www.karnatakatv.net : ಚಂದ್ರಯಾನದಲ್ಲಿ ಮನೆ ಕೊಡಿಸುವದಾಗಿ ಆಸೆ ತೋರಿಸಿ ಮಹಿಳೆಯೊಬ್ಬಳಿಗೆ ಟೋಪಿ ಹಾಕಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಹೌದು.. ಬೇಗ ಬೇಗ ನಿಮ್ಮ ಸೈಟ್ ಬುಕ್ ಮಾಡಿಕೊಳ್ಳಿ, ಚಂದ್ರಯಾನದಲ್ಲಿ ಸೈಟ್ ಸಿಗುವುದು ತುಂಬಾ ಕಷ್ಟ, 50 ಸಾವಿರಕ್ಕೆ ಮೊದಲು ಬುಕ್ ಮಾಡಿ ಉಳಿದ ಹಣವನ್ನು ನಿಧಾನಕ್ಕೆ ಕೊಟ್ಟರಾಯ್ತು ಎಂದು. ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದುಬರುತ್ತಿವೆ. ಇದಕ್ಕೆಲ್ಲ ಸೈ ಎಂದು ಓರ್ವ ಮಹಿಳೆ ಮೋಸ ಹೋಗಿದ್ದಾಳೆ.
ಫೇಸ್ ಬುಕ್ ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು, ಚಂದ್ರನ ಅಂಗಳದಲ್ಲಿ ನಿವೇಶನ ಖಾಲಿಯಿದ್ದು, ನಾನು ಕ್ರಿಪ್ಟೋ ಕರೆನ್ಸಿ ತಜ್ಞೆ. ಉಸ್ಕಾ ಅಬೂಬಕರ್ ನನ್ನ ಹೆಸರು. ಚಂದ್ರನ ಅಂಗಳದಲ್ಲಿ ನಿವೇಶನ ಖರೀದಿ ಮಾಡಿ ಮಾರಾಟ ಮಾಡಿದರೆ ಡಬಲ್ ಲಾಭ ಸಿಗುತ್ತದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಮಾಡಬಹುದು ಎಂದು ಪುಸಲಾಯಿಸಿದ್ದಾಳೆ.
ಕ್ರಿಪ್ಟೋ ಕರೆನ್ಸಿ ತಜ್ಞೆ ಅಡ್ವಾನ್ಸ್ ಬುಕ್ಕಿಂಗ್ ಮೊತ್ತ 45,700 ರೂ. ನೀಡುವಂತೆ ಹೇಳಿ ಅದರಂತೆ ಗೂಗಲ್ ಪೇ ಮೂಲಕ 25, 000 ಸಾವಿರ ರೂ. ಪಾವತಿಸಿದ್ದಾರೆ. ಕೇವಲ ಒಂದು ವಾರದಲ್ಲಿಯೇ ಸೈಟ್ ಮಾರಾಟ ಮಾಡಿ ಹೆಚ್ಚಿನ ಲಾಭ ಮಾಡಿಕೊಡುವುದಾಗಿ ಹೇಳಿದ್ದ ಮಹಿಳೆಯ ಸುಳಿವೇ ಇಲ್ಲ ಚಂದ್ರಯಾನ ಸೈಟ್ ಪ್ರಾಜೆಕ್ಟ್ ಪರಿಚಯಿಸಿದ್ದ ಆನ್‌ಲೈನ್ ಗೆಳತಿಯ ಸಾಮಾಜಿಕ ಜಾಲ ತಾಣಗಳ ಎಲ್ಲಾ ಸಂಪರ್ಕಗಳು ಕಳೆದುಕೊಂಡಿದ್ದಾಳೆ.
ಹಣ ಕೊಟ್ಟು ಮೋಸ ಹೋಗಿರುವ ಸಂಗತಿ ತಿಳಿದ ಕೂಡಲೇ ಇದೀಗ ಹಣ ಕಳೆದುಕೊಂಡ ಮಹಿಳೆ ಸೈಬರ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಪೊಲೀಸರು ದೂರು ಆಧರಿಸಿ ತನಿಖೆ ನಡೆಸಿದಾಗ ಗೂಗಲ್ ಪೇ ಖಾತೆ ನಾರಾಯಣ್ ಎಂಬುವರ ಹೆಸರಿನಲ್ಲಿ ಇರುವುದು ಪತ್ತೆಯಾಗಿದೆ. ಚಂದ್ರಯಾನ ಸೈಟ್ ಪ್ರಾಜೆಕ್ಟ್ ಹೆಸರಿನಲ್ಲಿ ಹಲವರಿಗೆ ದೋಖಾ ಮಾಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.