Monday, July 22, 2024

Latest Posts

ಇವತ್ತು ದರ್ಶನ್‌ ಬ್ಯಾನ್ ಮಾಡಕ್ಕಾಗಲ್ಲಾ ಅಂದ್ರೆ ಅಂದು ನಿಖಿತಾರನ್ನು ಹೇಗೆ ಬ್ಯಾನ್ ಮಾಡಿದ್ರಿ..?: ನಟಿ ರಮ್ಯಾ

- Advertisement -

Sandalwood News: ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಸದ್ಯ ಪೋಲಿಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಬಗ್ಗೆ ಸ್ಟಾರ್ ನಟ-ನಟಿಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಮತ್ತೆ ಸ್ಯಾಂಡಲ್ ವುಡ್​ನ ಮೋಹಕ ತಾರೆ ರಮ್ಯಾ ಅವರು ದರ್ಶನ್ ಹೇಯ ಕೃತ್ಯದ ಬಗ್ಗೆ ಕಿಡಿಕಾರಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ದರ್ಶನ್ ಕ್ರೌರ್ಯದ ಘಟನೆಯನ್ನು ಖಂಡಿಸಿರುವ ರಮ್ಯಾ, ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಸ್ಯಾಂಡಲ್ ವುಡ್ ಸಿನಿತಾರೆಯರು ದರ್ಶನ್ ಬಗ್ಗೆ ಮೌನವಾಗಿರುವುದಕ್ಕೆ ಬೇಸರ ಹೊರಹಾಕಿರುವ ಅವರು, ಕನ್ನಡ ಸಿನಿಮಾ ತಾರೆಯರು ಘಟನೆ ಬಗ್ಗೆ ಮಾತನಾಡಲು ಹೆದರುತ್ತಿದ್ದಾರೆ ಎನಿಸುತ್ತಿದೆ, ಅದಕ್ಕೆ ಸುಮ್ಮನಿದ್ದಾರೆ. ದರ್ಶನ್ ಬಗ್ಗೆ ಆರೋಪ ಕೇಳಿ ಬಂದಿರೋದು ಇದೆ ಮೋದಲೇನಲ್ಲ. ಅವರ ಫಾರ್ಮ್ ಹೌಸ್​ನಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಗೂ ಸಮಸ್ಯೆ ಆಗಿದೆ. ಈಗ ಅದು ಬೆಳಕಿಗೆ ಬಂದಿದೆ. ಆತ ಬಹಳ ನೊಟೋರಿಯಸ್ ಮತ್ತು ಜನರನ್ನು ಬೈಯುವುದನ್ನು ಸಾಕಷ್ಟು ನೋಡಿದ್ದೇವೆ ಎಂದು ಹೇಳಿದ್ದಾರೆ.

ದರ್ಶನ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಇತರೆ ತಾರೆಯರನ್ನ ನಿಂದಿಸುತ್ತಾರೆ. ನಾನು ಈ ಹಿಂದೆಯೇ ಈ ಬಗ್ಗೆ ಹೇಳಿದ್ದೆ. ಅವರ ಫ್ಯಾನ್ಸ್ ಕ್ಲಬ್​ಗಳು ಕಲಾವಿದರನ್ನು, ಅವರ ಮಕ್ಕಳನ್ನು, ನನ್ನನ್ನು ಕೂಡ ಟ್ರೋಲ್ ಮಾಡಿದ್ದರು. ಇಂತಹ ಇಮೇಜ್ ಇದ್ದಾಗ ಯಾರೂ ಕೂಡ ಅಂತಹವರ ಬಗ್ಗೆ ಮಾತನಾಡಲ್ಲ. ಏಕೆಂದರೆ ತಮ್ಮ ಚಿತ್ರ ಬಿಡುಗಡೆ ಆಗುವಾಗ ತೊಂದರೆ ಕೊಡುತ್ತಾರೆ. ಹೋದಲ್ಲಿ ಬಂದಲ್ಲಿ ಕೂಗಾಡಿ ಕಿರುಕುಳ ನೀಡುತ್ತಾರೆ. ಅದಕ್ಕೆ ಚಿತ್ರರಂಗದಲ್ಲಿ ಯಾರೂ ಕೂಡ ಮಾತನಾಡುತ್ತಿಲ್ಲ ಅನಿಸುತ್ತಿದೆ ಎಂದಿದ್ದಾರೆ.

