Hubballi News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ 24 ಗಂಟೆಯಲ್ಲಿ ಆಯುಕ್ತರ ಬದಲಾವಣೆ ಮಾಡಿರುವುದು ಸರ್ಕಾರದ ನಿರ್ಧಾರ ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೆ ಗುರಿಯಾಗಿದೆ.
ಹೌದು. ನಿನ್ನೆ ಒಂದು ಆದೇಶ ಇವತ್ತು ಒಂದು ಆದೇಶ ಮಾಡಿದ ಸರ್ಕಾರದ ನಿರ್ಧಾರ ಆಡೋಣ ಬಾ… ಕೆಡಿಸೋಣ ಬಾ ಎಂಬುವಂತಾಗಿದ್ದು, ಪ್ರಜ್ಞಾವಂತ ನಾಯಕರು ಪ್ರಶ್ನಿಸುವಂತಾಗಿದೆ. ನಿನ್ನೆಯಷ್ಟೇ ಕೆಎಸ್ ಆರ್ ಟಿಸಿ ಎಮ್ ಡಿ ಭರತ್ ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಇಂದು ಈಶ್ವರ ಉಳ್ಳಾಗಡ್ಡಿ ಪಾಲಿಕೆ ಅಯುಕ್ತರಾಗಿ ಆದೇಶ ಮಾಡಿರುವುದು ನಿಜಕ್ಕೂ ಏನಿದು ನಿರ್ಧಾರ ಎಂದು ಸಾರ್ವಜನಿಕರು ತಲೆ ಕೆಡಿಸಿಕೊಳ್ಳುವಂತಾಗಿದೆ.
ಬೆಳಗಾವಿ ಜಿಲ್ಲಾ ಯೋಜನಾ ಅಧಿಕಾರಿಯಾಗಿದ್ದ ಈಶ್ವರ ಉಳ್ಳಾಗಡ್ಡಿ ಅವರನ್ನು 24 ಗಂಟೆಯಲ್ಲಿ ಆಯುಕ್ತರನ್ನು ಬದಲಾವಣೆ ಮಾಡಿದೆ. ಕಳೆದ ಕೆಲ ದಿನಗಳ ಹಿಂದೆ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ವರ್ಗಾವಣೆಯಾಗಿದ್ದರು. ವರ್ಗಾವಣೆಯಾದ ಬಳಿಕ ಕೆಲ ದಿನ ಸರ್ಕಾರ ಯಾರನ್ನೂ ನೇಮಿಸಿರಲಿಲ್ಲ. ನಿನ್ನೆ ಭರತ್ ಅವರನ್ನು ಪಾಲಿಕೆ ಆಯುಕ್ತರನ್ನಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶದಂತೆ ಭರತ್ ಅಧಿಕಾರ ವಹಿಸಿಕೊಂಡಿದ್ದರು.ಇದೀಗ ಸರ್ಕಾರದ ಮತ್ತೊಂದು ಆದೇಶ ಮಾಡಿದ್ದು, ಇಂದು ಈಶ್ವರ ಅಂಗಡಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ಆದೇಶಿಸಿದ್ದಾರೆ.
ಸರ್ಕಾರದ ಆದೇಶಕ್ಕೂ ಕಿಮ್ಮತ್ತು ನೀಡಲು ಮರೆತರಾ ಪಾಲಿಕೆಯ ಅಧಿಕಾರಿಗಳು..?!