ಚಾಮರಾಜನಗರ: ಕೆಲವು ದಿನಗಳಿಂದ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಜಾಸ್ತಿಯಾಗಿದ್ದು ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸುತ್ತಿವೆ. ಈಗಾಗಲೆ ಇದರಿಂದ ಬಹಳಷ್ಟು ಜನ ಹೈರಾಣಾಗಿದ್ದಾರೆ. ಈಗ ಮತ್ತೆ ಕಾಡಾನೆ ದಾಳಿಗೆ ಮತ್ತೊಬ್ಬ ಯುವಕ ಆಸ್ಪತ್ರೆ ಸೇರಿದ್ದಾನೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿಯಲ್ಲಿ ಬಹಿರ್ದೆಸೆಗೆ ತೆರಳಿದ್ದ ಯುವಕನ ನಾಗೇಶ್ ಎನ್ನುವವನ ಮೇಲೆ ಕಾಡಾನೆ ದಾಳಿ ನಡೆಸಿದೆ.ಆನೆ ತನ್ನ ಸೊಂಡಿಲಿನಿಂದ ನಾಗೇಶ್ ನನ್ನು ಮನಬಂದಂತೆ ಎತ್ತಿ ಬೀಸಾಡಿದೆ.
ರಾತ್ರಿಯಿಡಿ ಯುವಕ ಕಾಡಿನಲ್ಲೆ ನರಳಾಡಿದ್ದಾನೆ ಬೆಳಿಗ್ಗೆ ಗ್ರಾಮಸ್ತರು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡದ ವೈದ್ಯರಿಗೆ ಬಲಗಾಲು ಸ್ವಾದೀನ ಕಳೆದುಕೊಂಡಿರುವುದು ಪತ್ತೆಯಾಗಿದೆ.
Bike Rider: ಹುಬ್ಬಳ್ಳಿ ಈಶ್ವರನಗರದ ಬಳಿ ಭೀಕರ ಅಪಘಾತ- ಇಬ್ಬರು ಸ್ಥಳದಲ್ಲಿ ಸಾವು…
Udyan Express: ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಅಗ್ನಿ ಅವಗಢ : ತಪ್ಪಿದ ಭಾರೀ ದುರಂತ..!