Sunday, December 22, 2024

Latest Posts

ಮಂಡ್ಯ ಜನರ ಗೋಳು ಕೇಳೋದ್ಯಾರು..?

- Advertisement -

ಕರ್ನಾಟಕ ಟಿವಿ : ಮಂಡ್ಯ ಅಂದ್ರೆ ಇಂಡಿಯಾ ಅಂತ ಜಿಲ್ಲೆಯ ಜನ ಹೆಮ್ಮೆಯಿಂದ ಹೇಳಿಕೊಳ್ತಾರೆ.. ಯಾಕಂದ್ರೆ ಇಲ್ಲಿ ವ್ಯವಸಾಯ ಮಾಡೋಕೂ ಸೈ.. ರಾಜಕಾರಣ ಮಾಡೋಕೂ ಸೈ.. ಪ್ರೀತಿಯಿಂದ ಸಂಬಂಧವನ್ನ ಬೆಳೆಸೋಕೂ ಜನ ಸೈ  ಅಂತಾರೆ.. ಅನ್ಯಾಯವಾದ್ರೆ ಮಂಡ್ಯದ ಜನ ಬೀದಿಗಿಳಿದು ಸಮರ ಸಾರ್ತಾರೆ.. ಮಂಡ್ಯ ಜಿಲ್ಲೆಯ ಜೀವನಾಡಿ ಕಾವೇರಿ, ಜನ ಮುಖ್ಯ ಕಸುಬು ವ್ಯವಸಾಯ.. ಮುಖ್ಯ ಬೆಳೆ ಕಬ್ಬು.. ರೈತ ಒಂದಷ್ಟು ಕಾಸು ಕಾಣಕ್ಬೇಕು ಅಂದ್ರೆ ಕಬ್ಬಿನ ಕಡೆ ತಿರುಗಿ ನೋಡ್ತಾನೆ.. ಆದ್ರೆ, ರೈತ ಬೆಳೆಯುವ ಕಬ್ಬನ ಅರೆಯಲು ಮೈಷುಗರ್ ಫ್ಯಾಕ್ಟರಿ ರೆಡಿ ಇಲ್ಲ.. ಆಡಳಿತಕ್ಕೆ ಬರುವ ಸಕರ್ಾರ ಮಂಡ್ಯ ಜನರನ್ನ ಯಾಮಾರಿಸುತ್ತಲೆ ಬಂದಿದೆ.. ಇದೀಗ ಬಿಜೆಪಿ ಸರ್ಕಾರದ  ರದ ಸರದಿ.. ಮೈಸೂರು ಕಾರ್ಖಾನೆ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆಗಳನ್ನ ಜೂನ್ ವೇಳೆಗೆ ಆರಂಭ ಮಾಡ್ತೇವೆ.. ಜನವರಿಂದ ಕಾರ್ಖಾನೆಗಳ ಪುನಶ್ಚೇತನ ಕಾರ್ಯ ಆರಂಭಿಸೋದಾಗಿ ಸಚಿವ ಸಿ.ಟಿ ರವಿ ಆಶ್ವಾಸನೆ ಕೊಟ್ಟಿದ್ರು.. ಸಚಿವರು ಆಶ್ವಾಸನೆ ಕೊಟ್ಟಿದ್ದಕ್ಕೆ ನೂರಾರು ರೈತರು ಸಂಸದೆ ಸುಮಲತಾ  ಸಹ ಸಾಕ್ಷಿ.. ಆದ್ರೆ, ಸಚಿವರು ಹೇಳಿದಂತೆ ಜನವರಿಯಿಂದ ಕಾಖರ್ಾನೆಗಳ ಪುನಶ್ಚೇತನ ಆರಂಭವಾಗಿಲ್ಲ.. ಹೀಗಾಗಿಗೆ ಜೂನ್ ಗೆ ಕಾರ್ಖಾನೆಗಳು ಪುನರ್ ಆರಂಭವಾಗೋದು ಡೌಟ್ ಇದೆ,.. ಈ ಹಿನ್ನೆಲೆ ಮಂಡ್ಯ ಜಿಜಲ್ಲೆಯ ರೈತರು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ.. ಸಂಸದೆ ಸುಮಲತಾ ಈ ಕೂಡಲೇ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿ ರೈತರ ಕಬ್ಬು ಅರೆಯಲು ಕಾರ್ಖಾನೆ ಆರಂಭಿಸುವಂತೆ ಒತ್ತಾಯ ಮಾಡುವಂತೆ ರೈತರು ಮನವಿ ಮಾಡ್ತಿದ್ದಾರೆ..

ನಿಮ್ಮ ಪ್ರಕಾರ ಸರ್ಕಾರದ  ಈ ನಿರ್ಲಕ್ಷ್ಯಕ್ಕೆ ನಿಮ್ಮ ಅಭಿಪ್ರಾಯ ಏನು..? ಜೊತೆಗೆ ರೈತರು ಕಬ್ಬಿಗೆ ಪರ್ಯಾಯವಾಗಿ ಯಾವ ಲಾಭದಾಯಕ ಬೆಳೆ ಬೆಳೆಯಬಹುದು..? ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ..

https://www.youtube.com/watch?v=C57yBAuVEb0
- Advertisement -

Latest Posts

Don't Miss