ಸಿದ್ದರಾಮಯ್ಯನವರು ಹಿಂದೆಯೂ ಲಿಂಗಾಯತ – ವೀರಶೈವ ಸಮುದಾಯವನ್ನು ವಿಭಜಿಸಲು ಪ್ರಯತ್ನಿಸಿದ್ದರು. ಅದನ್ನು ಹಳ್ಳಿಗಳವರೆಗೂ ವ್ಯಾಪಿಸುವಂತೆ ಮಾಡಿದರು. ಇದೀಗ ಅವರು ಎಲ್ಲ ಜಾತಿಗಳನ್ನು ವಿಭಜಿಸಲು ಮುಂದಾಗಿದ್ದಾರೆ ಅಂತ ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ಆರೋಪ ಮಾಡಿದ್ದಾರೆ.
ತನ್ನ ಆಡಳಿತ ವಿಫಲವಾಗಿದಾಗಲೆಲ್ಲಾ ಜಾತಿಯ ರಾಜಕಾರಣಕ್ಕೆ ಮೊರೆ ಹೋಗುವ ಹೊಂದಿದ್ದಾರೆ ಎಂಬುದಾಗಿ ಟೀಕಿಸಿದರು. ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯದಲ್ಲಿ ಇರುವ ಪ್ರಾಕೃತಿಕ ಪಂಗಡಗಳನ್ನು ಬಿಟ್ಟು ಇದೀಗ ಹೊಸದಾಗಿ ‘ಒಕ್ಕಲಿಗ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ವೀರಶೈವ ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್, ಗಾಣಿಗ ಕ್ರಿಶ್ಚಿಯನ್ ಎಲ್ಲಿಂದ ಬಂದ್ರು? ಈ ಮೂಲಕ ಇತರ ಸಮುದಾಯಗಳಿಗೆ ಮೀಸಲಾದ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರ ಸಿದ್ದರಾಮಯ್ಯನವರದ್ದು ಎಂದು ಗಂಭೀರ ಆರೋಪಗಳನ್ನು ಹೊರಹಾಕಿದರು.
ಶೋಭಾ ಕರಂದ್ಲಾಜೆ ಅವರು ಇದು ಹಿಂದೂ ಸಮಾಜವನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಂಗಡಿಸುವ ಕೃತ್ಯವಾಗಿದೆ. ಬ್ರಿಟಿಷರು ಜಾರಿಗೆ ತಂದ ‘ವಿಭಜಿಸಿ ಆಳುವ’ ನೀತಿಯನ್ನೇ ಸಿದ್ದರಾಮಯ್ಯ ಸರ್ಕಾರ ಅನುಸರಿಸುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಡಿದರು.