Tuesday, August 5, 2025

Latest Posts

ಪುನೀತ್ ಪಾರ್ಥಿವ ಶರೀರ ನೋಡಿದಾಗಲೆಲ್ಲಾ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ..!

- Advertisement -

www.karnatakatv.net: ನಟ ಪುನೀತ್ ರಾಜ್ ಕುಮಾರ್ ಅಗಲಿಕೆಗೆ ಇಡೀ ರಾಜ್ಯ ಕಣ್ಣೀರ ಕಡಲ್ಲಿ ಮುಳುಗಿದೆ. ಇನ್ನು ತಮ್ಮ ಪ್ರೀತಿಯ ಸಹೋದರನನ್ನ ಕಳೆದುಕೊಂಡ ಶಿವರಾಜ್ ಕುಮಾರ್ ದಿಗ್ಭ್ರಾಂತರಾಗಿದ್ದಾರೆ. ಧೈರ್ಯದಿಂದಿರುವoತೆ ಕಂಡರೂ ಶಿವಣ್ಣ ಪುನೀತ್ ಪಾರ್ಥಿವ ಶರೀರ ನೋಡಿದಾಗಲೆಲ್ಲಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

ಇನ್ನು ಶಿವಣ್ಣ ಮತ್ತು ಅಪ್ಪು ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತು ಸಹೋದರರು ಅಂದ್ರೆ ಹೀಗಿರಬೇಕು ಅಂತ ಮಾದರಿಯಾಗಿದ್ರು. ಸದ್ಯ ಇಡೀ ಕುಟುಂಬವನ್ನು ತೊರೆದು ಹೊರಟಿರುವ ಪುನೀತ್ ರಾಜ್ ಕುಮಾರ್ ಬಾರದ ಲೋಕಕ್ಕೆ ಸಾಗಿದ್ದಾರೆ. ಇನ್ನು ಅಪ್ಪು ಅಂತ್ಯ ಸಂಸ್ಕಾರ ನಾಳೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಲಿದೆ.

- Advertisement -

Latest Posts

Don't Miss