www.karnatakatv.net: ಮಂಡ್ಯ: ಜಮೀರ್ ಅಹಮದ್ ಯಾರನ್ನೋ ಮೆಚ್ಚಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದನ್ನೆಲ್ಲಾ ಜನ ಸೂಕ್ಷ್ಮವಾಗಿ ಪರಿಗಣಿಸ್ತಿದ್ದು, ಜನ ಮುಂದಿನ ದಿನಗಳಲ್ಲಿ ಉತ್ತರ ಕೊಡ್ತಾರೆ ಅಂತ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತೆ ಅಂತ ಹೇಳಿದ್ದ ಸಿದ್ದರಾಮಯ್ಯರಿಗೆ ಮಾತಿನ ಚಾಟಿ ಬೀಸಿದ್ರು. ನಾವು ಮಾತ್ರ ಕುಟುಂಬ ರಾಜಕಾರಣ ಮಾಡ್ತೀವಾ ಸಿದ್ದರಾಮಯ್ಯ ಕುಟುಂಬ ರಾಜಕಾರಣ ಮಾಡಲ್ವಾ ಅಂತ ಪ್ರಶ್ನಿಸಿದ ನಿಖಿಲ್, ಹಾಗಾದ್ರೆ ಸಿದ್ದು ಪುತ್ರ ಯತೀಂದ್ರ ವೈದ್ಯರಾಗಿದ್ದಾರೆ. ಅವರು ರಾಜಕೀಯಕ್ಕೆ ಏಕೆ ಬಂದ್ರು ಅಂತ ತಿರುಗೇಟು ನೀಡಿದ್ದಾರೆ.
ಇನ್ನು ಶಾಸಕ ಜಮೀರ್ ಅಹಮದ್ ಖಾನ್ ಆರೋಪ ಕುರಿತಾಗಿ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ಕೆಲ ನಾಯಕರು ತಪ್ಪು ಸಂದೇಶ ಕೊಡಲು ಹೊರಟಿದ್ದಾರೆ. ಯಾರನ್ನೋ ಮೆಚ್ಚಿಸಲು ಈ ರೀತಿ ಹೇಳಿಕೆ ಕೊಡ್ತಿದ್ದಾರೆ. ಜನ ಇದನ್ನ ಸೂಕ್ಮವಾಗಿ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ತರ ಕೊಡ್ತಾರೆ ಅಂತ ಶಾಸಕ ಜಮೀರ್ ಅಹಮದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಂದಿನ ದಿನಗಳಲ್ಲಿ ಪಂಚರತ್ನ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರುತ್ತದೆ ಅಂತ ಭರವಸೆ ನೀಡಿದ್ರು. ಇನ್ನು ತಾವು ಕ್ಷೇತ್ರ ಬದಲಿಸೋ ಕುರಿತಾದ ಪ್ರಶ್ನೆಗೆ ಉತ್ತರಿಸಿದ ನಿಖಿಲ್, ನಾನು ಕ್ಷೇತ್ರ ಬದಲಿಸ್ತೀನಾ ಅನ್ನೋ ಚರ್ಚೆ ಈಗ ಬೇಡ ನಾನು ರಾಮನಗರಕ್ಕೆ ಸೀಮಿತವಾಗಿಲ್ಲ, ಮಂಡ್ಯಕ್ಕೆ ಬರುತ್ತಿಲ್ಲ ಅನ್ನೋದು ಸುಳ್ಳು. ಇನ್ನು ಮದ್ದೂರಿನಲ್ಲಿ ಈಗಾಗಲೇ ಪಕ್ಷದ ಹಿರಿಯ ನಾಯಕರಾದ ತಮ್ಮಣ್ಣ ಇದ್ದು, ಅವರ ಕ್ಷೇತ್ರದಲ್ಲಿ ನಾನು ಏಕೆ ಸ್ಪರ್ಧಿಸಲಿ ಅಂತ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.