ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಪ್ರವಾಸ ಮಾಡಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಾಗೂ ಪ್ರಧಾನಿ ಮೋದಿ ಭೇಟಿ ಕುರಿತ ಹೊಸ ಚರ್ಚೆಯೊಂದು ಇದೀಗ ಶುರುವಾಗಿದೆ. ಅದೇನೆಂದರೆ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಹಸ್ತಲಾಘವ ಮಾಡಿದ ನಾಯಕರೆಲ್ಲಾ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂಬ ಚರ್ಚೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.
This has gone viral after the Modi-Zelensky handshake in Kyiv, Ukraine ☺️#Zelensky #ModiZelenskyHandshake pic.twitter.com/zDPqc3aUrB
— Dr. Ashutosh Verma (Patel) (@DrVermaAshutosh) August 23, 2024
ರಷ್ಯಾ ಮೂಲದ ಸ್ಪುಟ್ನಿಕ್ ಸುದ್ದಿ ಸಂಸ್ಥೆ ಈ ಕುರಿತ ವಿಡಿಯೋವನ್ನು ಸಾಕ್ಷಿ ಸಮೇತ ವರದಿ ಮಾಡಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಕೈ ಕುಲುಕಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇದೀಗ ಅಧ್ಯಕ್ಷ ರೇಸ್ನಿಂದಲೇ ಹೊರಗೆ ಉಳಿದಿದ್ದಾರೆ. ಹಾಗೆಯೇ ಇಂಗ್ಲೆಂಡ್ನ ಬೋರಿಸ್ ಜಾನ್ಸನ್ ಅವರು ಝೆಲೆನ್ಸ್ಕಿ ಕೈ ಕುಲುಕಿದ ಮೇಲೆ ತಾವಾಗಿಯೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಇಂಗ್ಲೆಂಡ್ ಚುನಾವಣೆಯಲ್ಲಿ ಸೋತಿದ್ದ ರಿಷಿ ಸುನಾಕ್ ಕೂಡ ಅಧಿಕಾರ ತ್ಯಜಿಸಿದ್ದರು. ಚುನಾವಣೆಗೂ ಕೆಲ ದಿನಗಳ ಹಿಂದೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿ ಹ್ಯಾಂಡ್ ಶೇಕ್ ಮಾಡಿದ್ದರು. ಇತ್ತ ಜಪಾನ್ ಮಾಜಿ ಪ್ರಧಾನಿ ಪುಮಿಯೋ ಕಿಶಿಧಾ ಕೂಡ ಝೆಲೆನ್ಸ್ಕಿ ಕೈ ಕುಲುಕಿದ ಬಳಿಕವೇ ಪ್ರಧಾನಿ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದರು ಎಂಬ ಚರ್ಚೆ ಕೂಡ ಜೋರಾಗಿ ನಡೆಯುತ್ತಿದೆ. ಇಟಲಿ ಪ್ರಧಾನಿಯಾಗಿದ್ದ ಮಾರಿಯೋ ಡಂಗಿ ಕೂಡ ವೊಲೊಡಿಮಿರ್ ಭೇಟಿಯಾಗಿ ಹಸ್ತಲಾಘವ ಮಾಡಿದ್ಮೇಲೆ ಅಧಿಕಾರ ಕಳೆದುಕೊಂಡರು ಎನ್ನುವ ಮಾತಿದೆ.
ಒಟ್ನಲ್ಲಿ, ಉಕ್ರೇನ್ ಅಧ್ಯಕ್ಷರ ಜೊತೆ ಕೈ ಕುಲುಕಿದ ಬಳಿಕವೇ ಈ ಐವರು ನಾಯಕರು ಅಧಿಕಾರ ಕಳೆದುಕೊಂಡರು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ನಡೆಯುತ್ತಿದೆ. ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಹಸ್ತಲಾಘವ ಮಾಡಿದ್ದಾರೆ. ಪ್ರಧಾನಿ ಮೋದಿ ಸಹ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ. ಝೆಲೆನ್ಸ್ಕಿ ಕೈಯಲ್ಲಿ ಮೋದಿ ಭವಿಷ್ಯ ಅಡಗಿದೆ ಎಂಬ ಕುರಿತ ಬಿಸಿಬಿಸಿ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.