Saturday, September 14, 2024

Latest Posts

ದ್ವಾರಕಾಧೀಶನಿಗೆ ಏಕೆ 56 ರೀತಿಯ ಖಾದ್ಯವನ್ನು ನೈವೇದ್ಯ ಮಾಡಲಾಗುತ್ತದೆ..?

- Advertisement -

Spiritual: ಇವತ್ತು ದೇಶದೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಲಾಗುತ್ತಿದೆ. ಈ ವೇಳೆ ಬೆಣ್ಣೆಯ ನೈವೇದ್ಯವಂತೂ ಶ್ರೀಕೃಷ್ಣನಿಗೆ ಮಾಡಲಾಗುತ್ತಿದೆ. ಆದರೆ ಕೆಲವು ಕಡೆ ಶ್ರೀಕೃಷ್ಣನಿಗೆ 56 ರೀತಿಯ ಭೋಜನ ಮಾಡಿ, ನೈವೇದ್ಯ ಮಾಡಲಾಗುತ್ತದೆ. ಇದನ್ನು ಛಪ್ಪನ್ನಾರು ಭೋಜನ ಅಂತಾ ಕರಿಯಲಾಗುತ್ತದೆ. ಹಾಗಾದ್ರೆ ಈ 56 ರೀತಿಯ ಖಾದ್ಯ ತಯಾರಿಸಿ, ಶ್ರೀಕೃಷ್ಣನಿಗೆ ಏಕೆ ನೈವೇದ್ಯ ಮಾಡುತ್ತಾರೆಂಬ ಬಗ್ಗೆ ತಿಳಿಯೋಣ ಬನ್ನಿ.

ಒಮ್ಮೆ ಬ್ರಿಜವಾಸಿಗಳು ಇಂದ್ರನನ್ನು ಮೆಚ್ಚಿಸಲು ಪೂಜೆಗೆ ತಯಾರಿ ಮಾಡುತ್ತಿದ್ದರು. ಇಂದ್ರ ಸಂತ್ರಪ್ತನಾಗಿ, ಮಳೆ ಬರುವಂತೆ ಮಾಡುತ್ತಾಮನೆಂಬ ಕಾರಣಕ್ಕೆ, ಈ ರೀತಿ ಪೂಜೆ ಮಾಡಬೇಕು ಎಂದು ಅವರು ನಿರ್ಧರಿಸಿದ್ದರು. ಇದನ್ನೆಲ್ಲ ನೋಡುತ್ತಿದ್ದ ಶ್ರೀಕೃಷ್ಣ ತನ್ನ ತಂದೆಗೆ ಕೇಳಿದ ಈ ಪೂಜೆ ಯಾರಿಗಾಗಿ ಮತ್ತು ಏಕೆ ಮಾಡುತ್ತಿದ್ದಾರೆ ಎಂದು. ಅದಕ್ಕೆ ಉತ್ತರಿಸಿದ ನಂದ, ಚೆನ್ನಾಗಿ ಮಳೆ ಬಂದು, ಚೆನ್ನಾಗಿ ಫಸಲು ಬೆಳೆದು, ಇಲ್ಲಿರುವ ದನ ಕರುಗಳೆಲ್ಲ ಆರಾಮವಾಗಿ, ಹುಲ್ಲು ಮೇಯ್ಬೇಕು. ಮತ್ತು ನಾವೆಲ್ಲ ನೆಮ್ಮದಿಯಾಗಿರಬೇಕು ಅಂದ್ರೆ, ಇಂದ್ರನನ್ನು ಪೂಜಿಸಬೇಕು ಎನ್ನುತ್ತಾನೆ.

ಇದಕ್ಕೆ ಉತ್ತರಿಸಿದ ಕೃಷ್ಣ, ಗೋವರ್ಧನ ಪರ್ವತ ನಮ್ಮ ದನ ಕರುಗಳಿಗೆ ಹುಲ್ಲು ಕೊಡುತ್ತಿದೆ. ಅದರಿಂದ ನಮ್ಮ ದನ ಕರುಗಳು ಆರಾಮವಾಗಿ, ಸುರಕ್ಷಿತವಾಗಿದೆ. ಹಾಗಾಗಿ ನಾವು ಗೋವರ್ಧನ ಪರ್ವತಕ್ಕೆ ಪೂಜಿಸಬೇಕಲ್ಲವೇ ಎನ್ನುತ್ತಾನೆ. ಇದು ನಂದನಿಗೂ ಹೌದು ಎನ್ನಿಸುತ್ತದೆ. ಗ್ರಾಮದ ಜನರೆಲ್ಲ ಸೇರಿ, ಇಂದ್ರನ ಪೂಜೆಯನ್ನು ಬದಿಗಿಟ್ಟು, ಗೋವರ್ಧನ ಬೆಟ್ಟ ಪೂಜೆ ಮಾಡಲು ನಿರ್ಧರಿಸುತ್ತಾರೆ.

