Wednesday, October 29, 2025

Latest Posts

₹300 ಕೋಟಿ ಫಂಡಿಂಗ್‌? BJPಗೆ ಡಿಕೆ ಕೌಂಟರ್

- Advertisement -

ಬಿಹಾರದಲ್ಲಿ ಚುನಾವಣಾ ಕಣ ರಂಗೇರಿದ್ರೆ, ಕರ್ನಾಟಕದಲ್ಲಿ ಫಂಡ್‌ ಫೈಟಿಂಗ್‌ ಜೋರಾಗಿದೆ. ಬಿಹಾರ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಫಂಡ್‌ ನೀಡಿದೆ ಎಂದು, ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದ್ರು. ರಾಮುಲು ಈ ಆರೋಪಕ್ಕೆ ಡಿ.ಕೆ ಶಿವಕುಮಾರ್‌ ಕೌಂಟರ್‌ ಕೊಟ್ಟಿದ್ದಾರೆ. ಶ್ರೀರಾಮುಲು ಕಾಂಗ್ರೆಸ್‌ ಪಾರ್ಟಿಗೆ ಫಂಡ್‌ ಕೊಟ್ಟಿದ್ದಾರೆ. ರಾಮುಲು ಕೊಟ್ಟಿರುವ ಫಂಡ್‌ ಅನ್ನು ಬಿಹಾರಕ್ಕೆ ಕಳಿಸಿಕೊಟ್ಟಿದ್ದೇವೆ ಎಂದು ಟಕ್ಕರ್‌ ಕೊಟ್ಟಿದ್ದಾರೆ.

ಸಿದ್ದರಾಮಯ್ಯನವರ ಕುರ್ಚಿ ಅಲ್ಲಾಡುತ್ತಿದೆ. ನವೆಂಬರ್‌ 15ಕ್ಕೆ ದೆಹಲಿಗೆ ಹೋಗ್ತಿದ್ದಾರೆ. ಬಿಹಾರ ಚುನಾವಣೆ ಘೋಷಣೆಯಾದ ಬಳಿಕ ಸಚಿವರೊಂದಿಗೆ ಕಲೆಕ್ಷನ್‌ ಮಾಡ್ತಿದ್ದಾರೆ. ಕಲೆಕ್ಷನ್‌ ಕೊಟ್ಟು ಕುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಅವರ ಅವಧಿಯೊಂತೂ ಮುಗಿದಿದೆ. ಎಲ್ಲಾ ಸಚಿವರನ್ನೂ ಔತಣಕೂಟಕ್ಕೆ ಕರೆದು 300 ಕೋಟಿ ವಸೂಲಿ ಮಾಡಿದ್ದಾರೆ. ಬಿಹಾರ ಚುನಾವಣೆಗೆ ಫಂಡಿಂಗ್‌ ಮಾಡಿದ್ದಾರೆಂದು, ಶ್ರೀರಾಮುಲು ಗಂಭೀರ ಆರೋಪ ಮಾಡಿದ್ರು.

ಈ ಹಿಂದೆಯೂ ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆ ವೇಳೆ, ಕರ್ನಾಟಕ ಕಾಂಗ್ರೆಸ್‌ ಫಂಡ್‌ ನೀಡಿರುವುದಾಗಿ ಆರೋಪ ಮಾಡಲಾಗಿತ್ತು. ಇದೀಗ ಬಿಹಾರ ಚುನಾವಣೆಯಲ್ಲೂ ಇದೇ ರೀತಿಯ ಆರೋಪ ಕೇಳಿ ಬಂದಿದೆ.

- Advertisement -

Latest Posts

Don't Miss