ಕೆ.ಎನ್ ರಾಜಣ್ಣ ಅವರನ್ನು ಸಿದ್ದರಾಮಯ್ಯ ಸಂಪುಟದಿಂದ ಕೈ ಬಿಡಲಾಗಿದೆ. ರಾಜಣ್ಣ ಅವರ ವಜಾ ಕೇವಲ ಒಂದೇ ಒಂದು ದಿನದಲ್ಲಿ ನಡೆದಿರೋ ಬೆಳವಣಿಗೆಯಲ್ಲ. ರಾಜಣ್ಣ ಕಿಕ್ ಔಟ್ ಆದ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಮುನ್ನಡೆಯಾದ್ರೆ, ಸಿದ್ದರಾಮಯಯ್ಯ ಬಣಕ್ಕೆ ಆದ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ರಾಜಣ್ಣ ಸಂಪುಟದಿಂದ ವಜಾಗೊಂಡಿದ್ದಕ್ಕೆ 4 ಪ್ರಮುಖ ಬೆಳವಣಿಗೆಗಳು ಕಾರಣವಾಗಿವೆ.
ನಂಬರ್ 1:
ಕಾಂಗ್ರೆಸ್ ಸರ್ಕಾರ ರಚನೆಯಾದ ದಿನದಿಂದಲೂ, ಕೆ.ಎನ್. ರಾಜಣ್ಣ ವಿವಾದಗಳಿಂದಲೇ ಗುರುತಿಸಿಕೊಂಡವರು. ಆರಂಭದಲ್ಲೇ ರಾಜಣ್ಣ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸುವ ಬಗ್ಗೆ ಮೊದಲು ಧ್ವನಿ ಎತ್ತಿದ್ರು. ಇದರಂದ ಡಿಸಿಎಂ ಡಿಕೆಶಿ ಹಾಗೂ ರಾಜಣ್ಣ ನಡುವೆ ತೀವ್ರ ಅಸಮಾಧಾನ ಉಂಟಾಗಿತ್ತು. ಆ ವೇಳೆ ರಾಜಣ್ಣ ವಿರುದ್ಧ, ಹೈಕಮಾಂಡಿಗೆ ಡಿಕೆಶಿ ದೂರು ನೀಡಿದ್ರು. ಆದರೆ ಹೈಕಮಾಂಡ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ನಂಬರ್ 2:
ಇದಾದ ಬಳಿಕ ಹೆಚ್ಚುವರಿ ಡಿಸಿಎಂ ಹುದ್ದೆ ವಿಚಾರವಾಗಿ, ರಾಜಣ್ಣ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಮುಂದಾದ ಹೈಕಮಾಂಡ್, ಈ ಕುರಿತು ಯಾರೂ ಹೇಳಿಕೆ ನೀಡದಂತೆ ವಾರ್ನ್ ಮಾಡಿತ್ತು. ಎಚ್ಚರಿಕೆ ಬಳಿಕ ಎಲ್ಲರೂ ಸೈಲೆಂಟ್ ಆಗಿದ್ರು. ಆದ್ರೆ, ರಾಜಣ್ಣ ಮಾತ್ರ ಸೈಲೆಂಟ್ ಆಗಲೇ ಇಲ್ಲ. ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಲೇ ಇದ್ದರು. ಸಿದ್ದರಾಮಯ್ಯ ಪರವಾಗಿ, ಬ್ಯಾಟಿಂಗ್ ಮಾಡುತ್ತಲೇ ಬಂದಿದ್ರು. 5 ವರ್ಷ ಸಿದ್ದರಾಮಯ್ಯರೇ ಸಿಎಂ ಎಂಬ ವಾದವನ್ನು ಬಲವಾಗಿ ಮಂಡಿಸುತ್ತಿದ್ರು. ಈ ವೇಳೆ ದಿಲ್ಲಿಗೆ ತೆರಳಿದ್ದ ಡಿಕೆಶಿ, ಮತ್ತೆ ಹೈಕಮಾಂಡ್ ನಾಯಕರಿಗೆ ದೂರು ನೀಡಿದ್ದರು.
