ಕನ್ನಡ ಕಿರುತೆರೆ ಲೋಕದಲ್ಲಿ ಸದ್ಯ ಸೀರಿಯಲ್ ಗಳದ್ದೇ ಜಮಾನ. ಅದ್ರಲ್ಲೂ ಮಹಿಳಾ ಪ್ರಧಾನ ಧಾರಾವಾಹಿಗಳಂತೂ ಕರುನಾಡಿ ಮನೆ-ಮನದಲ್ಲೂ ಖ್ಯಾತಿ ಪಡೆಯುತ್ತಿವೆ. ಈ ಪೈಕಿ ಸತ್ಯ ಸೀರಿಯಲ್ ಕೂಡ ಒಂದು. ಈ ಸೀರಿಯಲ್ ನಲ್ಲಿ ಟಾಕ್ ಬಾಯ್ ಲುಕ್ ನಲ್ಲಿ, ಸಖತ್ ರಗಡ್, ಸ್ಟೈಲೀಶ್ ಗೆಟಪ್ ನಲ್ಲಿ ಮಿಂಚೋ ನಟಿ ಗೌತಮಿ ಜಾಧವ್. ಇವರಿಗೇನು ಕಿರುತೆರೆ ಪ್ರಪಂಚ ಹೊಸದಲ್ಲ. ನಾಗರಪಂಚಮಿ ಧಾರಾವಾಹಿಯಲ್ಲಿ ಮಿಂಚಿದ ಗೌತಮಿ ಆ ಬಳಿಕ ಎಂಟ್ರಿ ಕೊಟ್ಟಿದ್ದು ಬೆಳ್ಳಿತೆರೆಗೆ. ‘ಲೂಟಿ’, ‘ಆದ್ಯಾ’, ‘ಕಿನಾರೆ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ ಇವ್ರು ಕಾಲಿವುಡ್ ಸಿನಿಮಾವೊಂದರಲ್ಲಿ ನಟಿಸಿದ್ರು. ಆದ್ರೆ ಅದ್ಯಾಕೋ ಸಣ್ಣಪರದೆಯಂತೆ ಬೆಳ್ಳಿತೆರೆಯಲ್ಲಿ ಗೌತಮಿ ಅಷ್ಟಾಗಿ ಮಿಂಚಲಿಲ್ಲ. ಹಾಗಂತ ಬಣ್ಣದ ನಂಟು ಇವರನ್ನು ಬಿಡಲಿಲ್ಲ. ಬಳಿಕ ಮತ್ತೆ ಕಿರುತೆರೆಗೆ ಮರಳಿರುವ ಗೌತಮಿ ಸತ್ಯ ಸೀರಿಯಲ್ ನಲ್ಲಿ ಟಾಮ್ ಬಾಯ್ ಗೆಟಪ್ ನಲ್ಲಿ ಮಿಂಚುತ್ತಿದ್ದಾರೆ.

ರೀಲ್ ನಲ್ಲಿ ಸಖತ್ ಖಡಕ್ ಎನಿಸುವ ಗೌತಮಿ ರಿಯಲ್ ನಲ್ಲಿ ಉಲ್ಟಾ. ಮೃದು ಸ್ವಭಾವದ ಮುದ್ದು ಮನಸಿನ ಹುಡ್ಗಿಯಂತೆ. ಸೀರಿಯಲ್ ನಲ್ಲಿ ಮಾತ್ರ ರಗಡ್ ಆಗಿರುವ ಗೌತಮಿಗೆ ಗೆಟಪ್ ಗೆ ಅದೆಷ್ಟೋ ಗಂಡೈಕ್ಳ ಹಾರ್ಟ್ ಫೇಲ್ಯೂರ್ ಆಗಿದೆ. ಹಾಗಂತ ಗೌತಮಿ ನಾಟ್ ಎ ಸಿಂಗಲ್. ಶಿ ಈಸ್ ಎ ಮ್ಯಾರೀಡ್ ವುಮೆನ್. ಅಂದಹಾಗೇ ಗೌತಮಿ ಪತಿ ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಕೆಲಸ ಮಾಡುವುದು. ಸಿನಿಮಾಟೋಗ್ರಾಫರ್ ಕೆಲಸ ಮಾಡುವ ಗೌತಮಿ ಪತಿ ಹೆಸರು ಅಭಿಷೇಕ್ ಕಾಸರಗೋಡು. ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಪುತ್ರ. ಮಾಯಾಬಜಾರ್, ಅನಂತು ವರ್ಸಸ್ ನುಸ್ರುತ್ ಸಿನಿಮಾಗಳಿಗೆ ಇವ್ರೇ ಸಿನಿಮಾಟೋಗ್ರಾಫರ್. ಪತ್ನಿ ಗೌತಮಿಯವರ ಹೊಸ ಅವತಾರ ನೋಡಿ ಪತಿ ಅಭಿಷೇಕ್ ಸಖತ್ ಖುಷಿಯಾಗಿದ್ದಾರಂತೆ.





