ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಜೂನ್.21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಮೈಸೂರಿಗೆ ಆಗಮಿಸಲಿದ್ದಾರೆ. ಅವರು ಹಾದು ಹೋಗುವಂತ ಮಾರ್ಗಗಳ ಶಾಲಾ-ಕಾಲೇಜುಗಳಿಗೆ ರಜೆಯನ್ನು ಸರ್ಕಾರ ಘೋಷಿಸಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿದ್ಯಾರ್ಥಿಗಳೇನು ಉಗ್ರಗಾಮಿಗಳಾ ಎಂಬುದಾಗಿ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪ್ರಧಾನಿ ನರೇಂದ್ರ ಮೋದಿಯವರು ಹಾದು ಹೋಗುವಂತ ಮಾರ್ಗದ ಕಾಲೇಜುಗಳಿಗೆ ಯಾಕ್ ರಜೆ ಕೊಡಬೇಕು. ವಿದ್ಯಾರ್ಥಿಗಳು ಏನ್ ಗಲಾಟೆ ಮಾಡ್ತಾರಾ.? ಅವರನ್ನು ಯಾಕ್ ಅನುಮಾನದಿಂದ ನೋಡಬೇಕು.? ನಮ್ಮ ವಿದ್ಯಾರ್ಥಿಗಳೇನು ಟೆರರಿಸ್ಟಾ.? ಎಂಬುದಾಗಿ ವಾಗ್ದಾಳಿ ನಡೆಸಿದ್ದಾರೆ.
ಮಂತ್ರಿಗಳು ತಮ್ಮ ಮಕ್ಕಳನ್ನು ಸೇನೆಗೆ ಕಳುಹಿಸಲಿ ನೋಡೋಣ.. ಮಂತ್ರಿಗಳ ಮಕ್ಕಳು ಮಾತ್ರ ಇಂಜಿನಿಯರ್, ಡಾಕ್ಟರ್ ಆಗಬೇಕು. ಬಡವರ ಮಕ್ಕಳು ಮಾತ್ರ ಸೆಕ್ಯೂರಿಟಿ ಗಾರ್ಡ್ ಗಳಾಗಬೇಕಾ.? ಮೋದಿ ಬಂದು ಹೋಗಲಿ ಬೇಡ ಅನ್ನೋದಿಲ್ಲ. ಆದ್ರೇ ಅದಕ್ಕಾಗಿ ಅವರು ಸಾಗುವ ಮಾರ್ಗದ ಕಾಲೇಜುಗಳಿಗೆ ರಜೆ ಯಾಕ್ ಕೊಡಬೇಕು ಎಂಬುದಾಗಿ ಕಿಡಿಕಾರಿದರು.




