ವಿಂಡೋಸ್ ಬಳಕೆದಾರರೇ ಎಚ್ಚರ…!

Technology News:

ಮೈಕ್ರೋಸಾಫ್ಟ್ (Microsoft) ವಿಂಡೋಸ್‌ನ ಕೆಲವು ಆವೃತ್ತಿಗಳಲ್ಲಿ ಭದ್ರತಾ ಲೋಪ ಕಂಡುಬಂದಿರುವ ಬಗ್ಗೆ ವರದಿ ಮಾಡಿದ್ದು, ಮಾಲ್‌ವೇರ್, ವೈರಸ್‌ಗಳಿಂದ ವಿಂಡೋಸ್ ಅನ್ನು ರಕ್ಷಿಸುವ ಸಾಧನವಾಗಿರುವ ವಿಂಡೋಸ್ ಡಿಫೆಂಡರ್ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ.

ವಿಂಡೋಸ್​ನಲ್ಲಿ ಕಂಡುಬಂದಿರುವ ಭದ್ರತಾ ಲೋಪದ ಶ್ರೇಯಾಂಕ ‘ಹೆಚ್ಚು‘ ಎಂದು ಗುರುತಿಸಲಾಗಿದೆ. ಇದರಿಂದ ಹ್ಯಾಕರ್​ಗಳು ಸುಲಭವಾಗಿ ಕಂಪ್ಯೂಟರ್‌ಗೆ ಪ್ರವೇಶವನ್ನು ಪಡೆಯಬಹುದಂತೆ. ಏಜೆನ್ಸಿಯ ಪ್ರಕಾರ, ವಿಂಡೋಸ್ ಡಿಫೆಂಡರ್‌ನ ಕ್ರೆಡೆನ್ಶಿಯಲ್ ಗಾರ್ಡ್ ಘಟಕದಲ್ಲಿ ದೋಷ ಕಾಣಿಸಿಕೊಂಡಿದೆ. ಎಂದು ತಿಳಿದು ಬಂದಿದೆ.

CERT-In ಈ ಬಗ್ಗೆ ಮಾಹಿತಿ ನೀಡಿದ್ದು, “ವಿಂಡೋಸ್ ಡಿಫೆಂಡರ್ ಕ್ರೆಡೆನ್ಶಿಯಲ್ ಗಾರ್ಡ್‌ನಲ್ಲಿ ಈ ದೋಷಗಳು ವರದಿಯಾಗಿವೆ. ಇದರಿಂದ ಸ್ಥಳೀಯ ಹ್ಯಾಕರ್​ಗಳಿಗೆ ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಲು ಮತ್ತು ಕಂಪ್ಯೂಟರ್​ನಲ್ಲಿರುವ ಕೆಲ ಮಾಹಿತಿ ಪಡೆಯಲು ಸಹಾಯ ಮಾಡುತ್ತದೆ,” ಎಂದು ಹೇಳಲಾಗಿದೆ.

ನಾಳೆ ಭಾರತದ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ರೆಡ್ಮಿ ಫೋನ್ ಅನಾವರಣ

 

ಯುವಕರಲ್ಲೇ ಹಾರ್ಟ್ ಅಟ್ಯಾಕ್..! ಕಾರಣವೇನು..?

 

ರಾಜ್ಯ ಸರ್ಕಾರ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ

About The Author