Thursday, October 30, 2025

Latest Posts

ಕಲ್ಲು ತೂರಿದ್ದು ಯಾರು? ಪರಂ ಶಾಕಿಂಗ್ ಹೇಳಿಕೆ

- Advertisement -

ಮದ್ದೂರಲ್ಲಿ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲೂ ಬಿರುಸಿನ ಚರ್ಚೆ ಶುರುವಾಗಿದೆ. ಗಲಭೆಯ ನಂತರ ಪೊಲೀಸರು ಹಲವರನ್ನು ಬಂಧಿಸಿದ್ದು, ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಇಬ್ಬರೂ ವಿಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಮದ್ದೂರು ಗಲಾಟೆ ಪ್ರಕರಣದಲ್ಲಿ ಹಿಂದೂಗಳ ಮೇಲೆ ಯಾವುದೇ ಕೇಸ್ ಹಾಕಿಲ್ಲ. ಯಾರನ್ನೂ ಅರೆಸ್ಟ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಅವರ ಪ್ರಕಾರ, ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದ 21 ಮಂದಿ ಮುಸ್ಲಿಮರನ್ನು ಮಾತ್ರ ಬಂಧಿಸಲಾಗಿದೆ.

ಗಣೇಶ ವಿಸರ್ಜನೆ ಶಾಂತಿಯುತವಾಗೇ ನಡೆಯುತ್ತಿತ್ತು. ಆದರೆ ಮಸೀದಿ ಕಡೆಯಿಂದ ಕಲ್ಲು ಬಿದ್ದ ಕೂಡಲೇ ಗಲಭೆ ಪ್ರಾರಂಭವಾಯಿತು. ಯಾವುದೇ ಸಾರ್ವಜನಿಕ ಸಂಘಟನೆಯ ಕೈ ಇಲ್ಲ. ಹೊರಗಡೆಯವರೂ ಕೆಲವರು ಇರಬಹುದು. ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಐಜಿ, ಎಸ್‌ಪಿ, ಡಿಸಿ ಘಟನಾ ಸ್ಥಳದಲ್ಲಿಯೇ ಇರುವರು. ತನಿಖೆ ನಡೀತಿದೆ ಎಂದು ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.

ಇನ್ನು ಮದ್ದೂರಿನ ವಿಚಾರವಾಗಿ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರು, ಘಟನೆಯ ನಂತರ 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಅವರಲ್ಲಿ ಯಾರು ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ʼಹಿಂದೂ ಪರವಾದ ಸಂಘಟನೆಗಳವರೂʼ ಸೇರಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರ ಬಳಿ ಇದೆ. ಆದರೆ ಸತ್ಯಾಂಶ ತನಿಖೆ ಮುಗಿದ ನಂತರವೇ ಗೊತ್ತಾಗಲಿದೆ’ ಎಂದು ಸ್ಪಷ್ಟಪಡಿಸಿದರು.

ಹೀಗಾಗಿ, ಮದ್ದೂರು ಗಲಾಟೆಯ ಬಗ್ಗೆ ಇಬ್ಬರು ಪ್ರಮುಖ ಸಚಿವರು ಎರಡು ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದರಿಂದ ರಾಜಕೀಯ ತಾಪಮಾನ ಹೆಚ್ಚಾಗಿದೆ. ಒಂದು ಕಡೆ ಚಲುವರಾಯಸ್ವಾಮಿ ಮುಸ್ಲಿಮರನ್ನು ಮಾತ್ರ ಬಂಧಿಸಲಾಗಿದೆ ಎಂದು ಹೇಳುತ್ತಿದ್ದರೆ, ಇನ್ನೊಂದು ಕಡೆ ಪರಮೇಶ್ವರ್ ಹಿಂದೂ ಪರ ಸಂಘಟನೆಗಳವರೂ ಸೇರಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss