Sunday, October 5, 2025

Latest Posts

ಹೆಂಡ್ತಿಗೆ ಜೈಲಿಗೆ ಬರಬೇಡ ಎಂದ ದರ್ಶನ್

- Advertisement -

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಹಲವು ದಿನಗಳಿಂದ ಸೆರೆವಾಸದಲ್ಲಿರುವ ನಟ ದರ್ಶನ್‌ಗೆ, ನರಕದಂತ ಸ್ಥಿತಿ ಎದುರಾಗಿದೆ. ಹೆಚ್ಚುವರಿ ಹಾಸಿಗೆ, ದಿಂಬಿಗಾಗಿ ಕೋರ್ಟ್‌ ಮೊರೆ ಹೋದ್ರೂ, ಜೈಲಾಧಿಕಾರಿಗಳು ಕೊಟ್ಟಿಲ್ಲ ಎನ್ನಲಾಗಿದೆ. ಇನ್‌ಫೆಕ್ಷನ್‌ಗೆ ಒಳಗಾಗಿರುವ ದರ್ಶನ್‌ ಅಕ್ಷರಶಃ ಕುಸಿದು ಹೋಗಿದ್ದಾರೆ.

ಅಕ್ಟೋಬರ್‌ 3ರಂದು ಜೈಲಿನಲ್ಲಿರುವ ದರ್ಶನ್‌ರನ್ನು, ಪತ್ನಿ ವಿಜಯಲಕ್ಷ್ಮೀ ಭೇಟಿಯಾಗಿದ್ದಾರೆ. ಪತಿಯ ಕಷ್ಟ ನೋಡಿ ವಿಜಯಲಕ್ಷ್ಮೀ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಆ ವೇಳೆ ಯಾವುದೇ ಆಕ್ಟಿವಿಟಿ ಇಲ್ಲದೇ ತುಂಬಾ ಕಷ್ಟವಾಗ್ತಿದೆ ಅಂತಾ ದರ್ಶನ್‌ ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ವಿಜಯಲಕ್ಷ್ಮೀ ಕಣ್ಣೀರು ನೋಡಿದ ದಚ್ಚು, ನನ್ನ ಹಣೆ ಬರಹ ಇದ್ದಂಗೆ ಆಗುತ್ತೆ. ಸಾಮಾನ್ಯ ಎಂಟ್ರಿ ಮಾಡಿಸಿ ಬರಲು ಗಂಟೆಗಟ್ಟಲೇ ಕಾಯಬೇಕು. ನೀನು ಜೈಲಿಗೆ ಬರೋದು ಬೇಡ ಅಂತಾ ಹೇಳಿದ್ದಾರಂತೆ.

ಮೊದಲ ಬಾರಿಗೆ ನಟ ದರ್ಶನ್‌ ಜೈಲನ್ನೇ ರೆಸಾರ್ಟ್‌ ರೀತಿ ಬದಲಾಯಿಸಿಕೊಂಡಿದ್ರು. ಬಿರಿಯಾನಿ, ಸಿಗರೇಟ್‌, ಟೀ, ಮಂಚ, ಹಾಸಿಗೆ, ಟಿವಿ ಜೊತೆಗೆ ಕ್ರಿಮಿನಲ್ಸ್‌ಗಳ ಜೊತೆ ಒಡನಾಟ ಇಟ್ಟುಕೊಂಡಿದ್ರು. ಈಗ 2ನೇ ಬಾರಿ ಜೈಲು ಸೇರಿರುವ ದರ್ಶನ್‌ಗೆ, ನಿಜವಾದ ಜೈಲಿನ ಅನುಭವವಾಗ್ತಿದೆ.

ಜೈಲು ಸೇರಿರುವ ದರ್ಶನ್ ಸಂಕಷ್ಟದ ಮೇಲೆ ಸಂಕಷ್ಟ ಅನುಭವಿಸ್ತಿದ್ದಾರೆ. ಜೈಲಲ್ಲಿ ಸೌಲಭ್ಯ ವಂಚಿತರಾಗಿ ಪರಿತಪಿಸುತ್ತಿರೋ ದರ್ಶನ್, ಹಾಸಿಗೆ ದಿಂಬು ನೀಡುವಂತೆ ಅಂಗಲಾಚಿದ್ರೂ ಜೈಲಾಧಿಕಾರಿಗಳು ಡೋಂಟ್ ಕೇರ್ ಎಂದಿದ್ದಾರೆ. ಹೀಗಾಗಿ ಮಲಗಲು ಹಾಸಿಗೆಯಿಲ್ಲದೆ, ಕೂರಲು ಕುರ್ಚಿ ಇಲ್ಲದೇ ಒದ್ದಾಡುತ್ತಿದ್ದಾರೆ ಎನ್ನಲಾಗಿದೆ.

- Advertisement -

Latest Posts

Don't Miss