‘ವಿವಾಹ ವಾರ್ಷಿಕೋತ್ಸವ’ದಂದೇ ಪತ್ನಿ ನಾಪತ್ತೆ: ಹುಡುಕಲು ಮಾಡಿದ ಖರ್ಚು ಎಷ್ಟು ಗೊತ್ತಾ.?

ಆಂಧ್ರಪ್ರದೇಶ: ಆ ದಂಪತಿಗಳು ಸಮುದ್ರ ದಂಡೆಯಲ್ಲಿ ತಮ್ಮ 2ನೇ ವರ್ಷದ ವಿವಾಹ ವಾರ್ಷಿಕೋತ್ಸದಂದೇ ಸಮುದ್ರದ ಬಳಿಯಲ್ಲಿ ವಾಯುವಿಹಾರಕ್ಕೆ ತೆರಳಿದ್ದಾಗ, ಪತ್ನಿ ದಿಢೀರ್ ನಾಪತ್ತೆಯಾಗಿದ್ದಳು. ಆ ಮಹಿಳೆಯ ಪತ್ತೆಗಾಗಿ ಭಾರತೀಯ ವಾಯುಪಡೆಯ ಹೆಲಿಕ್ಯಾಪ್ಟರ್ ಸೇರಿದಂತೆ ಸ್ಥಳೀಯ ಪೊಲೀಸರು ನಡೆಸಿದ ಕಾರ್ಯಾಚರಣೆಯ ಖರ್ಚೆ ಈಗ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಹಾಗಾದ್ರೇ ಆ ಖರ್ಚು ಎಷ್ಟು.? ಅದೆಲ್ಲಿ..? ಸಿಕ್ಕಿದ್ದು ಹೇಗೆ ಎನ್ನುವ ಮಾಹಿತಿ ಮುಂದೆ ಓದಿ..

ಆಂಧ್ರಪ್ರದೇಶದ ವೈಜಾಗ್ ನ ಆರ್ ಕೆ ಬೀಚ್ ನಲ್ಲಿ ಶ್ರೀಪಿಯಾ ಎಂಬಾಕೆ ತಮ್ಮ ಪತ್ನಿಯೊಂದಿಗೆ 2ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ವಾಯುವಿಹಾರಕ್ಕೆ ತೆರಳಿದ ವೇಳೆ, ದಿಢೀರ್ ಕಣ್ಮರೆಯಾಗಿದ್ದಳು. ಈ ಬಗ್ಗೆ ಪತಿ ಪೊಲೀಸರಿಗೆ ದೂರು ನೀಡಿದ ಬಳಿಕ, ಆಕೆಯ ಪತ್ತೆಗಾಗಿ ಭಾರತೀಯ ವಾಯುಪಡೆಯ ಹೆಲಿಕ್ಯಾಪ್ಟರ್, ಸ್ಥಳೀಯ ಪೊಲೀಸರು, ಸ್ಥಳೀಯ ಈಜುಗಾರರ ಜೊತೆಗೊಡಿ ಸಮುದ್ರದಲ್ಲಿ ಪತ್ತೆಗಾಗಿ ಶೋಧಕಾರ್ಯಾಚರಣೆ ನಡೆಸಿದರು.

ಒಂದೆಡೆ ಭಾರತೀಯ ವಾಯುಪಡೆಯ ನೆರವಿನಿಂದ ಸಮುದ್ರ ತೀರದಲ್ಲಿ ನಾಪತ್ತೆಯಾಗಿದ್ದಂತ ಶ್ರೀಪಿಯಾ ಹುಡುಕಾಟ ನಡೆಸುತ್ತಿದ್ದರೇ, ಮತ್ತೊಂದೆಡೆ ಆಕೆ ನೆಲ್ಲೂರಿನಲ್ಲಿ ಪ್ರಿಯಕರನೊಂದಿಗೆ ಪತ್ತೆಯಾಗಿರೋದಾಗಿ ಮಾಹಿತಿ ತಿಳಿದು ಬಂದಿದೆ.

ಆಕೆಯೊಂದಿಗೆ ಓಡಿಹೋದ ವ್ಯಕ್ತಿಯ ಪೋಷಕರು, ಪತಿ ಮತ್ತು ಕುಟುಂಬಸ್ಥರು ಶ್ರೀಪ್ರಿಯಾ ಅಕ್ರಮ ಸಂಬಂಧದಿಂದಾಗಿ ಇದೀಗ ಮುಜುಗರಕ್ಕೊಳಗಾಗಿದ್ದಾರೆ.

ಆದರೆ ಮಾನವೀಯ ಕಾಳಜಿಯಿಂದ ಎರಡು ದಿನಗಳಿಂದ ಶೋಧ ಕಾರ್ಯಾಚರಣೆಗಳನ್ನು ಭಾರತೀಯ ನೌಕಾಪಡೆ, ಕೋಸ್ಟ್ ಗಾರ್ಡ್ ಹಾಗೂ ಸ್ಥಳೀಯ ಪೊಲೀಸರು ನಡೆಸಿದ್ದರು. ಇದಕ್ಕಾಗಿ ಒಂದು ಕೋಟಿಯಷ್ಟು ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಅಲ್ಲದೇ ವ್ಯರ್ಥವಾಗಿ ಇಷ್ಟು ಹಣ ಖರ್ಚು ಮಾಡಿದ್ದಾರೆ ಎಂಬುದಾಗಿ ಆರೋಪಿಸಿ, ಆಕ್ರೋಶ ಕೂಡ ವ್ಯಕ್ತ ಪಡಿಸಿದ್ದಾರೆ.

About The Author