Web Story: ಕೆಲವು ಹೊಟೇಲ್‌ನಲ್ಲಿ ರೂಮ್ ಬುಕ್ ಮಾಡಿದಾಗ, ನಿಮಗೆ ಫ್ರೀಯಾಗಿ ಬೆಳಗ್ಗಿನ ತಿಂಡಿ ಕೊಡಲಾಗತ್ತೆ. ಆದರೆ ಅದಕ್ಕೆ ಇಂತಿಷ್ಟೇ ಗಂಟೆಯೊಳಗೆ ಬಂದು ತಿಂಡಿ ಸೇವಿಸಬೇಕು. ಇಲ್ಲವಾದಲ್ಲಿ ತಿಂಡಿ ಸಿಗುವುದಿಲ್ಲವೆಂದು ಹೇಳಿರಲಾಗುತ್ತದೆ. ಹಾಗಾದ್ರೆ ಹೊಟೇಲ್‌ನಲ್ಲಿ ರೂಮ್ ಬುಕ್ ಮಾಡಿದಾಗ, ಏಕೆ ಫ್ರಿಯಾಗಿ ಬ್ರೇಕ್‌ಫಾಸ್ಟ್ ಕೊಡಲಾಗುತ್ತದೆ ಅಂತಾ ತಿಳಿಯೋಣ ಬನ್ನಿ..
3 ಸ್ಟಾರ್, 5 ಸ್ಟಾರ್ ಹೊಟೇಲ್‌ಗಳಲ್ಲಿ ನೀವು ರೂಮ್ ಬುಕ್ ಮಾಡಿದರೆ, ನಿಮಗೆ ಫ್ರೀಯಾಗಿ ಬೆಳಗ್ಗಿನ ಉಪಹಾರ ಸಿಗುತ್ತದೆ. ಅದರಲ್ಲೂ ನಿಮಗೆ ಏನು ಬೇಕಾದ್ರೂ ತಿನ್ನುವ ಅವಕಾಶವಿರುತ್ತದೆ. ಒಂದಿಷ್ಟು ತಿಂಡಿ, ಹಣ್ಣು, ಜ್ಯೂಸ್, ಹಾಲಿನ ಉತ್ಪನ್ನ, ಬೇಕರಿ ಉತ್ಪನ್ನಗಳನ್ನು ಇಟ್ಟಿರುತ್ತಾರೆ. ಅದರಲ್ಲಿ ನಿಮಗೆ ಏನು ಬೇಕಾದ್ರೂ, ಎಷ್ಟು ಬೇಕಾದ್ರೂ ತಿನ್ನಬಹುದು. ಆದರೆ ಅದಕ್ಕಾಗಿ ಇಂತಿಷ್ಟೇ ಸಮಯವಿರುತ್ತದೆ. ಬೆಳಿಗ್ಗೆ 9 ಗಂಟೆಯೊಳಗೆ ಬಂದು ತಿಂಡಿ ಮುಗಿಸಿರಬೇಕು. 9 ಗಂಟೆ ಬಳಿಕ 1 ನಿಮಿಷವಾದರೂ ಅಂಥವರಿಗೆ ತಿಂಡಿ ಸಿಗುವುದಿಲ್ಲ.
ಹಾಗಾದ್ರೆ ಇವರೆಲ್ಲ ರೂಮ್ ಬುಕ್ ಮಾಡಿದವರಿಗೆ ಹೀಗೆ ಫ್ರೀಯಾಗಿ ಬೆಳಗ್ಗಿನ ತಿಂಡಿ ಕೊಡಲು ಕಾರಣವೇನು ಅಂದ್ರೆ, ಹಿಂದೆಲ್ಲ ರೂಮ್ ಬುಕ್ ಮಾಡಿದಾಗ, 11 ಗಂಟೆಗೆ ಅವರು ರೂಮ್ ಖಾಲಿ ಮಾಡಿಕೊಂಡು ಹೊರಡಬೇಕಿತ್ತು. ಆದರೆ ರೂಮ್ ಬುಕ್ ಮಾಡಿದವರು, ಬೇಗ ಏಳುತ್ತಿರಲಿಲ್ಲ. ತಡವಾಗಿ ಎದ್ದು, ತಡವಾಗಿ ಚೆಕ್ ಔಟ್ ಆಗುತ್ತಿದ್ದರು.
ಆದರೆ ಆ ಸಮಯಕ್ಕೆ ಬಂದು ಚೆಕ್ ಇನ್ ಆಗುವವರಿಗೆ ರೂಮ್ ಬುಕ್ ಮಾಡಿಕೊಡಬೇಕಿತ್ತು. ಆದರೆ ಆ ಸಮಯ ಮೀರಿ ಹೋಗುತ್ತಿತ್ತು. ಒತ್ತಾಯ ಮಾಡಿದರೂ, ಬೈದರೂ ಕೇರ್ ಮಾಡದೇ, ಬಂದ ಗ್ರಾಹಕರೆಲ್ಲ ಇದೇ ತಪ್ಪನ್ನು ಮಾಡುತ್ತಿದ್ದರು. ಈ ತಪ್ಪನ್ನು ಸರಿ ಮಾಡಿ, ಬೇಗ ಬೇಗ ಗ್ರಾಹಕರನ್ನು ಚೆಕ್ ಔಟ್ ಮಾಡುವಂತೆ ಮಾಡಲು, ಫ್ರೀ ಬ್ರೇಕ್‌ಫಾಸ್ಟ್ ಸಿಸ್ಟಮ್ ತರಲಾಯಿತು.
ಬೆಳಿಗ್ಗೆ ಎಷ್ಟೇ ಜೋರಾಗಿ ನಿದ್ದೆ ಬಂದರೂ, 9 ಗಂಟೆಯೊಳಗೆ ಎದ್ದು ಬರುವ ಜನ, ತಿಂಡಿ ತಿಂದು, ಸ್ನಾನ ಮಾಡಿ, ಕರೆಕ್ಟ್ ಟೈಮಿಗೆ ರೂಮ್ ಬಿಟ್ಟುಕೊಡಲು ಶುರು ಮಾಡಿದರು. ಈ ಮೂಲಕ ಫ್ರೀ ಬ್ರೇಕ್‌ಫಾಸ್ಟ್ ಸಿಸ್ಟಮ್ ಸಕ್ಸಸ್ ಆಯಿತು.