www.karnatakatv.net :ತುಮಕೂರಿನಲ್ಲಿ ನಡೆದ ಮಹಿಳೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಅಂತ ಆಗ್ರಹಿಸಿ ಜೆಡಿಎಸ್ ಇಂದು ಪ್ರತಿಭಟನೆ ನಡೆಸಿತು.
ರಾಜ್ಯವನ್ನೇ ತಲ್ಲಣಗೊಳಿಸಿದ ಮೈಸೂರು ಯುವತಿ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳೇನೋ ಪತ್ತೆಯಾದ್ರು. ಆದ್ರೆ ತುಮಕೂರು ತಾಲೂಕಿನ ಹಿರೇಹಳ್ಳಿ ಛೋಟಾಸಾಬರ ಪಾಳ್ಯ ಬಳಿಯ ಚಿಕ್ಕಹಳ್ಳಿಯ 35 ವರ್ಷದ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನ ಈವರೆಗೂ ಬಂಧಿಸಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಶಾಸಕ ಡಿ.ಸಿ ಗೌರಿಶಂಕರ್ ನೇತೃತ್ವದಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸಿತು. ಮೊನ್ನೆ ಗ್ರಾಮದ ಮಹಿಳೆ ದನ ಮೇಯಿಸಲೆಂದು ಮನೆಯಿಂದ ಹೊರಟಿದ್ರು. ಆದ್ರೆ ಸಂಜೆಯಾದ್ರೂ ಮನೆಗೆ ವಾಪಸ್ಸಾಗಿರಲಿಲ್ಲ. ಆದ್ರೆ ಸಂಜೆ ಬಳಿಕ ಆಕೆಯ ಶವ ಬೆಟ್ಚವೊಂದರ ಬಳಿ ಪತ್ತೆಯಾಗಿತ್ತು.
ಇನ್ನು ಈ ವೇಳೆ ಮಾತನಾಡಿದ ಶಾಸಕ ಗೌರಿಶಂಕರ್, ಸರ್ಕಾರ ಮೈಸೂರು ಯುವತಿ ರೇಪ್ ಕೇಸ್ ಗೆ ಕೊಟ್ಟಿರೋ ಪ್ರಾಮುಖ್ಯತೆಯನ್ನ ಈ ಪ್ರಕರಣಕ್ಕೂ ನೀಡಬೇಕು ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೆ ತುಮಕೂರು ಗ್ರಾಮಾಂತರದಲ್ಲಿ ನಡೆಯುತ್ತಿರೋ ಎರಡನೇ ರೇಪ್ ಅಂಡ್ ಮರ್ಡರ್ ಕೇಸ್ ಆಗಿದೆ, ಹೀಗಾಗಿ 15 ದಿನದೊಳಗಾಗಿ ರೇಪ್ ಅಂಡ್ ಮರ್ಡರ್ ಕೇಸ್ ಆರೋಪಿಗಳ ಪತ್ತೆ ಹಚ್ಚದಿದ್ರೆ ಉಗ್ರ ಹೋರಾಟ ನಡೆಸೋದಾಗಿ ಇದೇ ವೇಳೆ ಗೌರಿಶಂಕರ್ ಎಚ್ಚರಿಕೆ ನೀಡಿದ್ರು.
ಬಳಿಕ ಈ ಬಗ್ಗೆ ತುಮಕೂರು ಎಸ್ಪಿಗೆ ಜೆಡಿಎಸ್ ವತಿಯಿಂದ ಮನವಿ ಕೂಡ ಸಲ್ಲಿಸಲಾಯ್ತು . ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಪ್ರಕರಣಕ್ಕೆ ಸಂಭಂಧಿಸಿದಂತೆ ಈಗಾಗಲೇ ಮೂರು ತಂಡಗಳನ್ನ ರಚಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ. ಶೀಘ್ರವೇ ಆರೋಪಿಗಳನ್ನ ಬಂಧಿಸಲಾಗುತ್ತೆ, ಹಾಗೆಯೇ ಚಾರ್ಜ್ ಶೀಟ್ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ರು..
ದರ್ಶನ್ ಕೆ.ಡಿ.ಆರ್., ಕರ್ನಾಟಕ ಟಿವಿ -ತುಮಕೂರು