Wednesday, July 16, 2025

Latest Posts

ನಾಮಪತ್ರ ಹಿಂಪಡೆಯುತ್ತೇನೆ, ಕಾಂಗ್ರೆಸ್ ಪರ ಪ್ರಚಾರ ಮಾಡುತ್ತೇನೆ: ಅಜ್ಜಂಪೀರ್ ಖಾದ್ರಿ

- Advertisement -

Shiggavi News: ಶಿಗ್ಗಾವಿ: ಶಿಗ್ಗಾವಿಯಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಪಕ್ಷಾಂತರವಾಗಿ ನಾಮಪತ್ರ ಸಲ್ಲಿಸಿದ್ದ ಬಂಡಾಯ ಅಭ್ಯರ್ಥಿ ಅಜ್ಜಂ ಪೀರ್ ಖಾದ್ರಿ ತಮ್ಮ ನಾಮಪತ್ರ ಹಿಂಪಡೆಯಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಖಾದ್ರಿ,   ನಾಳೆ ಸಚಿವ ಜಮೀರ್ ಅಹ್ಮದ್ ಖಾನ್ ಜೊತೆಗೆ ತೆರಳಿ ನಾಮಪತ್ರ ವಾಪಸು ಪಡೆಯುತ್ತೇನೆ. ನಾಯಕರು ನನ್ನ ಜೊತೆಗೆ ಮಾತನಾಡಿದ್ದಾರೆ. ಟಿಕೇಟ್ ಸೀಗದೆ ಇರುವ ಕಾರಣ ಅಸಮಾಧಾನ ಆಗಿದ್ದು ನಿಜ. ನಮ್ಮ ಅಭಿಮಾನಿಗಳು ನಾಮಪತ್ರ ಸಲ್ಲಿಕೆ ಮಾಡು ಅಂತ ಒತ್ತಾಯ ಮಾಡಿದ್ದರು. ಅದಕ್ಕೆ ನಾಮಪತ್ರ ಸಲ್ಲಕೆ ಮಾಡಿದ್ದೆ. ಆದರೆ ಸಿಎಂ, ಡಿಸಿಎಂ ನಮ್ಮ ಆಪ್ತರ ಜೊತೆಗೆ ಮಾತನಾಡಿದ್ದಾರೆ. ನಾನು ಸ್ಪರ್ಧೆ ಮಾಡಿದ್ರೆ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರ ಸಲುವಾಗಿ ನಾನು ನಾಮಪತ್ರ ವಾಪಸು ಪಡೆಯುತ್ತಿದ್ದೆನೆ. ಇನ್ನೂ ಮುಂದೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವೆ. ಬಿಜೆಪಿ ಸೋಲಿಸಲು ಎಲ್ಲಾ ಪ್ರಯತ್ನ ಮಾಡುವೆ. ಈ ಬಾರಿ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದೆ ಗೆಲ್ಲಲಿದೆ ಎಂದು ಹೇಳಿದ್ದಾರೆ.

- Advertisement -

Latest Posts

Don't Miss