Friday, October 18, 2024

Latest Posts

ಸಿದ್ದರಾಮಯ್ಯ ಇಲ್ಲದ ಕಾಂಗ್ರೆಸ್ ಕಥೆ ಏನು..?

- Advertisement -

ಕರ್ನಾಟಕ ಟಿವಿ : ಕರ್ನಾಟಕ ರಾಜಕೀಯ ಇತಿಹಾಸದಲ್ಲಿ 5 ವರ್ಷಗಳ ಅವಧಿಯನ್ನ ಪೂರ್ಣಗೊಳಿಸಿದ ಸಿಎಂಗಳು ಬರೀ ಮೂರೇ ಜನ.. ನಿಜಲಿಂಗಪ್ಪ, ದೇವರಾಜ ಅರಸು ಬಿಟ್ರೆ ಕಾಂಗ್ರೆಸ್ ಕಾರ್ಯಕರ್ತರ ಪ್ರೀತಿಯ ಟಗರು ಒನ್ ಅಂಡ್ ಓನ್ಲಿ ಸಿದ್ದರಾಮಯ್ಯ ಮಾತ್ರ 5 ವರ್ಷ ಅಧಿಕಾರ ಪೂರೈಸಿದ್ದಾರೆ..

ಹೌದು, ದೇವೇಗೌಡರ ಜೊತೆ ಜನತಾದಳವನ್ನ ಸಂಘಟನೆ ಮಾಡಿ ನಂತರ ಗೌಡರ ವಿರುದ್ಧ ಸಿಡಿದೆದ್ದು ಕಾಂಗ್ರೆಸ್ನಲ್ಲಿ ನೆಲೆಕಂಡುಕೊಂಡು ಹತ್ತೇ ವರ್ಷದಲ್ಲಿ ಸಿಎಂ ಆದ ನಾಯಕ ಸಿದ್ದರಾಮಯ್ಯ. ಎಸ್.ಎಂ ಕೃಷ್ಣ ನಂತರ ಕಾಂಗ್ರೆಸ್ ಪಕ್ಷಕ್ಕೆ ನಾಯಕನಾಗಿದ್ದು ಸಿದ್ದರಾಮಯ್ಯ..  ದೇವೇಗೌಡರ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ 2018ರ ಚುನಾವಣೆ ಫಲಿತಾಂಶ ಬಂದಾಗ ಸೋನಿಯಾ ಮಾತಿಗೆ ಬೆಲೆಕೊಟ್ಟು ಗೌಡರ ಮೇಲಿನ ದ್ವೇಷವನ್ನ ಮರೆತು ಮನೆ ಬಾಗಿಲಿಗೆ ಹೋಗಿ ಕುಮಾರಸ್ವಾಮಿಯನ್ನ ಸಿಎಂ ಮಾಡಿದ್ರು.. ಆದ್ರೆ ಲೋಕಸಭಾ ಚುನಾವಣೆಯ ನಂತರ ನಡೆದ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯರನ್ನ ವಿಲನ್ ಮಾಡಿ ಬಿಟ್ಟಿದೆ..

 ಎಲ್ಲರನ್ನ ಗದರಿಸಿ ಕೂರಿಸುತ್ತಿದ್ದ ಸಿದ್ದರಾಮಯ್ಯರನ್ನೇ ಏಯ್ ಸಿದ್ದರಾಮಯ್ಯ ಕೂತ್ಕೊ ಅನ್ನುವ ಮಟ್ಟಿಗೆ ಕಾಂಗ್ರೆಸ್ ಇತರ ನಾಯಕರು ಬಂದು ಬಿಟ್ಟಿದ್ದಾರೆ.. ಸದಾ ಸಿದ್ದರಾಮಯ್ಯ ನೆರಳಿನಂತೆ ಇದ್ದ ನಾಯರು ಈ ಬಗ್ಗೆ ತುಟಿಕ್ ಪಿಟಿಕ್ ಅಂತಿಲ್ಲ.. ನಾಯಕನಿಲ್ಲದ ಕಾಂಗ್ರೆಸ್ ದೋಣಿಗೆ ನಾವಿಕನಾಗಿ 5 ವರ್ಷ ಸುಭದ್ರ ಸರ್ಕಾರ ಕೊಟ್ಟ ಸಿದ್ದರಾಮಯ್ಯ ಇದೀಗ ಮೂಲ ಕಾಂಗ್ರೆಸ್ ನಾಯಕರ ಕೊಂಕು ಮಾತಿಗೆ ಕಂಗಾಲಾಗಿ ಹೋಗಿದ್ದಾರೆ.. ಗಟ್ಟಿ ಮನುಷ್ಯ ಸಿದ್ದರಾಮಯ್ಯ ಈ  ಬೆಳವಣಿಗೆಯಿಂದ ನಲುಗಿ ಹೋಗಿದ್ದಾರೆ.. ಇಷ್ಟೆ ಅಲ್ಲ ಸಿದ್ದರಾಮಯ್ಯ ಬೆಂಬಲಿಗರನ್ನ ಮೂಲ ಕಾಂಗ್ರೆಸ್ ನಾಯಕರು ಟಾರ್ಗೆಟ್ ಮಾಡಲು ಶುರುವಾಗಿದ್ದಾರೆ.. ಬಿಜೆಪಿ, ಜೆಡಿಎಸ್ ನಾಯಕರನ್ನ ಬಾಯಿ ಮುಚ್ಚಿಸುವ ಕೆಪಾಸಿಟಿ ಇರೋದು ಸಿದ್ದರಾಮಯ್ಯ ಒಬ್ಬರಿಗೆ ಮಾತ್ರ. ಆದ್ರೆ, ಕಾಂಗ್ರೆಸ್ ಪಕ್ಷದಲ್ಲಿ ಈಗ ಸಿದ್ದರಾಮಯ್ಯ ಸದ್ದಡಗಿಸುವ ಪ್ರಯತ್ನ ಬಹಿರಂಗವಾಗಿಯೇ ಶುರುವಾಗಿವೆ..