ದರ್ಶನ್ ವಿರುದ್ದ ಯಾವುದೇ ಚಾರ್ಜ್ ಶೀಟ್ ಆಗಿಲ್ಲ. ಹಾಗಾಗಿ ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದು ಫಿಲ್ಮ್ ಚೇಂಬರ್ ಹೇಳಿದ್ದಾಗ ನನ್ನ ಗಮನಕ್ಕೆ ಬಂತು. ಆದರೆ ಅದೇ ಜನ ಈ ಹಿಂದೆ ನಿಖಿತಾ ತುಕ್ರಾಲ್ ಅವರನ್ನ ಬ್ಯಾನ್ ಮಾಡಿದ್ದರು. ಆಗ ಆಕೆಯ ವಿರುದ್ಧವೂ ಯಾವುದೇ ದೂರು ದಾಖಲಾಗಿರಲಿಲ್ಲ. ಈ ಹಿಂದೆ ಹಲವರ ವಿಚಾರದಲ್ಲಿ ಹೀಗೆ ಆಗಿದೆ. ಆದರೆ ದರ್ಶನ್ ವಿಚಾರದಲ್ಲಿ ಬ್ಯಾನ್ ಪ್ರಕ್ರಿಯೆ ಯಾಕೆ ಆಗುತ್ತಿಲ್ಲಎಂದು ರಮ್ಯಾ ಪ್ರಶ್ನಿಸಿದ್ದಾರೆ.
2011ರಲ್ಲಿ ದರ್ಶನ್ ಪ್ರಕರಣದಲ್ಲೇ ನಟಿ ನಿಖಿತಾರನ್ನು ನಿರ್ಮಾಪಕರ ಸಂಘ 3 ವರ್ಷ ಬ್ಯಾನ್ ಮಾಡಿತ್ತು.

ದರ್ಶನ್ ಜಂಟಲ್ ಮನ್. ಆದರೆ ನಿಖಿತಾ ದರ್ಶನ್ ಬಾಳಲ್ಲಿ ಬಿರುಗಾಳಿಯನ್ನು ಎಬ್ಬಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ನಿರ್ಮಾಪಕರ ಸಂಘದ ನಡೆಯನ್ನು ಹಲವರು ವಿರೋಧಿಸಿದ್ದರು. ಹಿರಿಯ ನಿರ್ಮಾಪಕಿ ಪಾರ್ವತಮ್ಮ ಹಾಗೂ ರಮ್ಯಾ ಅಂದು ನಿಖಿತಾ ಪರವಾಗಿ ನಿಂತಿದ್ದರು. ನಂತರ ನಿಖಿತಾ ಅವರ ಮೇಲಿನ ಬ್ಯಾನ್ ಹಿಂಪಡೆಯಲಾಗಿತ್ತು.

ಒಟ್ಟಾರೆಯಾಗಿ ದರ್ಶನ್ ಕೊಲೆ ಆರೋಪದ ಬಗ್ಗೆ ಹಾಗೂ ಚಿತ್ರರಂಗದಿಂದ ದಾಸನ ಬ್ಯಾನ್ ಬಗ್ಗೆ ಪ್ರತಿಕ್ರಿಯೆ ನೀಡಲು ಕನ್ನಡ ಚಿತ್ರರಂಗದ ಸ್ಟಾರ್ ನಟರು ಹಿಂದೇಟು ಹಾಕುತ್ತಿರುವಾಗ, ರಮ್ಯಾ ಮಾತ್ರ ಯಾವುದೇ ಅಳುಕಿಲ್ಲದೇ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿರುವುದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗುತ್ತಿದ್ದಾರೆ.

- Advertisement -

Latest Posts

Don't Miss