ನಂಬರ್ 3:
ಇಷ್ಟೆಲ್ಲಾ ಆದ್ರೂ ರಾಜಣ್ಣ ಬಾಯಿಮುಚ್ಚಿ ಕೂರಲೇ ಇಲ್ಲ. ದಲಿತ ಸಚಿವರು, ಶಾಸಕರಲ್ಲಿ ಸಕ್ರಿಯವಾಗಿದ್ರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಆಗಲೇಬೇಕೆಂದು ಪಟ್ಟು ಹಿಡಿದಿದ್ರು. ಒಂದು ಹಂತಕ್ಕೆ ಮುಂದಕ್ಕೆ ಹೋಗಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಸಭೆಗೂ ಗೈರಾದ್ರು. ಅಧಿಕಾರಿಗಳ ಜೊತೆ ಸಭೆ ನಡೆಸುವ ಅಧಿಕಾರ ಇಲ್ಲ ಅಂತಾ, ಬಹಿರಂಗವಾಗೇ ಅಸಮಾಧಾನ ಹೊರಹಾಕಿದ್ರು. ಇದು ರಾಜಣ್ಣ ವಿರುದ್ಧ ಹೈಕಮಾಂಡ್ ಮಟ್ಟದಲ್ಲಿ ಅಭಿಪ್ರಾಯ ರೂಪುಗೊಳ್ಳಲು ಕಾರಣವಾಗಿತ್ತು.
ನಂಬರ್ 4:
ಈ ಮಧ್ಯೆ, ರಾಜ್ಯದಲ್ಲಿ ಮತ ಕಳ್ಳತನ ಬಗ್ಗೆ ಹೋರಾಟ ನಡೆಸಲಾಯ್ತು. ಇದೇ ವೇಳೆ, ಮತಪಟ್ಟಿ ಪರಿಷ್ಕರಣೆ ಆಗಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಅಂತಾ ರಾಜಣ್ಣ ಹೇಳಿದ್ರು. ಇದು ಪಕ್ಷದ ನಾಯಕ್ವಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು. ಇದೇ ಅವಕಾಶಕ್ಕಾಗಿ ಕಾಯುತ್ತದ್ದ ಕೆಲವರು, ರಾಜಣ್ಣ ವಿರುದ್ಧ ಮತ್ತೆ ಹೈಕಮಾಂಡ್ ಗಮನ ಸೆಳೆದಿದ್ದರು. ಅಂತಿಮವಾಗಿ ಸಿದ್ದರಾಮಯ್ಯಗೆ ಫೋನ್ ಮೂಲಕ, ರಾಜಣ್ಣ ವಜಾಗೊಳಿಸುವಂತೆ ಸೂಚನೆ ನೀಡಿದೆ.
ಕೆ.ಎನ್ ರಾಜಣ್ಣ ಅವರು ಸಿದ್ದರಾಮಯ್ಯರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಸದಾ ಕಾಲ ಸಿಎಂ ಪರವಾಗೇ ಬ್ಯಾಟಿಂಗ್ ಮಾಡುತ್ತಿದ್ರು. ಡಿಕೆಶಿ ವಿರುದ್ಧ ಬಹಿರಂಗವಾಗೇ ಸಮರ ಸಾರಿದ್ರು. ಅದೇ ರಾಜಣ್ಣ ಸಂಪುಟದಿಂದ ವಜಾಗೊಂಡಿರುವುದು, ಸಿದ್ದರಾಮಯ್ಯ ಅವರಿಗಾದ ನೇರ ಹಿನ್ನಡೆ ಎಂದೇ ಭಾವಿಸಲಾಗಿದೆ. ಈ ವಜಾ ತಡೆಯುವ ಪ್ರಯತ್ನ ನಡೆಸಿದ್ರೂ ಯಶಸ್ವಿ ಆಗಿಲ್ಲ. ಹೈಕಮಾಂಡ್ ಸೂಚನೆ ಪಾಲಿಸೋದು, ಸಿದ್ದರಾಮಯ್ಯಗೆ ಅನಿವಾರ್ಯವಾಯಿತು ಎಂದು, ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.