Friday, November 22, 2024

Latest Posts

ಅಕ್ಕಿ ಕೊಡ್ತೀವಿ ಅಂತ ಯಾಮಾರಿಸೋದು ಕಾಂಗ್ರೆಸ್: ಹೂವಳ್ಳಿ ಪ್ರಕಾಶ್ ಆಕ್ರೋಶ!

- Advertisement -

state news

ಕೋಲಾರ(ಮಾ.1): ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಣಕ್ಕಿಳಿಯಲಿರುವ ಕೋಲಾರದಲ್ಲಿ ದಿನೇ ದಿನೇ ಜಿದ್ದಾಜಿದ್ದಿ ಹೆಚ್ಚಾಗುತ್ತಿದ್ದು, ಸಿದ್ದರಾಮಯ್ಯ ಎದುರಾಳಿಯಾಗಿ ಜೆಡಿಎಸ್ ನ ಸಿಎಂಆರ್ ಶ್ರೀನಾಥ್ ಬೆಂಬಲಿಸಿ ಅನೇಕ ಸಂಘಟನೆಗಳು ಬಹಿರಂಗ ಸಭೆಗಳಲ್ಲಿ ಭಾಗಿಯಾಗುತ್ತಿದ್ದು, ಈಗ ಸಿದ್ದರಾಮಯ್ಯ ರವರ ಶಕ್ತಿಯಾಗಿರುವ ದಲಿತ ಮುಖಂಡರ ಸರದಿ ಶುರುವಾಗಿದೆ .

ಅಕ್ಕಿ ಕೊಡ್ತೀವಿ ಅಂತ ಯಾಮಾರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕಿಂತ ಜೀವನ ರೂಪಿಸಿಕೊಳ್ಳಲು ಅನುವು ಮಾಡಿಕೊಳ್ಳುವ ಯೋಜನೆಗಳನ್ನು ರೂಪಿಸಲು ಮುಂದಾಗಿರುವ ಕುಮಾರಸ್ವಾಮಿ ಯೋಚನೆಗಳು ಮಹತ್ವವಾದವು, ರಾಜ್ಯದಲ್ಲಿ ದಲಿತಪರ ಹಾಗೂ ಅವರ ಬಗ್ಗೆ ಕಾಳಜಿ ಉಳ್ಳ ಪಕ್ಷವಾದ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಲು ಕೋಲಾರ ಜಿಲ್ಲೆಯ ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟ ಸರ್ವಾನುಮತದಿಂದ ನಿರ್ಧಾರ ಮಾಡಿದೆ ಎಂದು ಒಕ್ಕೂಟದ ಮುಖಂಡ ಹೂವಳ್ಳಿ ಪ್ರಕಾಶ್ ಬುಧವಾರ ತಿಳಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದಲಿತ ಮುಖಂಡ ಹೂವಳ್ಳಿ ಪ್ರಕಾಶ್, ಅನಾದಿಕಾಲದಿಂದಲೂ ರಾಷ್ಟ್ರೀಯ ಪಕ್ಷಗಳು ದಲಿತ ವರ್ಗವನ್ನು ತುಳಿಯುತ್ತಲೇ ಬಂದಿವೆ ರಾಷ್ಟ್ರೀಯ ಪಕ್ಷಗಳು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ಹೊಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು, ಈ ನಿಟ್ಟಿನಲ್ಲಿ ದಲಿತಪರ ಕಾಳಜಿ ಇರುವ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ತೀರ್ಮಾನ ಮಾಡಿದ್ದೇವೆ ಈ ವಿಚಾರವಾಗಿ ನಾಲ್ಕು ಬಾರಿ ಸಭೆ ನಡೆಸಿ‌ ಒಕ್ಕೊರಲಿನಿಂದ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲಾ ಜಾತಿ ಒಂದೇ, ಸಿದ್ದಾಂತ ಒಂದೇ ಎಂಬ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರವಾಗಿ ನಿಲ್ಲುವ ಮೂಲಕ ದಲಿತರ ಸರ್ವತೋಮುಖ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿರುವ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಅವಧಿಯಲ್ಲಿ ನೀಡಿರುವ ರಸ್ತೆ ಕಾಮಗಾರಿಗಳು, ಫ್ಲೈ ಓವರ್, ಇತ್ಯಾದಿ ಕೊಡುಗೆಗಳು ಅಪಾರವಾಗಿದೆ.

ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರ ಕೊಡುಗೆಯೂ ಸಹ ಅಪಾರವಾಗಿದೆ. ಅವರ ಅವಧಿಯಲ್ಲಿ ಜಾರಿಗೆ ತಂದಿರುವ ಐರಾವತ ಯೋಜನೆ, ಐಫೋನ್ ಕಂಪನಿ ತಂದಿದ್ದು, ಮಾರಕ ಲಾಟರಿ ನಿಷೇಧ, ಹೆಣ್ಣು ಮಕ್ಕಳ ನೋವಿಗೆ ಸ್ಪಂದಿಸುವ ಮೂಲಕ ಸಾರಾಯಿ ನಿಷೇಧ ಮಾಡಿದ ಯಾರಾದರೂ ಗಂಡಸು ರಾಜಕಾರಣಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ , ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಭಾಗ್ಯಲಕ್ಷ್ಮಿ ಬಾಂಡ್, ಸೈಕಲ್ ಭಾಗ್ಯ, ಪ್ರಮುಖವಾಗಿ ರೈತ ಪರವಾದ ಕಾಳಜಿಯಿಂದ ಎತ್ತಿನಹೊಳೆ, ಯರಗೋಳ್, ಯೋಜನೆ, ಸಮೃದ್ಧಿ ಕರ್ನಾಟಕ, 24ಸಾವಿರ ಕೋಟಿ ಸಾಲ ಮನ್ನಾ, ಶಿಕ್ಷಣ ಕ್ರಾಂತಿ, ಇತ್ಯಾದಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದ ಕುಮಾರಸ್ವಾಮಿಯವರು ಈ ಬಾರಿ ಮತ್ತೆ ಮುಖ್ಯಮಂತ್ರಿಗಳಾದರೆ ರಾಜ್ಯ ಸುಭಿಕ್ಷವಾಗುತ್ತದೆ .

ಕೋಲಾರಮ್ಮನ ಕೆರೆ ಹೂಳು ತೆಗೆದು ಜೋಬು ತುಂಬಿಸಿಕೊಂಡಿದ್ದು ಇಂದಿನ ಸಂಸದರ ಸಾಧನೆ ಎಂದು ಜರಿದ ಹೂವಳ್ಳಿ ಪ್ರಕಾಶ್ , ಪ್ರಸ್ತುತ ರಾಜ್ಯದಲ್ಲಿ ಆಡಳಿತದಲ್ಲಿರುವ ದಲಿತ ವಿರೋಧಿ ಸರ್ಕಾರ, ಬೆಲೆ ಏರಿಕೆ ಬಗ್ಗೆ ಕೇಂದ್ರ ನಿಲುವು ಏನು? ಈ ಬಗ್ಗೆ ತುಟಿ ಬಿಚ್ಚಿ ಮಾತನಾಡದ ಜನಪ್ರತಿನಿಧಿಗಳು, ಇಂತಹ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷ ಒಂದೇ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ, ರಾಜ್ಯದ ಸಮಗ್ರ ಕಲ್ಯಾಣಕ್ಕಾಗಿ ಪಂಚರತ್ನ ಯೋಜನೆಗಳನ್ನು ಜಾರಿಗೆ ತರಲು ಕುಮಾರಸ್ವಾಮಿ ರಾಜ್ಯಾದ್ಯಂತ ಸಂಚಾರ ನಡೆಸಿದ್ದು ಅಭೂತಪೂರ್ವ ಬೆಂಬಲ ದೊರೆಯುತ್ತಿದೆ.

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕೊರೋನಾ ಸಂದರ್ಭದಲ್ಲಿ ಅದ್ವಿತೀಯ ಸೇವೆ ಮಾಡಿದ ಸ್ಥಳೀಯ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಗೆ ಸಹಮತದ ಬೆಂಬಲ ಸೂಚಿಸುತ್ತಿದ್ದೇವೆ , ಸಿಎಂಆರ್ ಶ್ರೀನಾಥ್ ರಿಯಲ್ ಎಸ್ಟೇಟ್ ಉದ್ಯಮಿ ಅಲ್ಲ, ರೈತಾಪಿ ವರ್ಗದ ಕುಡಿ, ಶಿಸ್ತಿನ ಕುಟುಂಬದಿಂದ ಬಂದ ಸಹೃದಯ ರಾಜಕಾರಣಿ, ಅವರ ಸೇವೆ ಶ್ಲಾಘನೀಯ, ಈ ನಿಟ್ಟಿನಲ್ಲಿ ಇದೇ 15ರೊಳಗೆ ಸಮಾವೇಶ ಮಾಡಿ ನಂತರ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ .

ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ರಣತಂತ್ರ !

“ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ನಾಯಕರೇ ಇಲ್ಲ..!” : ಮಾಜಿ ಸಚಿವ ಈಶ್ವರಪ್ಪ

- Advertisement -

Latest Posts

Don't Miss