Thursday, November 13, 2025

Latest Posts

ಈ ವಾರ ಧ್ರುವಂತ್ ಔಟ್ ಪಕ್ಕಾ? ಕಿಚ್ಚನ ಮೇಲೆ ಧ್ರುವಂತ್ ಆರೋಪ !

- Advertisement -

ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ದಿಗಳ ಮೇಲೆ ಆರೋಪ ಮಾಡಿ, ಜಗಳ ಕಾರಿದ್ದಾಯ್ತು, ಈಗ ತಮ್ಮ ತಪ್ಪು ಸರಿಗಳ ಪಾಠ ಮಾಡೋ ಮೇಷ್ಟ್ರು ಮೇಲೇನೆ ಧ್ರುವಂತ್ ಕಂಪ್ಲೈನ್ ಮಾಡ್ತಿದ್ದಾರೆ. ಎಸ್, ಕಿಚ್ಚ ಸುದೀಪ್ ಅವ್ರು ತಮಗೆ ಮಾತಾಡೋಕೆ ಸ್ಪೇಸ್ ಕೊಟ್ಟಿಲ್ಲ ಅಂತ ಧ್ರುವಂತ್
ಮಾತಾಡ್ತಿರೋ ವಿಡಿಯೋ ಈಗ ಸಕ್ಕತ್ ವೈರಲ್ ಆಗ್ತಿದ್ದು,ವಿವಾದಕ್ಕೆ ಸಿಲುಕಿದೆ.ಧ್ರುವಂತ್ ಅವರಲ್ಲಿ ಅಚ್ಚರಿಯ ಬದಲಾವಣೆ ಕಂಡುಬಂದಿದೆ. ಆರಂಭದಲ್ಲಿ ಶಾಂತ ಸ್ವಭಾವದವರಾಗಿದ್ದ ಧ್ರುವಂತ್ ಈಗ ಎಲ್ಲರ ಮೇಲೆ ಕೋಪಗೊಂಡಿದ್ದಾರೆ. ರಕ್ಷಿತಾ ಶೆಟ್ಟಿ ಕುರಿತು ಅವರ ಕೋಪ, ಸುದೀಪ್ ವಿರುದ್ಧದ ಆರೋಪಗಳು ವೈರಲ್ ವಿಡಿಯೋ ಮೂಲಕ ಹೊರಬಿದ್ದಿದೆ…

ಧ್ರುವಂತ್ ಎಲ್ಲಾ ಸ್ಪರ್ಧಿಗಳಿಗಿಂತ ಭಿನ್ನ ಎನಿಸಿಕೊಂಡಿದ್ದರು. ಅವರು ಯಾರ ತಂಟೆಗೂ ಹೋಗಿ ಗಲಾಟೆ ಮಾಡುತ್ತಿರಲಿಲ್ಲ. ತಮ್ಮ ಬಗ್ಗೆ ಯಾವುದಾದರೂ ಆರೋಪ ಕೇಳಿ ಬಂದಾಗ ಆ ವಿಚಾರ ಅವರಿಗೆ ಸಾಕಷ್ಟು ಬೇಸರ ಮೂಡಿಸುತ್ತಿತ್ತು. ಆದರೆ, ಧ್ರುವಂತ್ ಅವರು ಈಗ ಸಂಪೂರ್ಣವಾಗಿ ಬದಲಾಗಿದ್ದಾರೆ. ಅವರು ಎಲ್ಲರ ಮೇಲೆ ಕೋಪಗೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಧ್ರುವಂತ್ ಅವರ ವಿಡಿಯೋ ಒಂದು ವೈರಲ್ ಆಗಿದ್ದು, ಚರ್ಚೆಯ ಕೇಂದ್ರಬಿಂದು ಆಗಿದೆ.

