Agra News: ಪತಿ ನನಗೆ ಹೊಡೆಯುತ್ತಾರೆ. ವರದಕ್ಷಿಣೆ ತಾ ಎಂದು ಕಿರುಕುಳ ನೀಡುತ್ತಾನೆ. ಅತ್ತೆ ಮಾವ ಪತಿ ಸೇರಿ ಮಾನಸಿಕ, ದೈಹಿಕ ಹಿಂಸೆ ನೀಡುತ್ತಾರೆ. ಪತಿಗೆ ಅಫೇರ್ ಇದೆ, ಈ ರೀತಿಯಾಗಿ ಕಾರಣ ಕೊಟ್ಟು ಹಲವು ಹೆಣ್ಣು ಮಕ್ಕಳು ಡಿವೋರ್ಸ್‌ಗಾಗಿ ಅಪ್ಲೈ ಮಾಡುತ್ತಾರೆ. ಆದ್ರೆ ಇಲ್ಲೋರ್ವ ಪತಿ ಮಾಡಿದ ಎಡವಟ್ಟಿಂದಾಗಿ, ಪತ್ನಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾಳೆ.
ಹಾಗಾದ್ರೆ ಪತಿ ಮಾಡಿದ ತಪ್ಪಾದ್ರೂ ಏನು ಅಂದ್ರೆ, ಆತ ಪ್ರತಿದಿನ ಸ್ನಾನ ಮಾಡುತ್ತಿರಲಿಲ್ಲ. ಗಂಗಾಜಲ ಸಿಂಪಡಿಸಿಕೊಂಡು, ಸುಮ್ಮನಾಗಿಬಿಡುತ್ತಿದ್ದ. ಉತ್ತರಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದ್ದು, ಕೇವಲ 40 ದಿನಕ್‌ಕೆ ನನಗೆ ಈ ವ್ಯಕ್ತಿಯ ಸಹವಾಸ ಸಾಕು ಅಂತಿದ್ದಾಳೆ ಪತ್ನಿ.
ಈ ವ್ಯಕ್ತಿ ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಸ್ನಾನ ಮಾಡುತ್ತಾನಂತೆ, ಉಳಿದ ದಿನ ಗಂಗಾಜಲ ಸಿಂಪಡಿಸಿಕೊಳ್ಳುತ್ತಾನಂತೆ. ಆದರೆ ಪತ್ನಿ ಹಲವು ಬಾರಿ, ಈ ಬಗ್ಗೆ ವಿವರಿಸಿದರೂ ಕೂಡ, ಪತ್ನಿಯ ಮಾತು ಕೇಳದ ಪತ್ನಿ, ತನ್ನ ಹಳೇಯ ಚಾಳಿ ಮುಂದುವರಿಸಿದ್ದಾನೆ. ಆದರೆ ಪತ್ನಿ ತಲೆ ತಿನ್ನುತ್ತಾಳೆ ಎಂದು ಕಳೆದ 40 ದಿನದಲ್ಲಿ 6 ಬಾರಿ ಸ್ನಾನ ಮಾಡಿದ್ದಾನೆ. ಹೀಗಾಗಿ ಆತನ ದೇಹದ ವಾಸನೆ ತಡೆಯದೇ, ಪತ್ನಿ ಆತನಿಗೆ ಡಿವೋರ್ಸ್ ನೀಡಲು ನಿರ್ಧರಿಸಿದ್ದಾಳೆ.
ಆತನ ಸಮೀಪ ಹೋದರೆ ಸಾಕು, ಗಲೀಜು ವಾಸನೆ ಬರುತ್ತದೆ. ನನಗೆ ವಾಂತಿ ಬರುತ್ತದೆ. ಹಾಗಾಗಿ ನನಗೆ ಈ ವ್ಯಕ್ತಿ ಬೇಡ ಎಂದು ತವರು ಮನೆಗೆ ಬಂದಿದ್ದಾಳೆ. ಈ ವಿಷಯ ಪತಿಯ ಅಕ್ಕಪಕ್ಕದ ಮನೆಯವರಿಗೆ ಗೊತ್ತಾದ ತಕ್ಷಣ, ಅವರು ಈತನಿಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಹಾಗಾಗಿ ಪತಿ ಮತ್ತು ಆತನ ಪೋಷಕರು, ಪತ್ನಿಯ ಮನೆಗೆ ಆಗಮಿಸಿ, ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾರೆ.
ಆದರೆ ನಾನು ಈಗಾಗಲೇ ಡಿವೋರ್ಸ್‌ಗೆ ಅರ್ಜಿ ಹಾಕಿಯಾಗಿದೆ. ನಾನು ಈತನೊಂದಿಗೆ ಎಂದಿಗೂ ಸಂಸಾರ ಮಾಡುವುದಿಲ್ಲವೆಂದು ಪತ್ನಿ ಹೇಳಿದ್ದಾಳೆ. ಅಲ್ಲದೇ, ಸ್ಥಳಕ್ಕೆ ಪೊಲೀಸರು ಆಗಮಿಸಿ, ಇವರಿಬ್ಬರನ್ನು ಮುಂದಿನ ವಾರ ಕೌನ್ಸೆಲಿಂಗ್‌ಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. ಆದರೆ ಏನೇ ಮಾಡಿದರೂ ನಾನು ರಾಜಿಯಾಗಲು ಸಾಧ್ಯವೇ ಇಲ್ಲವೆಂದು ಪತ್ನಿ ಹೇಳಿದ್ದಾಳೆ.