ಸಿದ್ದರಾಮಯ್ಯ ಇಲ್ಲದ ಕಾಂಗ್ರೆಸ್ ಏನಾಗುತ್ತೆ..?

ಒಂದು ಚುನಾವಣೆಯನ್ನನೇರವಾಗಿ ಗೆಲ್ಲದ ನಾಯಕರೇ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಗಳು, ಅವರ ಕಾರ್ಯಕರ್ತರೇ ಹೇಳುವ ಪ್ರಕಾರ ಅವರ ಯೋಗ್ಯತೆಗೆ ಗ್ರಾಮಪಂಚಾಯ್ತಿ ಚುನಾವಣೆ ಗೆಲ್ಲೋಕೆ ಆಗದವರೆಲ್ಲ ಸೋನಿಯಾ ಗಾಂಧಿ ಬಳಿ ಸಿದ್ದರಾಮಯ್ಯ ವಿರುದ್ಧ ದೂರು ನೀಡ್ತಿದ್ದಾರೆ.. ಇದೆಲ್ಲವನ್ನ ನೋಡ್ತಿದ್ರೆ, ಈಗಾಗಲೇ ಸಿದ್ದರಾಮಯ್ಯ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.. ಒಂದು ವೇಳೆ ಸಿದ್ದರಾಮಯ್ಯ ನುಡಿದಂತೆ ಚುನಾವಣಾ ರಾಜಕೀಯದಿಂದ ದೂರ ಸರಿದ್ರೆ, ಕಾಂಗ್ರೆಸ್ ರಾಜ್ಯದಲ್ಲಿ ಹೀನಾಯ ಸ್ಥಿತಿ ತಲುಪುವುದರಲ್ಲಿ ಯಾವುದೇ ಡೌಟ್ ಇಲ್ಲ..ಯಾಕಂದ್ರೆ, ಇನ್ನು ನಾಲ್ಕುವರೆ ವರ್ಷ ಡಿ.ಕೆ ಶಿವಕುಮಾರ್ ಗೆ ರಿಲೀಫ್ ಸಿಗೋದು ಡೌಟು.. ಮತ್ತೊಂದು ಟರ್ಮ್ ಮೋದಿ ಅಧಿಕಾರಕ್ಕೆ ಬಂದ್ರೆ ಡಿಕೆ ಶಿವಕುಮಾರ್ ಕಾಂಗ್ರೆಸ್ ಸಾರಥ್ಯ ವಹಿಸಿಕೊಂಡು ಸಿಎಂ ಆಗುವ ಕನಸು ನನಸಾಗಲ್ಲ.. ಇನ್ನು ಎಂಬಿ ಪಾಟಿಲ್ ಬಬಲೇಶ್ವರ ಬಿಟ್ಟು ಆಚೆ ಬರೋದೇ ಇಲ್ಲ.. ಪರಮೇಶ್ವರ್ ಕೊರಟಗೆರೆಯಲ್ಲೇ ಗೆಲ್ಲೋದು ಕಷ್ಷ.  ಹೀಗಾಗಿ ಸಿದ್ದರಾಮಯ್ಯ ಬಿಟ್ರೆ  ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷವನ್ನ ಸಂಘಟಿಸುವ ಪ್ರಭಾವಿ ನಾಯಕರೇ ಇಲ್ಲ. ಒಂದು ವೇಳೆ ಕಾಂಗ್ರೆಸ್ ನ ಮೂಲ ನಾಯಕರು ಸಿದ್ದರಾಮಯ್ಯ ರನ್ನ ಹೀಗೆ ಕಡೆಗಣಿಸಿದ್ರೆ ಕಾಂಗ್ರೆಸ್ ಕರ್ನಾಟಕದಲ್ಲಿ ನೆಲಕಚ್ಚೋದ್ರಲ್ಲಿ ಡೌಟೇ ಇಲ್ಲ..

ಕಾಂಗ್ರೆಸ್ ಉಳಿಯಲು, ಬೆಳೆಯಲು ಶ್ರಮಪಟ್ಟ ಸಿದ್ದರಾಮಯ್ಯಗೆ ಬೆಲೆ ಕೊಟ್ರೆ ಕಾಂಗ್ರೆಸ್ ಶಕ್ತಿ ಶಾಲಿಯಾಗಿರುತ್ತೆ. ಅದುಬಿಟ್ಟು ಸಿಕ್ಕಸಿಕ್ಕ ಕಡೆ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ರೆ ಖಂಡಿತವಾಗಿ ಸಿದ್ದರಾಮಯ್ಯ ಸಿದ್ದರಾಮನ ಹುಂಡಿ ಕಡೆ ಹೆಜ್ಜೆ ಹಾಕೋದು ಗ್ಯಾರಂಟಿ.

ನಿಮ್ಮ ಪ್ರಕಾರ ಸಿದ್ದರಾಮಯ್ಯ ಇಲ್ಲದ ಕಾಂಗ್ರೆಸ್ ಪಕ್ಷಕ್ಕೆ ಬೇರೆ ಯಾರು ಸಮರ್ಥ ನಾಯಕರಾಗ ಬಹುದು..? ಈ ಬಗ್ಗೆ  ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ

- Advertisement -

Latest Posts

Don't Miss