special story
ಮನುಷ್ಯ ತನ್ನ ಜೀವನವನ್ನು ಕೆಲಸ ಹುಡುಕುವುದರಲ್ಲಿ ಹಾಳು ಮಾಡಿಕೊಳ್ಳುತ್ತಿದ್ದಾನೆ ಸಿಕ್ಕಿರುವ ಕೆಲಸವನ್ನು ನಿಷ್ಠೆಯಿಂದ ಮಾಡದೆ ಪ್ರತಿ ಕ್ಷಣವೂ ಕೆಲಸವನ್ನು ಬದಲಾಯಿಸುವುದರ ಬಗ್ಗೆನೇ ಯೋಚಿಸುತ್ತಿರುತ್ತಾನೆ.ಯಾಕೆ ಈ ರೀತಿ ಯೋಚನೆ ಮಾಡುತ್ತಿರುತ್ತಾನೆ ಎಂಬುದರ ಕಾರಣ ಹುಡುಕುತ್ತಾ ಹೋದರೆ ಅವನಿಗೆ ಕಂಪನಿಯಲ್ಲಿ ಮರ್ಯಾದಿ ಸಿಗುತ್ತಿಲ್ಲ. ಪ್ರತಿಯೊಬ್ಬರು ನನ್ನನ್ನು ಬಯ್ಯೋದರಲ್ಲೆ ಇರುತ್ತಾರೆ. ಎಲ್ಲಾರೂ ನನ್ನನ್ನು ಗುರಾಯಿಸುತ್ತಾರೆ ಎಂದು ಕಾರಣ ಹೇಳುತ್ತಾರೆ. ಯಾಕೆ ಈ ರೀತಿ ಬಯ್ಯುತ್ತಾರೆ ಎಂಬುದರ ಬಗ್ಗೇನು ಆಲೋಚನೆ ಮಾಡ ಹೊರಟರೆ ನೀನು ಸರಿಯಾಗಿ ಕೆಲಸ ಕಲಿತಿರುವುದಿಲ್ಲ. ನೀನು ತುಂಬಾ ನಿಧಾನವಾಗಿ ಕೆಲಸ ಮಾಡುತ್ತಿರುತ್ತೀಯಾ. ಯಾಕೆಂದರೆ ನೀನು ಇನ್ನು ಕೆಲಸವನ್ನೇ ಕಲಿತಿಲ್ಲ. ನೀನು ವಿದ್ಯಾಭ್ಯಾಸವನ್ನೆನೋ ಚೆನ್ನಾಗಿ ಮಾಡಿದ್ದೀಯಾ ಸಾಕಷ್ಟು ಅಂಕಗಳನ್ನು ಪಡೆದುಕೊಂಡಿರುತ್ತೀಯಾ ಪದವಿಯನ್ನು ಪಡೆದುಕೊಂಡಿರುತ್ತೀಯಾ ಆದರೆ ಒಂದು ಸಂಸ್ಥೆಯಲ್ಲಿ ಕೆಲಸ ಮಾಡಬೇಕೆಂದರೆ ಅದಕ್ಕೆ ತಕ್ಕ ಅರ್ಹತೆಗಳನ್ನು ಗಳಿಸಿಕೊಂಡಿರಬೇಕು.
ವಿದ್ಯಾಭ್ಯಾಸವನ್ನು ಪಡೆದುಕೊಂಡ ಮಾತ್ರಕ್ಕೆ ನೀನು ಎಲ್ಲಾ ಗೌರವಗಳಿಗೆ ಬಾಜನರಾಗುವುದಿಲ್ಲ. ಕಂಪನಿಯಲ್ಲಿ ನೀನು ಸಕಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದರೆ ಮೊದಲು ನೀನು ಕಂಪನಿಗಾಗಿ ಕೆಲಸ ಮಾಡಬೇಕು. ಕಂಪನಿಗೆ ಅವಶ್ಯವಿರುವ ಕೆಲಸದಲ್ಲಿ ನೀನು ನಿರತನಾಗಿರಬೇಕು.ಕಂಪನಿಗೆ ನಿನ್ನಿಂದ ಲಾಭವಿದ್ದರೆ ಮಾತ್ರ ನಿನಗೆ ಸಕಲ ಗೌರವಗಳು ಸಿದ್ದಿ .
ಹೊಸದಾಗಿ ಕೆಲಸಕ್ಕೆ ಸೇರಿರುವ ನೀನು ಮೊದಲಿಗೆ ನಿನ್ನ ಸ್ಥಾನ ಹೇಗೆಂದರೆ, ಮೂಲೆಯಲ್ಲಿ ಬಿದ್ದಿರುವ ಕಬ್ಬಿಣದ ಕಿಣುಕಿನ ತರ ನಿನ್ನನ್ನು ಒಂದು ಕಂಪನಿ ಕೆಲಸಕ್ಕೆ ಸೇರಿಸಿಕೊಂದರೆ ನೀನು ಕುಲುಮೆಯಲ್ಲಿ ಬಿದ್ದಿರುವೆ. ನೀನ್ನನ್ನು ಚೆನ್ನಾಗಿ ಕಾಯಿಸುತ್ತಾರೆ. ನಂತರ ಬೆಂಕಿಯಿಂದ ಹೊರತೆಗೆದು ಕಬ್ಬಿಣವನ್ನು ಸುತ್ತಿಗೆಯಿಂದ ಬಡಿಯುತ್ತಾರೆ. ಮೇಲೆ ಕೆಳಗೆ ಮಾಡಿ ಬಡಿಯುತ್ತಾರೆ. ಅಂದರೆ ನಿನ್ನನ್ನು ಬೈದು ಬೈದು ತಿದ್ದುತ್ತಾರೆ.
ಚೆನ್ನಾಗೆ ಏಟುತಿಂದ ಕಬ್ಬಿಣ ಕೊನೆಗೆ ಹರಿತವಾದ ಆಯುಧವಾಗುತ್ತದೆ. ನಂತರ ಅವರು ಕಾಯಿಸಿ ಬಡಿದ ಅದೇ ಜನ ಅದನ್ನು ಮುಟ್ಟಲು ಹೆದರುತ್ತಾರೆ. ಅದೇ ರೀತಿಯೂ ಬೈಸಿಕೊಂಡವರಿಂದಲೆ ಕೆಲಸ ಕಲಿತ ನಿನ್ನನ್ನು ಮುಟ್ಟಲು ಹೆದರುತ್ತಾರೆ. ಆಕೆ ಹೆದರುತ್ತಾರಂದರೆ. ನೀನು ಅವರಿಗಿಂತ ಚೆನ್ನಾಗಿ ಕೆಲಸ ಮಾಡುತ್ತಿರುತ್ತೀಯಾ. ಅದೇ ರೀತಿ ಕಂಪನಿಯಲ್ಲಿ ಕೆಲಸ ಮಾಡುವಾಗ ನಿನ್ನನ್ನು ಬೈಯುತ್ತಾರೆಂದರೆ ಅವರಿಗೆ ನಿನ್ನ ಮೇಲೆ ದ್ವೇಷವಿದೆ ಎಂದಲ್ಲ . ಬದಲಿಗೆ ಅವರು ನಿನ್ನನ್ನು ಹರಿತವಾದ ಆಯುಧ ಮಾಡಲು ಹೊರಟಿದ್ದಾರೆಂದು ಅರ್ಥ.