Friday, November 22, 2024

Latest Posts

ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳು…!

- Advertisement -

Health tips:

ಹವಾಮಾನ ಬದಲಾಗುತ್ತಿದ್ದಹಾಗೆ ಹಲವು ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತದೆ ಅದರಲ್ಲೂ ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುವುದು ಮುಖ್ಯವಾಗಿರುತ್ತದೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚು ನಿದ್ದೆಬರುತ್ತದೆ ,ಆದರೆ ಹೆಚ್ಚು ನಿದ್ದೆ ಮಾಡಿದರೆ ನೀವೂ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಕೆಲವರು ಚಳಿಗಾಲದಲ್ಲಿ ಹೆಚ್ಚಾಗಿ ತಿನ್ನುತ್ತಿರುತ್ತಾರೆ ಜೊತೆಗೆ, ವ್ಯಾಯಾಮ ಮಾಡುವುದಿಲ್ಲ ಇವೆಲ್ಲವೂ ಹಲವು ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಸ್ವಲ್ಪ ಅಜಾಗರೂಕತೆಇಂದ ಇದ್ದರೂ, ಚಳಿಗಾಲದಲ್ಲಿ ರೋಗಗಳು ತಪ್ಪುವುದಿಲ್ಲ. ಚಳಿಗಾಲದಲ್ಲಿ ನೀವು ಹೆಚ್ಚಾಗಿ ದೈಹಿಕ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಇದೆ, ಹಾಗಾದರೆ ಇದರಿಂದ ಪಾರಾಗಲು ಏನು ಮಾಡಬೇಕು ಎಂಬುದನ್ನು ತಿಳಿದು ಕೊಳ್ಳೋಣ .

1.ಗಾಳಿಯು ನೇರವಾಗಿ ಮೂಗಿಗೆ ಪ್ರವೇಶಿಸುವುದರಿಂದ ಮೂಗು ಕಟ್ಟುವಿಕೆ ಹಾಗೂ ಸ್ರವಿಸುವಿಕೆ, ಕೆಮ್ಮು ಹೀಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಇದರಿಂದ ಸೋಂಕು ಜ್ವರವನ್ನು ಉಂಟುಮಾಡಬಹುದು.ಈ ಸಮಯದಲ್ಲಿ ತಪ್ಪದೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಗಾಗಿ ಪಡೆಯಿರಿ, ಮನೆಮದ್ದುಗಳನ್ನು ಬಳಸಬೇಡಿ. ಸೋಂಕಿನಿಂದ ಪಾರಾಗಲು ತಾಜಾ ಗಾಳಿಯನ್ನು ಉಸಿರಾಡಿ, ಯೋಗ ಮಾಡಿ ಮತ್ತು ವ್ಯಾಯಾಮ ಮಾಡಿ .

2. ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಶೀತವಾದಾಗ ನಾವು ನೀರಿನ ಸೇವನೆಯನ್ನು ಕಡಿಮೆ ಮಾಡುತ್ತೇವೆ, ಆದ್ದರಿಂದ ಚರ್ಮವು ಸಹ ಒಣಗುತ್ತದೆ. ಆದ್ದರಿಂದ ಆ ಸಮಯದಲ್ಲಿ ನೀರನ್ನೂ ಹೆಚ್ಚಾಗಿ ತೆಗೆದು ಕೊಳ್ಳಬೇಕು. ಶೀತದಿಂದ ಚರ್ಮವು ಒಣಗುತ್ತದೆ.

3.ತಂಪಾದ ಗಾಳಿಯ ಪರಿಣಾಮದಿಂದಾಗಿ, ಸ್ನಾಯುಗಳಲ್ಲಿ ನೋವು ಹೆಚ್ಚಾಗುತ್ತದೆ. ಸಂಧಿವಾತದದಿಂದ ಬಳಲುತ್ತಿರುವವರು ಈ ಸಮಯದಲ್ಲಿ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ದೇಹವನ್ನು ಸದಾ ಬೆಚ್ಚಗೆ ಇಟ್ಟುಕೊಳ್ಳಬೇಕು ಮತ್ತು ವ್ಯಾಯಾಮ ಖಂಡಿತವಾಗಿ ಮಾಡಬೇಕು, ಸ್ನಾಯುಗಳಲ್ಲಿನ ಬಿಗಿತದಿಂದಾಗಿ, ಶೀತವಾದಾಗ ಸ್ನಾಯು ನೋವಿನ ಸಮಸ್ಯೆಯೂ ಹೆಚ್ಚಾಗುತ್ತದೆ.

