ಹೊಸ ವರ್ಷದಲ್ಲಿ ಮೊದಲಿಗೆ ಬರುವ ಏಕಾದಶಿಯೇ ವೈಕುಂಠ ಏಕಾದಶಿ , ಧನುರ್ಮಾಸದಲ್ಲಿ ಬರುವ ಏಕಾದಶಿಯನ್ನು ಮುಕೊಟ್ಟಿ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ , ಹಿಂದೂ ಕ್ಯಾಲೆಂಡರ್ ನಲ್ಲಿ ಪ್ರತಿತಿಂಗಳು ಏಕಾದಶಿ ಬರುತ್ತದೆ , ಆದರೆ ಧನುರ್ಮಾಸದಲ್ಲಿ ಬರುವ ಏಕಾದಶಿಯನ್ನು ಮುಕೊಟ್ಟಿ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ ,2023ರಲ್ಲಿ ವೈಕುಂಠ ಏಕಾದಶಿ ಯಾವ ದಿನ ಬಂದಿದೆ, ಈ ವೈಕುಂಠ ಏಕಾದಶಿಯನ್ನು ಯಾವ ಕಾರಣಕ್ಕಾಗಿ ಆಚರಿಸಬೇಕು..? ವೈಕುಂಠ ಏಕಾದಶಿಯ ಸಮಯ ಯಾವಾಗ ಹಾಗೂ ಯಾವೆಲ್ಲ ನಿಯಮಗಳನ್ನು ಆಚರಿಸಬೇಕು, ಈ ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ .
ಮನುಷ್ಯರು ಮಾಡಿರುವ ಪಾಪಕರ್ಮಗಳನ್ನು ತೊಲಗಿಸಿ ಸ್ವರ್ಗ ಪ್ರಾಪ್ತಿಯಾಗಿ ಮುಕ್ತಿ ಸಿಗಲಿ ಎನ್ನುವುದು , ಪ್ರತಿಯೊಬ್ಬರ ಬಯಕೆಯಾಗಿರುತ್ತದೆ ಈ ಕಾರಣಕ್ಕಾಗಿ ಪ್ರತಿಯೊಬ್ಬರೂ ವೈಕುಂಠ ಏಕಾದಶಿಯ ಆಚರಣೆಯನ್ನು ಮಾಡುತ್ತಾರೆ ,ಈ ವೈಕುಂಠ ಏಕಾದಶಿಯ ದಿನದಂದು , ಮಹಾವಿಷ್ಣು ಮುಕೊಟ್ಟಿ ದೇವರುಗಳೊಡನೆ ಭೂಲೋಕಕ್ಕೆ ಬರುತ್ತಾರೆ ಎಂಬ ಪ್ರತೀತಿ ಇದೆ ,ಆ ದಿನ ಯಾರು ಭಕ್ತಿಯಿಂದ ಪೂಜೆ ಮಾಡುತ್ತಾರೋ ಅವರಿಗೆ ಸದ್ಗತಿ ,ಜೊತೆಗೆ ಎಲ್ಲ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ ಎನ್ನುವ ನಂಬಿಕೆ ಇದೆ . ವೈಕುಂಠ ಏಕಾದಶಿಯನ್ನು ಶ್ರದ್ದಾ ಭಕ್ತಿಯಿಂದ ಉಪವಾಸ ಮಾಡಿ ಆಚರಣೆ ಮಾಡಿದರೆ ವಿಷ್ಣುವಿನ ಆಶೀರ್ವಾದ ಸಿಗುತ್ತದೆ , ತಿಂಗಳಲ್ಲಿ ಬರುವ ಏಕಾದಶಿಯನ್ನು ಮಾಡದೀರುವವರು ಈ ಒಂದು ದಿನ ಶ್ರದ್ದಾ ಭಕ್ತಿಯಿಂದ ಪೂಜೆ ಮಾಡಿದರೆ, ಸಕಲ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತದೆ ,ಈ ದಿನ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂದು ಹಲವರು ನಂಬುತ್ತಾರೆ. ಈ ಮಂಗಳಕರ ದಿನದಂದು ಉಪವಾಸ ಮಾಡುವುದು ಸಾವಿರಾರು ವರ್ಷಗಳ ತಪಸ್ಸಿಗೆ ಸಮಾನವೆಂದು ನಂಬಲಾಗಿದೆ. ಈ ಸಂದರ್ಭದಲ್ಲಿ ವೈಕುಂಠ ಏಕಾದಶಿ ಉಪವಾಸ ತಿಥಿ, ಪೂಜಾ ವಿಧಾನ ಶುಭ ಮುಹೂರ್ತ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ.
ಧನುರ್ಮಾಸದ ಏಕಾದಶಿ 2023ರಲ್ಲಿ ಜನವರಿ 2ನೇ ತಾರಿಖು ಸೋಮವಾರ, ಆಚರಿಸಲಾಗುತ್ತದೆ ,ಏಕಾದಶಿ ಪ್ರಾಂಭವಾಗುವ ಸಮಯ ಜನವರಿ 1ನೇ ತಾರಿಖು ಸಾಯಂಕಾಲ7:11 ನಿಮಿಷಕ್ಕೆ ಶುರುವಾಗುತ್ತದೆ ಹಾಗೂ 2ನೇ ತಾರೀಖು ಮಂಗಳವಾರ ರಾತ್ರಿ 8:23ಕ್ಕೆ ಮುಗಿಯುತ್ತದೆ, ಹಾಗಾಗಿ ಏಕಾದಶಿಯ ಉಪವಾಸ ಆಚರಿಸುವವರು ಸೋಮವಾರ ಸಾಯಂಕಾಲ 7:11 ಕ್ಕೆ ಶುರು ಮಾಡಿದರೆ ಮರುದಿನ ಮಂಗಳವಾರ ,ರಾತ್ರಿ 8:23ಕ್ಕೆ ಮುಗಿಯುತ್ತದೆ .
