ವಿರಾಟ್ ಇಲ್ಲದೇ ಭಾರತ ವಿರುದ್ಧದ ಸರಣಿ ನಿರಾಸೆಯಾಗಿದೆ : ಸಿಮೋನ್ಸ್

ಟ್ರಿನಿಡಾಡ:ಅತ್ಯುತ್ತಮ ಆಟಗಾರನ ವಿರುದ್ಧದ ಕಾದಾಟವನ್ನು ನಾವು ಬಯಸುತ್ತಿದ್ದೇವು ಎಂದು ವಿಂಡೀಸ್ ಕೋಚ್ ಫಿಲ್ ಸಿಮೋನ್ಸ್ ವಿರಾಟ್ ಅವರನ್ನು ನೆನೆಸಿಕೊಂಡಿದ್ದಾರೆ.

ಭಾರತ ಮತ್ತು ಆತಿಥೇಯ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಈ ಸರಣಿಯಿಂದ ರನ್ ಮಷೀನ್ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದಾರೆ.

ವಿರಾಟ್ ಅವರನ್ನು ನೆನೆದಿರುವ ವಿಂಡೀಸ್ ಮುಖ್ಯ ಕೋಚ್ ಫಿಲ್ ಸಿಮೋನ್ಸ್, ಅತ್ಯುತ್ತಮ ಆಟಗಾರನ ವಿರುದ್ಧದ ಕಾದಾಟವನ್ನು ನಾವು ಬಯಸುತ್ತಿದ್ದೆವು. ವಿರಾಟ್ ಇರದ ಟೀಮ್ ಇಂಡಿಯಾದ ವಿಂಡೀಸ್ ಪ್ರವಾಸಿದಂದ ನಮಗೆ ಕೊಂಚ ನಿರಾಸೆಯಾಗಿದೆ ಎಂದು ತಿಳಿಸಿದ್ದಾರೆ.

ಅಚ್ಚರಿಯ ವಿಷಯವೇನೆಂದರೆ ವಿಂಡೀಸ್ ವಿರುದ್ಧ ವಿರಾಟ್ ಕಿಂಗ್ ಆಗಿದ್ದಾರೆ. 42 ಏಕದಿನ ಪಂದ್ಯಪಂದ್ಯಗಳಿಂಧ 2261 ರನ್ 66.50 ಸರಾಸರಿ 157ರನ್ ಗರಿಷ್ಠ ಸ್ಕೋರ್ 9 ಶತಕ 11 ಅರ್ಧ ಶತಕ ಸಿಡಿಸಿದ್ದಾರೆ.

About The Author