Monday, December 23, 2024

Latest Posts

ದೀಪ ಹಚ್ಚುವುದರಿಂದ ಗಂಡಾಂತರ ದೂರ ಮಾಡಬಹುದು..!

- Advertisement -

ಮಂಡ್ಯ : ಏಪ್ರಿಲ್ 5 ನೇ ತಾರೀಖಿ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪಅಥವಾ ಮೇಣದ ಬತ್ತಿ ಹಚ್ಚುವುದು ಅಥವಾ ಮೊಬೈಲ್ ಟಾರ್ಚನ್ನ 9 ನಿಮಿಷಗಳ ಕಾಲ ಆನ್ ಮಾಡಲು ಮೋದಿ ದೇಶದ ಪ್ರತಿಯೊಬ್ಬರಿಗು ಕರೆಕೊಟ್ಟಿರುವುದು ಸ್ವಾಗತಾರ್ಹ ಅಂತ ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಹೇಳಿದ್ದಾರೆ.. ಭಾರತೀಯ ಸಂಸ್ಕೃತಿಯ ಪ್ರಕಾರ ಸೂರ್ಯಾಸ್ತಮಾನವಾದ ಬಳಿಕ ದೀಪ ಹಚ್ಚುವ ಪರಂಪರೆ ಇದೆ. ಋಷಿಮುನಿಗಳು ದೀಪ ಹಚ್ಚುವುದರಿಂದ ಒಳ್ಳೆಯದಾಗುತ್ತೆ ಎಂದು ಹೇಳಿದ್ದಾರೆ.. ದೀಪ ಹಚ್ಚುವುದರಿಂದ ಏನನ್ನಾದರೂ ಮಾಡಬಹುದು, ದೇಶಕ್ಕೆ ಬಂದ ಗಂಡಾಂತರ ದೂರ ಮಾಡಬಹುದು ದೀಪಕ್ಕೆ ಆ ರೀತಿಯ ಶಕ್ತಿ ಇದೆ ಎಂದು ಭಾನುಪ್ರಕಾಶ್ ಶರ್ಮಾ ಗುರೂಜಿ ಹೇಳಿದ್ರು.

ಮೋದಿ ಹೇಳಿದ್ದು ಸರಿಯಾಗಿಯೇ ಇದೆ – ಗುರೂಜಿ

ಸಾಯಂಕಾಲ ದೀಪ ಹಚ್ಚಿದ್ರೆ ಕತ್ತಲಿನಿಂದ ಬೆಳಕಿಗೆ ಬರಬಹುದು. ಎಲ್ಲರೂ ಮನೆಯಲ್ಲಿದ್ದಾಗ ದೀಪ ಹಚ್ಚಿದರೆ ಒಬ್ಬರಿಗೊಬ್ಬರು ಇದ್ದೇವೆ ಎಂದು ಅರ್ಥ. ಸಮೂಹ ನಮ್ಮೊಟ್ಟಿಗೆ ಇದೆ ಎಂದು ಭಾವನೆ ಮೂಡುತ್ತದೆ ಎಲ್ಲರೂ ಇದನ್ನಅನುಸರಿಸಿ ಮೋದಿ ಕೊಟ್ಟಿರೆ ಕರೆ ಸರಿ ಇದೆ ಎಂದು ಭಾನುಪ್ರಕಾಶ್ ಶರ್ಮಾ ಗುರೂಜಿ ಹೇಳಿದ್ರು.

ಪ್ರವೀಣ್ ಕುಮಾರ್, ಕರ್ನಾಟಕ ಟಿವಿ, ಮಂಡ್ಯ

https://www.youtube.com/watch?v=97fh1DThfbI
- Advertisement -

Latest Posts

Don't Miss