ಧ್ರುವಂತ್ ಅವರಿಗೆ ರಕ್ಷಿತಾ ಶೆಟ್ಟಿ ಮೇಲೆ ಕೋಪ ಇದೆ. ‘ಎಂತಾ ಗೊತ್ತುಂಟ ಗಯ್ಸ್’ ಎಂದು ರಕ್ಷಿತಾ ಶೆಟ್ಟಿ ಹೇಳೋ ಡೈಲಾಗ್​ ಧ್ರುವಂತ್​ಗೆ ಇಷ್ಟ ಆಗೋದಿಲ್ಲ. ಇದನ್ನು ಅವರು ನಿರಂತರವಾಗಿ ಹೇಳುತ್ತಿದ್ದಾರೆ. ಈ ಮೊದಲು ಮಾತನಾಡಿದ್ದ ಧ್ರುವಂತ್ ಅವರು, ‘ಮಂಗಳೂರಿನಲ್ಲಿ ಯಾರೂ ರಕ್ಷಿತಾ ರೀತಿ ಮಾತನಾಡುವುದಿಲ್ಲ’ ಎಂಬ ಆರೋಪ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಸುದೀಪ್ ಅವರು, ‘ನಮಗೆ ರಕ್ಷಿತಾ ಭಾಷೆ ಬಗ್ಗೆ ಯಾವುದೇ ತೊಂದರೆ ಇಲ್ಲ’ ಎಂದಿದ್ದರು.

ಈಗ ಧ್ರುವಂತ್ ಅವರ ವಿಡಿಯೋ ವೈರಲ್ ಆಗಿದೆ, ‘ರಕ್ಷಿತಾ ಅವರ ವಿಷಯ ಬಂದಾಗ ಏನು ಅನಿಸುತ್ತೆ ಅದನ್ನು ಹೇಳೋಕೆ ಅವಕಾಶ ಕೊಡಲ್ವೋ ಅಲ್ಲಿವರೆಗೆ ಮಾತನಾಡಲ್ಲ. ನನಗೆ ಸುದೀಪ್ ಸರ್ ಸ್ಪೇಸ್ ಕೊಡಲ್ಲ. ನಾನು ಮಾತನಾಡ್ತೀನಿ ಅಂತ ಕೊಡಲ್ಲ’ ಎಂದು ಧ್ರುವಂತ್ ಅವರು ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಇದನ್ನ ಕಿಚ್ಚನ ಅಭಿಮಾನಿಗಳು ಖಂಡಿಸಿದ್ದಾರೆ, ಧ್ರುವಂತ್ ಅವರಿಗೆ ಈ ವಾರ ಸುದೀಪ್ ಅವ್ರು ಪಾಠ ಹೇಳೋದು ಪಕ್ಕಾ ಎನ್ನಲಾಗುತ್ತಿದೆ. ಇದನ್ನು ಧ್ರುವಂತ್ ಅವರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ನನ್ನ ವ್ಯಕ್ತಿತ್ವ ಬೇರೆ ರೀತಿ ಪೊಟ್ರೆ ಆಗ್ತಿದೆ ಅಂದ್ರೆ ನಂಗೆ ಈ ಶೋನೆ ಬೇಡ, ನಾನ್ ಈ ಶೋನೆ ಬಿಟ್ಟು ಹೋಗ್ತೀನಿ ಅಂತ ಒಂದ್ಕಡೆ ಹೇಳೀದ್ರು ಧ್ರುವಂತ್, ಕಿಚ್ಚನ ಕ್ಲಾಸ್ ನಂತರ ಧಾರಾಳವಾಗಿ ತಾವು ಹೊರಗೆ ಹೋಗ್ಬಹುದು ಅಂತ ಕಿಚ್ಚನೆಧ್ರುವಂತ್ಗೆ ಗೇಟ್ ಪಾಸ್ ಕೊಡ್ತಾರಾ? ಕಾದು ನೋಡಬೇಕಾಗಿದೆ …..

ಗಾಯತ್ರಿ ಗುಬ್ಬಿ

- Advertisement -

Latest Posts

Don't Miss