ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ಭಾನುವಾರವಷ್ಟೇ ಅರಣ್ಯ ಭವನದಿಂದ ಅರಮನೆಯಂಗಳಕ್ಕೆ ಪ್ರವೇಶ ಮಾಡಿದ್ದ ಆನೆಗಳಿಗೆ ತರಬೇತಿ ಪ್ರಾರಂಭವಾಗುತ್ತಿದೆ. ಈಗಾಗಲೇ ಬಹಳಷ್ಟು ಜನರು ಗಜಪಡೆ ನೋಡಲು ಅರಮನೆಗೆ ಆಗಮಿಸುತ್ತಿದ್ದಾರೆ. ಬೆಳಗ್ಗೆ ಸಂಜೆ ಆನೆಗಳಿಗೆ ಜಂಬೂ ಸವಾರಿ ಹೋಗುವ ರಸ್ತೆಗಳಲ್ಲಿ ವಾಕಿಂಗ್ ಕೂಡ ಮಾಡಿಸಲಾಗುತ್ತಿದೆ.
ಮೈಸೂರಿಗೆ ಬಂದ ದಸರಾ ಗಜಪಡೆಗೆ ತೂಕ ಪರಿಶೀಲನೆ ನಡೆಸಲಾಗಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಭತ್ತು ಆನೆಗಳ ತೂಕ ಪರಿಶೀಲನೆ ಮಾಡಲಾಗಿದೆ. ಇನ್ನು ಯವ್ಯಾವ ಆನೆಗಳು ಎಷ್ಟೆಷ್ಟೂ ತೂಕ ಇದೆ ಅನ್ನೋ ಸಂಪೂರ್ಣ ವಿವರ ಇಲ್ಲಿದೆ.
ಕ್ಯಾಪ್ಟನ್ ಅಭಿಮನ್ಯು – 5360 KG
60 ವರ್ಷದ ಅಭಿಮನ್ಯು 2020 ರಿಂದ ಅಂಬಾರಿಯನ್ನು ಹೊರುತ್ತಾ ಬಂದಿದ್ದಾನೆ. ಅರ್ಜುನನ ನಂತರ ಜಂಬೂಸವಾರಿಯ ಸಾರಥ್ಯ ಹೊತ್ತಿದ್ದಾನೆ. ಈ ಬಾರಿ ಅಭಿಮನ್ಯು ತೂಕ – 5360 KG ಇದೆ.
ಧನಂಜಯ – 5310 KG
44 ವರ್ಷದ ಧನಂಜಯ ಆನೆ ಚಿನ್ನದ ಅಂಬಾರಿ ಹೊರುವ ಅಭಿಮನ್ಯುವಿನ ಉತ್ತರಾಧಿಕಾರಿಯಾಗಿ ಮೆರವಣಿಗೆಯಲ್ಲಿ ಭಾಗಿಯಾಗುತ್ತಾನೆ. ಧನಂಜಯ 5310 KG ಇದ್ದಾನೆ.
ಭೀಮ – 5465 KG
24 ವರ್ಷದ ಭೀಮ ಎಲ್ಲರ ಅಚ್ಚುಮಚ್ಚಿನ ಆನೆ. ಭವಿಷ್ಯದಲ್ಲಿ ಅಂಬಾರಿ ಹೊರುವ ಭೀಮ ಎಲ್ಲಾ ಆನೆಗಳನ್ನು ಹಿಂದಿಕ್ಕಿ ತೂಕದಲ್ಲಿ ಮೊದಲ ಸ್ಥಾನದಲ್ಲಿದ್ದಾನೆ. ಅವನ ತೂಕ 5465 ಕೆಜಿ ಇದ್ದಾನೆ.
ಕಾವೇರಿ – 3010 KG
45 ವರ್ಷದ ಕಾವೇರಿ ಹೆಣ್ಣಾನೆ ನಿತಂತರವಾಗಿ ದಸರಾ ಗೆ ಬರುವುದಿಲ್ಲ. ಬಹಳಷ್ಟು ವರ್ಷಗಳ ನಂತರ ಬಂದಿರುವ ಕಾವೇರಿ ಆನೆ 3010 KG ತೂಕ ಇದ್ದಾಳೆ.
ಏಕಲವ್ಯ – 5305 KG
39 ವರ್ಷದ ಏಕಲವ್ಯ ಆನೆ ಬಹಳ ತುಂಟಾ ಆನೆ ಎಂದೇ ಪ್ರಸಿದ್ದಿ ಪಡೆದಿದ್ದಾನೆ. ಅಭಿಮನ್ಯುವಿನ ಶಿಷ್ಯ ಎಂದೇ ಕರೆಯುತ್ತಾನೆ. ಆಕರದಲ್ಲಿ ಶಕ್ತಿಯಲ್ಲಿ ಅರ್ಜುನನರು ಹೋಲುತ್ತಾನೆ. 5305 KG ಇದ್ದಾನೆ.
