ಜನಪ್ರಿಯ ರಿಯಾಲಿಟಿ ಶೋ ʻಬಿಗ್ ಬಾಸ್ ಕನ್ನಡ ಸೀಸನ್ 12ʼ ರ ಗ್ರ್ಯಾಂಡ್ ಓಪನಿಂಗ್ ಶುರುವಾಗಿದೆ. ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಕಿಚ್ಚ ಸುದೀಪ್ ನಿರೂಪಣೆಯ ಈ ಸೀಸನ್‌ನಲ್ಲಿ ಅನೇಕ ಜನರು ಭಾಗಿಯಾಗುತ್ತಿದ್ದಾರೆ. ಅದರಲ್ಲಿ ಈಗ ಎರಡನೇ ಸ್ಪರ್ಧಿಯಾಗಿ ಹಿರಿಯ ನಟಿ ಮಂಜು ಭಾಷಿಣಿ ಅಧಿಕೃತವಾಗಿ ದೊಡ್ಮನೆಗೆ ಪ್ರವೇಶ ಪಡೆಯಲಿದ್ದಾರೆ. ಜೊತೆಗೆ ಧನುಷ್ ಗೌಡ, ಡಾಗ್ ಸತೀಶ್ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಿದ್ದಾರೆ.
ಯಸ್ ಬಿಗ್ ಬಾಸ್ ಮನೆಗೆ ಎರಡನೇ ಸ್ಪರ್ಧಿಯಾಗಿ ಮಂಜು ಭಾಷಿಣಿ ಹೋಗ್ತಿದ್ದಾರೆ. ಇವರು ಕನ್ನಡ ಕಿರುತೆರೆಯೊಂದಿಗೆ ಆಳವಾದ ನಂಟು ಹೊಂದಿರುವ ನಟಿ. ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಬಡ್ಡಿ ಬಂಗಾರಮ್ಮ ಎಂಬ ನೆಗೆಟಿವ್ ಶೇಡ್‌ನ ಪಾತ್ರದಲ್ಲಿ ಅವರು ಪವರ್‌ಫುಲ್ ಅಭಿನಯವನ್ನೂ, ಪ್ರಭಾವಶಾಲಿ ನಟನೆಗೂ ಮೆಚ್ಚುಗೆ ಗಳಿಸಿದ್ದರು. ಇದು ಮಾತ್ರವಲ್ಲದೆ ʻಸಿಲ್ಲಿ ಲಲ್ಲಿʼ ಎಂಬ ಹಾಸ್ಯಧಾರಾವಾಹಿಯಲ್ಲಿ ಸಮಾಜ ಸೇವಕಿ ಲಲಿತಾಂಬಾ ಪಾತ್ರದಲ್ಲಿ ಅವರು ತಮ್ಮ ನಿರ್ದಿಷ್ಟ ಶೈಲಿಯ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಸದ್ಯ ʻಬಿಗ್ ಬಾಸ್ʼ ಹೌಸ್‌ನಲ್ಲಿ ಬಡ್ಡಿ ಬಂಗಾರಮ್ಮನ ಖದರ್ ತೋರಿಸುತ್ತಾರಾ? ಅಥವಾ ಲಲಿತಾಂಬೆಯ ರೀತಿಯ ಸಮಾಜ ಸೇವಾ ಮನಸ್ಸು ಪ್ರದರ್ಶಿಸುತ್ತಾರಾ? ಎಂಬುದು ಈಗ ಶೋ ಪ್ರೇಕ್ಷಕರಲ್ಲಿ ಭಾರೀ ಕುತೂಹಲವನ್ನು ಹುಟ್ಟಿಸಿದೆ.
