ಶಿವಮೊಗ್ಗದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರನ್ನು ಕ್ರೂರವಾಗಿ ಕೊಲೆ ಮಾಡಿರೋದು ಸಾಬೀತಾಗಿದೆ. ಪತ್ನಿ ಹಾಗೂ ಪ್ರಿಯಕರನಿಗೆ ಮರಣ ದಂಡನೆ ವಿಧಿಸಿ, ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
2016ರ ಜುಲೈ 7ರಂದು ಭದ್ರಾವತಿಯ ಜನ್ನಾಪುರದಲ್ಲಿ, ಶಿಕ್ಷಕ ಇಮ್ತಿಯಾಜ್ ಅಹಮದ್ ಕೊಲೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ನ್ಯೂ ಟೌನ್ ಠಾಣೆ ಪೊಲೀಸರು, ಇಮ್ತಿಯಾಜ್ ಪತ್ನಿ, ಶಿಕ್ಷಕಿಯಾಗಿದ್ದ ಲಕ್ಷ್ಮೀ, ಆಕೆಯ ಪ್ರೇಮಿ ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ ಹಾಗೂ ಆತನ ಸ್ನೇಹಿತ ಶಿವರಾಜ್ ಅಲಿಯಾಸ್ ಶಿವುನನ್ನ ಬಂಧಿಸಿದ್ರು.
ಇಮ್ತಿಯಾಜ್ ಹಾಗೂ ಲಕ್ಷ್ಮೀ ಪ್ರೀತಿಸಿ ಮದುವೆಯಾಗಿದ್ರು. ಬಳಿಕ ಬಾಲ್ಯ ಸ್ನೇಹಿತ ಕೃಷ್ಣಮೂರ್ತಿ ಜೊತೆ ಲಕ್ಷ್ಮೀ ಅನೈತಿಕ ಸಂಬಂಧ ಬೆಳೆಸಿದ್ಲು. ಇದಕ್ಕೆ ವಿರೋಧಿಸಿದ್ದ ಇಮ್ತಿಯಾಜ್‌ನನ್ನ, ಜನ್ನಾಪುರದ ಮನೆಯಲ್ಲಿ ಕೊಲೆ ಮಾಡಿದ್ರು. ತಲೆಗೆ ರಾಡ್, ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ರು. ಬಳಿಕ ಮೃತದೇಹವನ್ನ ನೈಲಾನ್ ದಾರದಲ್ಲಿ ಕಟ್ಟಿ ಭದ್ರಾವತಿಯ ಹೊಸ ಸೇತುವೆ ಸಮೀಪ, ಭದ್ರಾ ನದಿಯಲ್ಲಿ ಎಸೆಯಲಾಗಿತ್ತು.
ತನಿಖೆ ನಡೆಸಿದ್ದ ಭದ್ರಾವತಿ ನಗರ ವಿಭಾಗದ ಆಗಿನ ಇನ್ಸ್‌ಪೆಕ್ಟರ್‌ಗಳಾದ ಪ್ರಭು, ಚಂದ್ರಶೇಖರ್, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ರು. ವಿಚಾರಣೆ ನಡೆಸಿದ್ದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್, ಮರಣದಂಡನೆ ವಿಧಿಸಿ ತೀರ್ಪು ಕೊಟ್ಟಿದ್ದಾರೆ.