- Advertisement -
ಬೆಂಗಳೂರು: ನಗರದಲ್ಲಿ ಮಹಿಳಾ ಹೆಡ್ ಕಾನ್ ಸ್ಟೇಬಲ್ ಮೇಲೆ ರೌಡಿ ಶೀಟರ್ ಒಬ್ಬ ಚಾಕುವಿನಿಂದ ಇರಿದಿರೋ ಘಟನೆ ನಡೆದಿದೆ.
ಆಗಸ್ಟ್ 5ರಂದು ಜ್ಯೋತಿನಗರದಲ್ಲಿದ್ದಂತ ಆರೋಫಿ ಶರೀಫ್ ಶೇಕ್ ಆಲಿಯಾಸ್ ಶರೀಫ್ ಎಂಬಾತನನ್ನು ಹೆಚ್ ಎಎಲ್ ಠಾಣೆಯ ಪೊಲೀಸರು ವಿವಿಧ ಪ್ರಕರಣ ಸಂಬಂಧ ಬಂಧಿಸೋದಕ್ಕೆ ತೆರಳಿದ್ದರು. ಈ ವೇಳೆ ಶರೀಫ್ ಮಹಿಳಾ ಹೆಡ್ ಕಾನ್ ಸ್ಟೇಬಲ್ ಮೇಲೆಯೇ ಚಾಕುವಿನಿಂದ ಇರಿದಿರೋದಾಗಿ ತಿಳಿದು ಬಂದಿದೆ.
ಚಾಕು ಇರಿತಕ್ಕೆ ಒಳಗಾಗಿರುವಂತ ಮಹಿಳಾ ಪೇದೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಶರೀಫ್ ವಿರುದ್ಧ ಕೊಲೆ, ಕೊಲೆಯತ್ನ ಪ್ರಕರಣ ಹೆಚ್ ಎಎಲ್ ಠಾಣೆಯಲ್ಲಿ ದಾಖಲಿಸಲಾಗಿದೆ.
- Advertisement -