‘ಆಪರೇಷನ್ ಮಹಾದೇವ್’ ಯಾಕೆ ಈ ಹೆಸರು?

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಹಾಗೂ ಪೊಲೀಸರು ಜಂಟಿಯಾಗಿ ಆಪರೇಷನ್ ಮಹಾದೇವ್ ನಡೆಸಿ ಪಹಲ್ಗಾಮ್​ ದಾಳಿಯ ಮಾಸ್ಟರ್​ ಮೈಂಡ್ ಸೇರಿ ಮೂವರು ಉಗ್ರರನ್ನು ಸದೆಬಡಿದಿದ್ದಾರೆ. ಶ್ರೀನಗರದ ದಾಚೀಗಾಮ್​​ನಲ್ಲಿ ನಡೆದ ಭೀಕರ ಎನ್​​ಕೌಂಟರ್​​​ನಲ್ಲಿ ಮಾಸ್ಟರ್ ಮೈಂಡ್ ಸೇರಿ ೩ ಉಗ್ರರನ್ನು ಹತ್ಯೆಗೈಯ್ಯಲಾಗಿದೆ.

ಈ ಮೂಲಕ ಕಾಶ್ಮೀರದಲ್ಲಿ ಭಯೋತ್ಪಾದಕರ ಅಡಗು ತಾಣವನ್ನು ನಿಗದಿಮಾಡಿ, ಭಾರತೀಯ ಭದ್ರತಾ ಪಡೆಗಳು ನಡೆಸಿದ ಯಶಸ್ವಿ ಕಾರ್ಯಾಚರಣೆ ‘ಆಪರೇಷನ್ ಮಹಾದೇವ್’ ಸದ್ಯ ಇಡೀ ದೇಶದ ಗಮನಸೆಳೆಯುತ್ತಿದೆ.

ಹಾಗಾದ್ರೆ ಈ ಆಪರೇಷನ್ ಮಹಾದೇವ್ ಎಂದು ಹೆಸರಿಟ್ಟಿದ್ದೇಕೆ?
ಯಾಕಂದ್ರೆ ಶ್ರೀನಗರದ ಬಳಿ ಜಬರ್ವಾನ್ ಪರ್ವತಶ್ರೇಣಿಯಲ್ಲಿ ‘ಮಹಾದೇವ್’ ಅನ್ನೋ ಪವಿತ್ರ ಶಿಖರವಿದೆ. ಹಿಂದೂ ಶ್ರದ್ಧೆಯ ಪ್ರಕಾರ, ಶಿವನು ಅಮರನಾಥ ಗುಹೆಗೆ ಸಾಗಿದ ಮಾರ್ಗ ಇದೇ. ಇದರಿಂದಾಗಿ, ದೇಶಭಕ್ತಿಯ ದ್ವನಿ ಎತ್ತುವಂತೆ ಈ ಕಾರ್ಯಾಚರಣೆಗೆ ಮಹಾದೇವ್ ಎಂಬ ಹೆಸರನ್ನುನೀಡಲಾಯಿತು.

ಇನ್ನು ‘ಆಪರೇಷನ್ ಮಹಾದೇವ್’ ಹೇಗೆ ನಡಿತು? ಅನ್ನೋದನ್ನ ನೋಡೋದಾದ್ರೆ…. ಏಪ್ರಿಲ್ 22, 2024 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭದ್ರತಾ ಪಡೆಗಳು ತೀವ್ರ ಹುಡುಕಾಟದಲ್ಲಿದ್ದವು. ಸುಮಾರು 14 ದಿನಗಳ ತನಿಖೆಯ ಬಳಿಕ, ಶಕ್ತಿಶಾಲಿ ಚೀನೀ ಅಲ್ಟ್ರಾ-ಹೈ-ಫ್ರೀಕ್ವೆನ್ಸಿ ರೇಡಿಯೋ ಸಿಗ್ನಲ್ ಪತ್ತೆಯಾಗಿದ್ದು, ಅದು ಎಲ್‌ಇಟಿ ಭಯೋತ್ಪಾದಕರು ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳಿಗಾಗಿ ಬಳಸುತ್ತಿದ್ದ ಸಂಪರ್ಕ ಸಾಧನ ಎಂದು ಗುರುತಿಸಲಾಯಿತು. ಪಹಲ್ಗಾಮ್ ದಾಳಿಯಲ್ಲಿಯೂ ಇದೇ ಸಾಧನ ಬಳಸಲಾಗಿತ್ತು.

ಉಗ್ರರು ಎರಡೇ ದಿನಗಳ ಕಾಲ ಈ ಸಂವಹನ ಸಾಧನವನ್ನು ಬಳಸಿದ ವೇಳೆ, ಅವರ ಅಡಗು ಸ್ಥಳದ ನಿಖರ ಹುದ್ದೆ ಭದ್ರತಾ ಸಿಬ್ಬಂದಿಗೆ ಲಭ್ಯವಾಯಿತು. ಅವರು ದಾಚೀಗಾಮ್ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದರು. ಸ್ಥಳೀಯ ಅಲೆಮಾರಿಗಳ ಸಹಾಯದಿಂದ ಪಡೆಗಳು ಪುನಃ ಪ್ರದೇಶವನ್ನು ಸುತ್ತುವರಿದು, ತಂತ್ರಜ್ಞಾನದ ಆಧಾರದ ಮೇಲೆ ಸಂಚಲನಕಾರಿ ಕ್ರಮ ಕೈಗೊಂಡವು.

ಈ ಪ್ರದೇಶದಲ್ಲಿಯೇ 2024ರ ನವೆಂಬರ್ 10 ರಂದು ಎನ್‌ಕೌಂಟರ್ ನಡೆದಿದೆ. ಆದರೆ, ಉಗ್ರರು ಪರ್ವತ ಪ್ರದೇಶದ ಪ್ರಯೋಜನ ಪಡೆದು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ನಂತರ ಡಿಸೆಂಬರ್ 3 ರಂದು ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಜುನೈದ್ ಭಟ್ ಹತ್ಯೆಯಾಗಿದ್ದಾನೆ. ಆಪರೇಷನ್ ಮಹಾದೇವ್‌ ಮೂಲಕ ಭಾರತ ಭದ್ರತಾ ಪಡೆಗಳು ಯಾವ ಮಟ್ಟದ ತ್ಯಾಗಕ್ಕೂ ಸಿದ್ಧ ಅಂತ ಮತ್ತೊಮ್ಮೆ ತೋರಿಸಿ ಕೊಟ್ಟಿವೆ.

ವರದಿ : ಲಾವಣ್ಯ ಅನಿಗೋಳ

About The Author