ಆಗ ಇಂದ್ರನಿಗೆ ಕೋಪ ಬರುತ್ತದೆ. ತನಗೆ ಬ್ರಿಜವಾಸಿಗಳು ಅವಮಾನಿಸಿದ್ದಾರೆಂದು, ವರುಣ ದೇವನಿಗೆ ಈ ಊರಿನಲ್ಲಿ ಧಾರಾಕಾರವಾಗಿ ಮಳೆ ಬರುವಂತೆ ಮಾಡು ಎಂದು ಆದೇಶಿಸುತ್ತಾನೆ. ಅಲ್ಲಿನ ಜನರು ಕಂಗಾಲಾಗಿ ಶ್ರೀಕೃಷ್ಣನ ಬಳಿ ಬರುತ್ತಾರೆ. ಶ್ರೀಕೃಷ್ಣ ತನ್ನ ಜನರನ್ನೆಲ್ಲ ಮಳೆಯಿಂದ ರಕ್ಷಿಸಲು, ಗೋವರ್ಧನ ಬೆಟ್ಟವನ್ನು ಕಿರುಬೆರಳಿನಲ್ಲಿ ಎತ್ತಿ ಹಿಡಿದು, ಅದರ ಕೆಳಗೆ ಜನರು, ದನ,ಕರುಗಳ ರಕ್ಷಣೆ ಮಾಡುತ್ತಾನೆ.

ಸತತ 7 ದಿನಗಳವರೆಗೆ ಶ್ರೀಕೃಷ್ಣ ಊಟ, ತಿಂಡಿ, ನಿದ್ದೆ ಏನೂ ಇಲ್ಲದೇ, ಗೋವರ್ಧನ ಪರ್ವತವನ್ನು ಹಿಡಿದು, ಊರ ಜನರನ್ನು ರಕ್ಷಿಸಿದ. 7 ದಿನಗಳ ಬಳಿಕ, ಮಳೆ ನಿಂತಿತು. ಶ್ರೀಕೃಷ್ಣ ಸಮೇತ ಎಲ್ಲರೂ ಊರಿಗೆ ಬಂದರು. ಈ ವೇಳೆ ಶ್ರೀಕೃಷ್ಣನ ತಾಯಿ ಮತ್ತು ಗೋಪಿಕೆಯರೆಲ್ಲ ಸೇರಿ, ಶ್ರೀಕೃಷ್ಣನಿಗೆ 56 ರೀತಿಯ ಭೋಜನ ಮಾಡಿ, ಉಣ ಬಡಿಸಿದರು.

ಯಾಕೆ 56 ಭೋಜನ ಮಾಡಿ ಉಣ ಬಡಿಸಿದರು ಎಂದರೆ, ಶ್ರೀಕೃಷ್ಣನಿಗೆ ಬಾಲ್ಯದಿಂದಲೂ ತಾಯಿ ಯಶೋಧೆ, ದಿನಕ್ಕೆ 8 ಬಾರಿ ಊಟ ಮಾಡಿಸುತ್ತಿದ್ದಳು. ಆದರೆ ಗೋವರ್ಧನ ಬೆಟ್ಟವನ್ನು ಹಿಡಿದು 7 ದಿನಗಳವರೆಗೆ ಶ್ರೀಕೃಷ್ಣ ಉಪವಾಸವಿದ್ದ ಕಾರಣ, ಶ್ರೀಕೃಷ್ಣನಿಗೆ ಆ 7 ದಿನದ 8 ಬಾರಿಯ ಭೋಜನವನ್ನು ಸೇರಿಸಿ 56 ರೀತಿಯ ಭೋಜನ ಮಾಡಿ ಬಡಿಸಲಾಗಿತ್ತು. ಹಾಾಗಾಗಿಯೇ ಇಂದಿಗೂ ಕೆಲವು ಕಡೆ 56 ರೀತಿಯ ಭೋಜನ ಮಾಡಿ ನೈವೇದ್ಯ ಮಾಡಲಾಗುತ್ತದೆ.

- Advertisement -

Latest Posts

Don't Miss