4.ಚಳಿಗಾಲದಲ್ಲಿ ಸಾಮಾನ್ಯವಾಗಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತದೆ, ಹೀಗಾಗಿ ಹೃದಯದ ಆರೋಗ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸಬೇಕು. ಹೃದಯದ ಸಮಸ್ಯೆ ಇರುವವರು ಬೆಳಗಿನ ಜಾವ ವಾಕಿಂಗ್​ಗೆ ಹೋಗುವುದನ್ನು ತಪ್ಪಿಸಿ. ನೀವೂ ವಾಕಿಂಗ್​ಗೆ ಹೋಗಲೆಬೇಕು ಎಂದರೆ ಎರಡು ಶರ್ಟ್​ಗಳನ್ನು ಧರಿಸಿ ಸ್ವೆಟರ್ ಹಾಕಿಕೊಂಡು ಕಿವಿಯಲ್ಲಿ ಹತ್ತಿಯನ್ನು ಇಟ್ಟುಕೊಂಡು ಹೋಗುವುದು ಉತ್ತಮ. ರೋಗನಿರೋಧಕ ಶಕ್ತಿ ಇರುವವರು ಅತ್ಯಂತ ಜಾಗರೂಕರಾಗಿರಬೇಕು .

5.ಸಾಮಾನ್ಯವಾಗಿ ಚಳಿಗಾಲದಲ್ಲಿ ವೈರಲ್ ಸೋಂಕಿನಿಂದಾಗಿ ಗಂಟಲಿನ ಊತ ಸಂಭವಿಸುತ್ತದೆ ಇದರಿಂದ ಗಂಟಲಿನಲ್ಲಿ ನೋವು ಮತ್ತು ಕಿರಿಕಿರಿಯನ್ನೂ ಉಂಟುಮಾಡುತ್ತದೆ. ವೈರಲ್ ಸೋಂಕು ಶೀತ ಮತ್ತು ಜ್ವರಕ್ಕೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು, ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ ಮತ್ತು ನಿಮಗೆ ಗಂಟಲುನೋವು ಇದ್ದರೆ ಉಪ್ಪು ನೀರಿನಿಂದ ಗಾರ್ಗ್ಲ್ ಮಾಡಿ. ಅಥವಾ ವ್ಯದ್ಯರನ್ನು ಬೇಟಿಮಾಡಿ .

ಚಳಿಗಾಲದಲ್ಲಿ ವೈರಲ್ ಸೋಂಕನ್ನು ತಪ್ಪಿಸುವುದು ಹೇಗೆ..? ಚಳಿಗಾಲದಲ್ಲಿ ವೈರಲ್ ಸೋಂಕನ್ನು ತಪ್ಪಿಸಲು, ಮೊದಲು ನೀವು ಸ್ವಚ್ಛವಾಗಿರಬೇಕು. ಪ್ರತಿನಿತ್ಯ ಸ್ನಾನ ಮಾಡಬೇಕು ಶುಭ್ರವಾದ ಉಡುಪುಗಳನ್ನು ದರಿಸಬೇಕು ಮತ್ತು ಏನಾದರು ತಿನ್ನುವ ಮೊದಲು ಮತ್ತು ತಿಂದ ನಂತರ ನಿಮ್ಮ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಸ್ವಚ್ಛವಾದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಶೀತ ದಿನಗಳಲ್ಲಿ ಹುರಿದ ಪದಾರ್ಥಗಳನ್ನು ತಿನ್ನಿರಿ ಆದರೆ ಮೆಣಸಿನಕಾಯಿ ಮಸಾಲೆಗಳು ಮತ್ತು ಕರಿದ ಪದಾರ್ಥಗಳಿಂದ ದೂರವಿರಿ. ತಂಪಾದ ಗಾಳಿಯಿಂದ ದೇಹವನ್ನು ರಕ್ಷಿಸಲು ಬೆಚ್ಚಗಿನ ಬಟ್ಟೆಗಳನ್ನು ಬಳಸಿ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು, ಮನೆಯಲ್ಲಿ ತಯಾರಿಸಿದ ತಾಜಾ ಆಹಾರವನ್ನು ತಿನ್ನಿ.

ಸಿಹಿ ಪ್ರಿಯರೇ ಎಚ್ಚರ ಎಚ್ಚರ…!

ಬಳಸಿದ ಎಣ್ಣೆಯನ್ನು ಮತ್ತೆ ಬಳಸಿದರೆ ಜೀವಕ್ಕೆ ಅಪಾಯ…?

ಕಪ್ಪು ಮೆಣಸಿನಲ್ಲಿ ಬಂಗಾರದಂತ ಆರೋಗ್ಯದ ಲಾಭಗಳು …!

 

- Advertisement -

Latest Posts

Don't Miss