ಇನ್ನು ಧನುಷ್ ಗೌಡ. ಗೀತಾ ಸೀರಿಯಲ್ ಮೂಲಕ ಫೇಮಸ್ ಆಗಿದ್ದಾರೆ. ನೂರು ಜನ್ಮಕು ನಂತಹ ದೂರದರ್ಶನ ಧಾರಾವಾಹಿಗಳಲ್ಲಿನ ಪಾತ್ರಗಳಿಗೆ ಧನುಷ್ ಗೌಡ ಹೆಸರುವಾಸಿಯಾಗಿದ್ದಾರೆ. ಬಿಗ್ ಬಾಸ್ ಕನ್ನಡ 12 ರ ಹೊಸ ಮುಖಗಳಲ್ಲಿ ಒಬ್ಬರು. ಇತ್ತೀಚೆಗೆ ತಮ್ಮ ವೈವಾಹಿಕ ಜೀವನವನ್ನು ಆರಂಭಿಸಿದ ಯುವ ನಟ ಈಗ ರಿಯಾಲಿಟಿ ಶೋನ ಸವಾಲುಗಳನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ. ಅಲ್ಲಿ ಅವರ ತೆರೆಯ ಮೇಲಿನ ಮೋಡಿ ಮತ್ತು ನಿಜ ಜೀವನದ ವ್ಯಕ್ತಿತ್ವವನ್ನು ಯಾವ ರೀತಿ ಬ್ಯಾಲೆನ್ಸ್ ಮಾಡ್ತಾರೆ ಕಾದು ನೋಡೋಣ.
ಇನ್ನು ಡಾಗ್ ಸತೀಶ್. ಡಾಗ್ ಸತೀಶ್ ಯಾರಿಗೆ ತಾನೇ ಗೊತ್ತಿಲ್ಲ. ತಮ್ಮ ಉನ್ನತ ಮಟ್ಟದ ನಾಯಿ ಸಾಕಣೆ ವ್ಯವಹಾರಕ್ಕೆ ಹೆಸರುವಾಸಿಯಾಗಿದ್ರು. ₹20 ಕೋಟಿ ಮೌಲ್ಯದ ಅಪರೂಪದ ನಾಯಿಯನ್ನ ತಂದಿದ್ರು. ಪ್ರಪಂಚದಲ್ಲೇ ಯಾರ ಬಳಿ ಕೂಡ ಇಂತಹ ನಾಯಿ ಇಲೋಲ ಅಂತಾ ಹೇಳಿ ಸಿಕ್ಕಾಪಟ್ಟೆ ಟ್ರೊಲ್ ಆಗಿದ್ರು.
ನಾಯಿ ಮೌಲ್ಯಮಾಪನ ಮತ್ತು ವಿಷಯ ರಚನೆಗೆ ಸಂಬಂಧಿಸಿದ ಹಕ್ಕುಗಳ ಕುರಿತು ಅವರು ಈ ಹಿಂದೆ ಜಾರಿ ನಿರ್ದೇಶನಾಲಯದ ಅಂದ್ರೆ ED ವಿಚಾರಣೆಗೆ ಒಳಗಾಗಿದ್ದರು. ಈಗ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಶೋ ನಲ್ಲಿ ಒಂದು ಕೋರ್ಟ್ ಅನ್ನ ಧರಿಸಿದ್ದಾರೆ. ಅದರ ಬೆಲೆ 25 ಲಕ್ಷ ಅಂತೇ.
ಯಸ್ ನೋಡಿದ್ರಲ್ಲಾ ಬಿಗ್ ಬಾಸ್ ಕನ್ನಡ ಶೋದಲ್ಲಿ ಪ್ರತೀ ಸೀಸನ್‌ನಲ್ಲಿ ನಟ-ನಟಿಯರನ್ನು ಉತ್ಸಾಹದಿಂದ ಸ್ವಾಗತಿಸಲಾಗತ್ತೆ. ಈ ಬಾರಿಯೂ ಕೂಡ ಆಕರ್ಷಣೆಯ ಎಲ್ಲ ನಟ ನಟಿಯರು ಕೂಡ ಕೇಂದ್ರ ಬಿಂದುವಾಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ʼ ಶೋ ಸೆಪ್ಟೆಂಬರ್ 28 ರಂದು ಗ್ರ್ಯಾಂಡ್ ಓಪನಿಂಗ್‌ನೊಂದಿಗೆ ಆರಂಭವಾಗಿದೆ.
ವರದಿ : ಲಾವಣ್ಯ ಅನಿಗೋಳ