ಪೂಜಾ ವಿಧಾನ..
ವೈಕುಂಠ ಏಕಾದಶಿಯಂದು ಸೂರ್ಯೋದಯಕ್ಕೂ ಮುನ್ನವೇ ಎದ್ದು ಸ್ನಾನ ಮಾಡಬೇಕು. ಉಪವಾಸವನ್ನು ಪ್ರಾರಂಭಿಸಿ ತುಪ್ಪದ ದೀಪವನ್ನು ಬೆಳಗಿಸಿ ನಿಮ್ಮ ಮನೆಯ ಪೂಜಾ ಮಂದಿರದಲ್ಲಿರುವ ಭಗವಾನ್ ವಿಷ್ಣುವಿನ ಚಿತ್ರ ಅಥವಾ ವಿಗ್ರಹದ ಮುಂದೆ ಧ್ಯಾನ ಮಾಡಿ. ವಿಷ್ಣು ಪೂಜೆ ಮಾಡುವಾಗ ತುಳಸಿ, ಹೂವುಗಳು, ಗಂಗಾಜಲ ಮತ್ತು ಪಂಚಾಮೃತವನ್ನು ಸೇರಿಸಬೇಕು. ಮಹಾವಿಷ್ಣುವನ್ನು ಪೂಜಿಸುತ್ತಾ ವಿಷ್ಣು ಸಹಸ್ತ್ರನಾಮವನ್ನು ಹೇಳಿಕೊಳ್ಳಬೇಕು ,ಯಾವುದೇ ಕಾರಣಕ್ಕೂ ಉಪವಾಸ ಮಾಡುವಾಗ ಅನ್ನವನ್ನು ಸೇವಿಸಬಾರದು ,ಬದಲಿಗೆ ಫಲಾಹಾರಗಳನ್ನು ಸೇವಿಸಬೇಕು ಅಥವಾ ಹಾಲನ್ನು ಸೇವಿಸಬಹುದು , ಆ ದಿನ ಮಹಾ ವಿಷ್ಣು ಅವತಾರದ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯಬೇಕು .ಈ ದಿನ ದೇವಾಲಯಗಳಲ್ಲಿ ವೈಕುಂಠ ದ್ವಾರ ಎಂದು ಸಿದ್ದ ಮಾಡಿರುತ್ತಾರೆ ಆ ದ್ವಾರದ ಕೆಳಗೆ ಹೋಗುವುದು ನಿಮಗೆ ತುಂಬಾ ಒಳ್ಳೆಯದಾಗುತ್ತದೆ. ಸಕಲ ಇಷ್ಟಾರ್ಥ ಗಳು ಸಿದ್ಧಿಯಾಗುತ್ತದೆ .ಏಕಾದಶಿಯ ಮರುದಿನದಂದು ನಿರ್ಗತಿಕರಿಗೆ ಅನ್ನವನ್ನು ನೀಡಬೇಕು.
ಏಕಾದಶಿ ಎಂದರೆ..
ಏಕಾದಶಿ ಎಂದರೆ ಐದು ಕರ್ಮೇಂದ್ರಿಯಗಳು ,ಏಕಾದಶಿಯ ಅರ್ಥ ಐದು ಇಂದ್ರಿಯಗಳು ಮತ್ತು ಮನಸ್ಸಿನ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡು ವ್ರತ ದೀಕ್ಷೆಯನ್ನು ಮಾಡುವುದು. ಹಾಗೆಯೇ, ಉಪವಾಸ ಎಂದರೆ ಕೇವಲ ಆಹಾರದಿಂದ ದೂರವಿರುವುದು ಅಲ್ಲ ಉಪ+ಅವಸಂ ಎಂದರೆ ಅನುನಿತ್ಯ ದೇವರನ್ನು ಸ್ಮರಿಸುವುದೇ ಉಪವಾಸದ ಉದ್ದೇಶ.
ವೈಕುಂಠ ಏಕಾದಶಿಯಂದು ಈ ದೇವಾಲಯಗಳಲ್ಲಿ ವಿಶೇಷ ಪೂಜೆ..
ಕಲಿಯುಗದ ಪ್ರತ್ಯಕ್ಷ ದೇವರಾಗಿರುವ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಎಲ್ಲಾ ಭಕ್ತರಿಗೆ ವೈಕುಂಠ ದ್ವಾರವನ್ನು ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.
ಮುಂದಿನ ವರ್ಷ 2023 ರಲ್ಲಿ ಯಾವಾಗ ಮತ್ತು ಎಷ್ಟು ಸೂರ್ಯ ಮತ್ತು ಚಂದ್ರ ಗ್ರಹಣಗಳು ಸಂಭವಿಸುತ್ತವೆ…
ಬ್ರಹ್ಮ, ,ವಿಷ್ಣು ,ಮತ್ತು ಮಹೇಶ್ವರರು ಒಟ್ಟಿಗೆ ಇರುವ ಏಕೈಕ ದೇವಾಲಯ ಎಲ್ಲಿದೆ ಗೊತ್ತಾ..?