ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದೆ. ಈಗ ಇರುವಾಗಲೇ, ಈಗಿನಿಂದಲೇ ಮತಬೇಟೆ ಆರಂಭಿಸಿದ್ರಾ ಸಿಎಂ ಬೊಮ್ಮಾಯಿ, ಸಚಿವರು ಎನ್ನಲಾಗುತ್ತಿದೆ. ಚುನಾವಣೆಗೆ ಒಂದು ವರ್ಷ ಇರುವಾಗಲೇ ಮತಬುಟ್ಟಿಗೆ ಸಿಎಂ, ಸಚಿವರು ಕೈ ಹಾಕಿದ್ರಾ ಎನ್ನುವ ಕುತೂಹಲ ಹುಟ್ಟು ಹಾಕಿದೆ.
ಅದರಲ್ಲೂ ಮಠಗಳಿಗೆ ಅನುದಾನ ನೀಡುವ ಮೂಲಕ ಮತಬೇಟೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಹಿಂದುಳಿದ, ದಲಿತ ಸ್ವಾಮೀಜಿಗಳ ಕೃತಜ್ಞತಾ ಸಮಾವೇಶದಲ್ಲಿ ಮತಯಾಚನೆ ಮಾಡಲಾಗಿದೆ. ವಿವಿಧ ಮಠಾಧೀಶರ ಸಮ್ಮುಖದಲ್ಲೇ ಮತಯಾಚನೆ ನಡೆಸಿದ್ದಾರೆ.
ಐವತ್ತಕ್ಕೂ ಹೆಚ್ಚು ಮಠಾಧೀಶರಿದ್ದ ಕಾರ್ಯಕ್ರಮದಲ್ಲಿ ನಿಮ್ಮ ಆಶೀರ್ವಾದ ಇರಲಿ ಎಂದು ಸಿಎಂ ಹೇಳಿದ್ದಾರೆ. ಅಷ್ಟೇ ಏಕೆ, ನಮ್ಮ ಸರ್ಕಾರದ ರಿಪೋರ್ಟ್ ಕಾರ್ಡ್ ನೋಡಿ ಆಶೀರ್ವಾದ ಮಾಡಿ ಎಂದು ಕೋರಿದ್ದಾರೆ. ಸಚಿವ ಮುನಿರತ್ನ, ಭೈರತಿ ಬಸವರಾಜ್ ರಿಂದಲೂ ಮತಯಾಚನೆ ಮಾಡಲಾಗಿದೆ.
ನಿಮ್ಮ ಆಶೀರ್ವಾದ ನಮ್ಮ ಸರ್ಕಾರದ ಮೇಲಿರಲಿ, ಪಕ್ಷದ ಚಿನ್ಹೆ ಮೇಲಿರಲಿ ಎಂದ ಮುನಿರತ್ನ ಕೋರಿದ್ದಾರೆ. ಮತ್ತೆ ಸರ್ಕಾರ ಬರಲು ನಿಮ್ಮ ಆಶೀರ್ವಾದ ಬೇಕು ಎಂದಿದ್ದಾರೆ. ಹಿಂದುಳಿದ, ದಲಿತ ಮಠಗಳಿಗೆ ಅನುದಾನ ಬಿಡುಗಡೆ ಮಾಡುವ ಮೂಲಕ ಮತಬೇಟೆಯಲ್ಲಿ ತೊಡಗಿದ್ದಾರೆ.



