Wednesday, September 3, 2025

Latest Posts

ಗೋಮಾಂಸ ಯಾಕೆ ತಿಂತಾರೆ? ಸಲ್ಮಾನ್ ತಂದೆ ಶಾಕಿಂಗ್ ಹೇಳಿಕೆ!

- Advertisement -

ಮುಸ್ಲಿಮರು ಕಡಿಮೆ ಬೆಲೆ ಅಂತ ಗೋಮಾಂಸವನ್ನ ಸೇವಿಸುತ್ತಾರೆ. ಆದ್ರೆ ನಾನು ಅದನ್ನ ತಿಂದೇ ಇಲ್ಲ ಅಂತ ಹಿರಿಯ ಲೇಖಕ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ತಂದೆ ಸಲೀಮ್ ಖಾನ್ ಹೇಳಿದ್ದಾರೆ. ಇದರ ಜೊತೆಗೆ ಅಪರೂಪದ ವಿಚಾರಗಳನ್ನು ಅವ್ರು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಸಲೀಮ್ ಖಾನ್ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನ ಹಾಗೂ ಧಾರ್ಮಿಕ ನಂಬಿಕೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಸಲೀಮ್ ಖಾನ್ ಅವರು ತಮ್ಮ ಆಹಾರ ಪದ್ಧತಿ ಕುರಿತು ಮಾತನಾಡಿದ್ದಾರೆ. ನಾನು ಎಂದಿಗೂ ಗೋಮಾಂಸ ಸೇವನೆ ಮಾಡಿಲ್ಲ. ನಾವು ಇಂದೋರ್‌ನಲ್ಲಿ ವಾಸವಾಗಿದ್ದೆವು. ಅಂದಿನಿಂದ ಇಂದಿನವರೆಗೆ ನಾನು ಗೋಮಾಂಸ ಸ್ಪರ್ಶಿಸಿಲ್ಲ ಎಂದು ತಿಳಿಸಿದ್ದಾರೆ.

ಗೋಮಾಂಸ ಅತಿ ಕಡಿಮೆ ಬೆಲೆಯ ಮಾಂಸವಾಗಿರುವ ಕಾರಣಕ್ಕೆ ಸಾಮಾನ್ಯವಾಗಿ ಕೆಲವರು ಸಾಕು ನಾಯಿಗಳಿಗೆ ಆಹಾರವಾಗಿ ಇದರ ಬಳಕೆ ಮಾಡುತ್ತಾರೆ. ಆದರೆ ನಾನು ಯಾವತ್ತೂ ಇದನ್ನು ತಿನ್ನಲಿಲ್ಲ. ಪ್ರವಾದಿ ಮೊಹಮ್ಮದ್ ಅವರೂ ಎಲ್ಲ ಧರ್ಮಗಳಿಂದ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡವರು. ಅವರು ಹಸುವಿನ ಹಾಲನ್ನು ತಾಯಿಯ ಹಾಲಿಗೆ ಸಮಾನವೆಂದು ತಿಳಿಸಿರುವುದು ನನ್ನ ಮನಸ್ಸಿನಲ್ಲಿ ಸದಾ ನೆಲೆಸಿರುವ ಮಾತು ಎಂದಿದ್ದಾರೆ.

ಅವರು ತಮ್ಮ ಧರ್ಮದ ಬಗ್ಗೆ ಮಾತ್ರವಲ್ಲದೇ, ಹಿಂದೂ ಧರ್ಮದ ಮೇಲೂ ನಂಬಿಕೆ ಹೊಂದಿರುವುದಾಗಿ ಹೇಳಿದ್ದಾರೆ. ನಾನು ಹಿಂದೂಗಳಿಂದ ತುಂಬಿದ ಪರಿಸರದಲ್ಲಿ ಬೆಳೆದವನು. ನನ್ನ ತಂದೆ ಪೊಲೀಸ್ ಅಧಿಕಾರಿಯಾಗಿದ್ದು, ನಾವೆಲ್ಲಾ ಹಿಂದೂ ಹಬ್ಬಗಳನ್ನು ನಮ್ಮ ಮನೆ ಹಾಗೂ ಠಾಣೆಯಲ್ಲಿ ಆಚರಿಸುತ್ತಿದ್ದೆವು ಎಂದು ಸ್ಮರಿಸಿದರು.

60 ವರ್ಷಗಳ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ ಸಲೀಮ್ ಖಾನ್, ನಾನು ಸುಶೀಲಾ ಚರಕ್ ಅವರನ್ನು ಮದುವೆಯಾಗಿದ್ದೇನೆ. ಅವರ ಮನೆಯಲ್ಲಿ ಹಿಂದೂ ಸಂಪ್ರದಾಯಗಳ ಪ್ರಕಾರ ವಿವಾಹ ನಡೆಯಬೇಕೆಂಬ ಇಚ್ಛೆ ಇತ್ತು. ನಾನು ಅದನ್ನು ಗೌರವಿಸಿದ್ದೇನೆ. ನನ್ನ ಕುಟುಂಬದಿಂದ ಇದಕ್ಕೆ ಯಾವುದೇ ಆಕ್ಷೇಪ ಇರಲಿಲ್ಲ ಎಂದಿದ್ದಾರೆ.

- Advertisement -

Latest Posts

Don't Miss