Gruha Lakshmi Scheme: Where is Rs 5000 Crore? ಗೃಹಲಕ್ಷ್ಮಿ ಹಣ ಹೋಗಿದ್ದೆಲ್ಲಿ? ತಪ್ಪು ಲೆಕ್ಕ ಕೊಟ್ರಾ ಹೆಬ್ಬಾಳ್ಕರ್!

ಸಿದ್ದರಾಮಯ್ಯ ಸರ್ಕಾರ ಪಂಚ ಗ್ಯಾರಂಟಿಗಳಲ್ಲಿ ಮನೆ ಯಜಮಾನಿಗೆ ಪ್ರತಿ ತಿಂಗಳ 2000 ರೂ. ನೀಡುವ ಗೃಹ ಲಕ್ಷ್ಮೀ ಯೋಜನೆ ಒಂದಾಗಿದೆ. ಆದ್ರೆ, ಕೆಲ ತಿಂಗಳುಗಳಿಂದ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮೀ ಹಣ ಜಮೆ ಆಗಿಲ್ಲ. ಈ ಸಂಬಂಧ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಅಧಿವೇಶನದಲ್ಲಿ ಗಮನಸೆಳೆದಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೃಹಲಕ್ಷ್ಮೀ ಹಣ 2025ರ ಆಗಸ್ಟ್ ವರೆಗೂ ಫಲಾನುಭಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ಹೇಳಿದರೂ ಅಧಿಕೃತ ದಾಖಲೆಗಳು ಅದಕ್ಕೆ ವಿರುದ್ಧವಾಗಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಸಂಕಷ್ಟ ತಂದಿದೆ.

ವಿಪಕ್ಷ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಇಂದು ಸಭೆಯಲ್ಲಿ ಸರ್ಕಾರದ ಅಧಿಕೃತ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ಗೃಹಲಕ್ಷ್ಮೀ ಯೋಜನೆಯ ಫೆಬ್ರವರಿ ಮತ್ತು ಮಾರ್ಚ್ 2025ರ ಹಣವನ್ನು ಸರ್ಕಾರ ಬಿಡುಗಡೆ ಮಾಡದೇ ಇರೋದನ್ನು ಬಹಿರಂಗಪಡಿಸಿದ್ದಾರೆ.

2025ರ ಆಗಸ್ಟ್​​ ತಿಂಗಳ ವರೆಗೂ ಗೃಹ ಲಕ್ಷ್ಮೀ ಹಣವನ್ನು ಫಲಾನುಭಿಗಳ ಖಾತೆಗಳಿಗೆ ಹಾಕಲಾಗಿದೆ ಎಂದಿದ್ದಾರೆ. ಆದ್ರೆ, ಹಣ ಮಾತ್ರ ಖಾತೆಗಳಿಗೆ ಜಮೆ ಆಗಿಲ್ಲ. ಈ ಬಗ್ಗೆ ಬಿಜೆಪಿ ಶಾಸಕ ದಾಖಲೆ ಬಿಡುಗಡೆ ಮಾಡಿದ್ದು, 5 ಸಾವಿರ ಕೋಟಿ ರೂ. ಹಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ತಪ್ಪು ಲೆಕ್ಕಾ ಕೊಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಈ ಸಂಬಂಧ ಮಹೇಶ್ ಟೆಂಗಿನಕಾಯಿ ಅವರು ಸದನದಲ್ಲಿಂದು ಸರ್ಕಾರದ ಅಧಿಕೃತ ದಾಖಲೆ ಬಿಡುಗಡೆ ಮಾಡಿದ್ದು, ಫೆಬ್ರವರಿ, ಮಾರ್ಚ್ ತಿಂಗಳ ಹಣ ಬಿಡುಗಡೆ ಮಾಡಿಲ್ಲದಿರುವುದು ದಾಖಲೆ ಮೂಲಕ ಬಹಿರಂಗವಾಗಿದೆ. ಹಾಗಾದ್ರೆ, ಐದು ಸಾವಿರ ಕೋಟಿ ರೂಪಾಯಿ ಎಲ್ಲೋಯ್ತು ಎಂದು ವಿಪಕ್ಷ ಪ್ರಶ್ನಿಸಿದೆ.

ಈ ಸಂಬಂಧ ಮಹೇಶ್ ಟೆಂಗಿನಕಾಯಿ ಅವರು ಸ್ಪೀಕರ್ ಯುಟಿ ಖಾದರ್ ಅವರಿಗೆ ಪತ್ರ ಬರೆದಿದ್ದು, ಆಗಸ್ಟ್ 2025ರ ವರೆಗೆ ಗೃಹ ಲಕ್ಷ್ಮಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಉತ್ತರಿಸಿದ್ದಾರೆ. ಆದರೆ ಬಿಡುಗಡೆ ಮಾಡಿಲ್ಲ ಎಂಬುದಕ್ಕೆ ನನ್ನ ಸರ್ಕಾರಿ ದಾಖಲೆ ಇದೆ. ಸದನಕ್ಕೆ ಸಚಿವರು ತಪ್ಪು ಮಾಹಿತಿ ನೀಡುತ್ತಿದ್ದಾರೆ . ಸದನದ ಹಕ್ಕು ಮತ್ತು ಗೌರವ ತೋರಿದ ಅಗೌರವ. ಈ ವಿಚಾರವಾಗಿ ತುರ್ತಾಗಿ ಸದನದಲ್ಲಿ ಮಾತನಾಡಲು ಅವಕಾಶ ಕೋಡಿ ಎಂದು ಪತ್ರ ಬರೆದಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author