶಿವಸೇನಾ ಮುಖಂಡ ಉದ್ಧವ ಠಾಕ್ರೆ ಅಹ್ಮದ ಶಾ ಎಂದು ಹೇಳಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಉದ್ಧವ ಠಾಕ್ರೆ ಹತಾಶರಾಗಿದ್ದಾರೆ. ಇವತ್ತು ಪಾಕಿಸ್ತಾನ ಹಾಗೂ ಚೈನಾಗೆ ಅತ್ಯಂತ ಗಟ್ಟಿಯಾಗಿ ನಿರ್ವಹಣೆ ಮಾಡಿದ್ದರೆ ಅದು ನರೇಂದ್ರ ಮೋದಿ. ಇವರ ಇಂಡಿ ಹಾಗೂ ಯುಪಿಎ ಕಾಲದಲ್ಲಿ ದೇಶಾದ್ಯಂತ ಭಯೋತ್ಪಾದನೆ ನಡೆಯುತಿತ್ತು. ಹುಬ್ಬಳ್ಳಿ ಹೈದರಾಬಾದ್ ಕೊಲ್ಕತ್ತಾ ಸೇರಿ ಹಲವು ಕಡೆ ಬಾಂಬ್ ಬ್ಲಾಸ್ಟ್ ಆಗಿವೆ. ಕಾಶ್ಮೀರದಲ್ಲಿ ಭಯೋತ್ಪಾದಕರು ಬಂದು ಅಟ್ಯಾಕ್ ಮಾಡಿ ಓಡಿ ಹೋಗ್ತಾರೆ. ಉಳಿದಂತೆ ಬಹಳ ದೊಡ್ಡ ಭಯೋತ್ಪಾದನೆ ಎಲ್ಲೂ ನಡೆಯುತ್ತಿಲ್ಲ.
ಇದರ ಅರ್ಥ ನಾವು ಬಿಟ್ಟು ಕುಳಿತಿಲ್ಲ, ಪಾಕಿಸ್ತಾನವನ್ನ ತಹಬದಿಯಲ್ಲಿ ಇಟ್ಟಿದ್ದೇವೆ. ಅಂತರಾಷ್ಟ್ರೀಯ ಅನುಗುಣವಾಗಿ ಒಂದು ಪ್ರಯತ್ನ ಮಾಡಿದ್ದೇವೆ.ಅವರಿಗೆ ಸರಿಯಾದ ಮಾಹಿತಿ ಹೇಳಿ, ತಿಳುವಳಿಕೆ ಹೇಳುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಯಾವಾಗ ಅವರು ಕೇಳಲ್ಲಾ ನಾವು ಏರ್ ಸ್ಟ್ರೈಕ್ ಮಾಡಿದ್ದೆವೆ. ನಿಮ್ಮ ಕಾಲದಲ್ಲಿ ನೀವು ಏರ್ ಸ್ಟ್ರೈಕ್ ಮಾಡಿದ್ರಾ..? ಠಾಕ್ರೆ ಬಾಲಿಶವಾಗಿ ಮಾತಾಡ್ತಾರೆ, ಹೀಗಾಗಿ ಅವರ ಮಾತಿಗೆ ಏನು ಉತ್ತರ ಕೊಡೋದು..? ಎಂದು ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಸೈನಿಕರ ಮೇಲೆ ಇತ್ತೀಚೆಗೆ ಹೆಚ್ಚು ದಾಳಿ ನಡೆದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಈ ಹಿಂದೆ ೧೦ ವರ್ಷಕ್ಕೆ ಹಾಗೂ ಯುಪಿಎ ಕಾಲಕ್ಕೆ ಇರಬಹುದು. ಬಹಳ ದೊಡ್ಡ ಪ್ರಮಾಣದ ಕಲ್ಲು ತೂರಾಟ ಹಾಗೂ ಭಯೋತ್ಪಾದನೆ ನಿಂತಿದೆ. ಅದನ್ನ ಕೂಡಾ ನಿಲ್ಲಿಸಲು ನಮ್ಮ ಸರ್ಕಾರ ಪ್ರತಿಬದ್ಧ ಇದೆ. ಇಡಿ ದೇಶದಲ್ಲಿ ಭಯೋತ್ಪಾದನೆ ನಿಂತು ಹೋಗಿದೆ. ನಕ್ಸಲರು ಅದು ಕೂಡಾ ಕಡಿಮೆಯಾಗಿದೆ ಎಂದು ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.