ಮಹೇಂದ್ರ – 5120 KG
66 ವರ್ಷದ ಮಹೇಂದ್ರ ಆನೆ ಕಾಡುಗಳ್ಳರು, ಹುಲಿಗನ್ನು ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ. ದಸರಾ ಮಹೇಂದ್ರನಿಗೆ ಸ್ವಲ್ಪ ಹೊಸತೆ. 5120 KG ಇದ್ದಾನೆ.
ಪ್ರಶಾಂತ್- 5110 KG
53 ವರ್ಷದ ಪ್ರಶಾಂತ ಆನೆ ಬಹಷ್ಟು ವರ್ಷಗಳಿಂದ ದಸರಾದಲ್ಲಿ ಪಾಲ್ಗೊಂಡಿದ್ದಾನೆ. ಈ ಬಾರಿ 5110 ಕೆಜಿ ತೂಕ ಹೊಂದಿದ್ದಾನೆ.
ಲಕ್ಷ್ಮಿ – 3730 KG
53 ವರ್ಷದ ಲಕ್ಷ್ಮಿ ಹೆಣ್ಣಾನೆಯನ್ನು ಬಳ್ಳೆ ಲಕ್ಷ್ಮಿ ಅಂತಲೇ ಕರೆಯುತ್ತಾರೆ. 2015 ರಿಂದಲೂ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾಳೆ.
ಕಂಜನ್ – 4880 KG
25 ವರ್ಷದ ಕಂಜನ್ ಆನೆ ಕಳೆದ ದಸರದಲ್ಲಿ ಧನಂಜಯ ಜೊತೆ ಜಗಳ ಮಾಡಿ ಸುದ್ದಿಯಾಗಿದ್ದ. ಪಟ್ಟದ ಆನೆ ಊಡ ಆಗಿದ್ದಾ. ಎರಡನೇ ಬಾರಿ ದಸರಾದಲ್ಲಿ ಭಾಗಿಯಾಗುತ್ತಿರುವ ಕಂಜನ್ 4880 ಕೆಜಿ ತೂಕ ಇದ್ದಾನೆ.
ತೂಕ ಪರೀಕ್ಷೆಯಲ್ಲಿ ಕ್ಯಾಪ್ಟನ್ ಅಭಿಮನ್ಯುವನ್ನೇ ಹಿಂದಿಕ್ಕಿರುವ ಭೀಮ ತಂಡದಲ್ಲೇ ಅತ್ಯಂತ ಹೆಚ್ಚಿನ ಬಲಶಾಲಿ ಆಸನೆ ಎಂದು ಸಾಬೀತು ಮಾಡಿದ್ದಾನೆ. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್ ಅಂಡ್ ಕೊ ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ನಡೆದ ಆನೆಗಳ ತೂಕ ಪರಿಶೀಲನೆ ನಡೆಯಿತು. ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡಿ ತಯಾರಿ ಪ್ರಾರಂಭಿಸಲಾಗಿದ್ದು, ಈ ಮೂಲಕ ವಿಜಯದಶಮಿ ಜಂಬೂ ಸವಾರಿ ಮೆರವಣಿಗಾಗಿ ತಾಲೀಮು ಕಾರ್ಯ್ರಮಕ್ಕೆ ಸಿದ್ದತೆ ನಡೆಸಲಾಗಿದೆ.
ಮೈಸೂರಲ್ಲಿ ಗಜಪಡೆಯ ತಾಲೀಮು ಆರಂಭವಾಗುತ್ತಿದೆ. ಜಂಬೂಸವಾರಿ ಮೆರವಣಿಗೆ ಸಾಗಲಿರುವ ಮಾರ್ಗದಲ್ಲಿ ನಡೆಯಲಿರುವ ನಿತ್ಯ ತಾಲೀಮು ನಡೆಯಲಿದೆ. ಬೆಳಿಗ್ಗೆ ಮತ್ತು ಸಂಜೆ ಸೇರಿದಂತೆ ಎರಡು ಬಾರಿ ಅರಮನೆಯಿಂದ ಬನ್ನಿಮಂಟಪದವೆರೆಗೆ ಕರೆದೊಯ್ಯಲಿರುವ ಮಾವುತರು ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡಲಿದ್ದಾರೆ. ಕ್ಯಾಪ್ಟನ್ ಅಭಿಮನ್ಯು ಟೀಂಗೆ ವಿಶ್ ಯು ಆಲ್ ದಿ ಬೆಸ್ಟ್!
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

