ಕ್ಯಾಪ್ಟನ್ ರೂಮಲ್ಲಿ ಗಿಲ್ಲಿ : ಕ್ಯಾಪ್ಟನ್ ಆಗೋದ್ಯಾವಾಗ ?

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮಾಡಿದ ಹೊಸ ತಪ್ಪು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕ್ಯಾಪ್ಟನ್ ಆಗುವ ಅರ್ಹತೆ ಇರದೇ ಇದ್ದರೂ ಕ್ಯಾಪ್ಟನ್ ರೂಂ ಬಳಸಲು ಹೋಗಿರುವುದು ಸ್ಪಷ್ಟವಾದ ನಿಯಮ ಉಲ್ಲಂಘನೆ. ಪ್ರೇಕ್ಷಕರು ಇದನ್ನು ಗಮನಿಸಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿಗೆ ತರಾಟೆ ತೆಗೆದುಕೊಳ್ಳಲಾಗುತ್ತಿದೆ. ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರಿಂದ ಈ ವಿಷಯಕ್ಕೆ ತಕ್ಕ ಪಾಠ ಸಿಗಬಹುದು ಅನ್ನೋ ನಿರೀಕ್ಷೆ ಇದೆ.

ಗಿಲ್ಲಿ ನಟ ಕಳೆದ ಎರಡು ತಿಂಗಳುಗಳಿಂದ ಮನೆಯಲ್ಲಿ ಗಮನಾರ್ಹ ಆಟವಾಡುತ್ತಿದ್ದರೂ, ಕೆಲವೊಮ್ಮೆ ಅವರ ಆಟ ಹಳಿ ತಪ್ಪುವುದು ಹೊಸದೇನಲ್ಲ. ಸುದೀಪ್ ಬುದ್ಧಿ ಹೇಳಿದಾಗ ಮಾತ್ರ ತಿದ್ದಿಕೊಳ್ಳುವ ಗಿಲ್ಲಿ, ಮನೆಯೊಳಗಿನವರ ಮಾತುಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡೋದಿಲ್ಲ. ಅವರ ಈ ಸ್ವಭಾವ ಮತ್ತೆ ಪ್ರಶ್ನೆಗಳಿಗೆ ಕಾರಣವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿಗೆ ದೊಡ್ಡ ಫ್ಯಾನ್‌ಬೇಸ್ ರೂಪಗೊಂಡಿದೆ. ಅವರು ಏನೇ ಮಾಡಿದರೂ ಸರಿ ಎನ್ನುವ ಗುಂಪು ಬೆಂಬಲದಲ್ಲಿದೆ. ಆದರೆ ಮನೆಯೊಳಗೆ ಹೇಳಿದ ತಪ್ಪನ್ನು ಒಪ್ಪಿಕೊಳ್ಳದೆ ಹಠಾತಿಯಾಗಿ ವರ್ತಿಸುವ ಗಿಲ್ಲಿ, ಸುದೀಪ್ ಬರುವ ವೀಕೆಂಡ್‌ಗೆ ಮಾತ್ರ ತಲೆಬಾಗುತ್ತಾರೆ ಎಂಬ ಮಾತು ಈಗ ಎಲ್ಲೆಡೆ ಹರಿದಾಡುತ್ತಿದೆ.

ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಗೆದ್ದು ಸ್ಪಂದನಾ ಹಾಗೂ ಅಭಿಷೇಕ್ ಡಬಲ್ ಕ್ಯಾಪ್ಟನ್‌ಗಳಾಗಿ ಆಯ್ಕೆಯಾದ ನಂತರ ಗಿಲ್ಲಿ ವೈಸ್ ಕ್ಯಾಪ್ಟನ್ ಅನ್ನೋ ನೆಪದಲ್ಲಿ ಕ್ಯಾಪ್ಟನ್ ರೂಂ ಪ್ರವೇಶಿಸಿ ಬೆಡ್ ಮೇಲೆ ಮಲಗಿದ್ದೇ ವಿವಾದಕ್ಕೆ ತಲೆದೋರಿಸಿದೆ. ಗಿಲ್ಲಿ ಮಾಡಿದ ಈ ನಡೆ ಮತ್ತೊಂದು ಎಚ್ಚರಿಕೆ ಗಂಟೆಯಾಗಿದ್ದು, ವೀಕೆಂಡ್ ಎಪಿಸೋಡ್‌ನಲ್ಲಿ ಏನಾಗುತ್ತದೋ ಎನ್ನುವುದು ಈಗ ಕುತೂಹಲ…..

ವರದಿ :ಗಾಯತ್ರಿ ಗುಬ್ಬಿ

About The Author