ಇಲ್ಲೊಬ್ಬ ಮಹಿಳೆ ಪಾನಿಪುರಿಗಾಗಿ ನಾಡು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿ ಪಾನಿಪುರಿಯ ಮೇಲಿನ ತಮ್ಮ ನಿಷ್ಠೆ ತೋರಿಸಿದ್ದಾರೆ. ಯಸ್ ₹20 ಗೆ 6 ಪಾನಿಪುರಿ ಬದಲು ಕೇವಲ 4 ಪಾನಿಪುರಿ ನೀಡಿದ್ದುದಕ್ಕೆ ಆಕ್ರೋಶಗೊಂಡ ಮಹಿಳೆ ಇನ್ನೂ 2 ಪಾನಿಪುರಿ ಕೊಡಲೇಬೇಕು ಅಂತ ನಡು ರಸ್ತೆಯಲ್ಲೇ ಕೂತು ಆಗ್ರಹಿಸಿದ್ದಾರೆ.
ಸದ್ಯ ಈ ಘಟನೆ ಗುಜರಾತಿನ ವಡೋದರಾದಲ್ಲಿ ನಡೆದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಪಾನಿಪುರಿಗೆ ಪ್ಯಾಷನ್ ಇದ್ರೆ ಇದೇ ರೀತಿ ಇರಬೇಕು ಅಂತ ಈ ವಿಡಿಯೋ ನೋಡಿದವರು ಹೇಳುತ್ತಿದ್ದಾರೆ. ಘಟನೆ ನಡೆಯುತ್ತಿರುವ ವೇಳೆಯಲ್ಲಿ ರಸ್ತೆ ಮಧ್ಯದಲ್ಲಿ ವಾಹನಗಳು ನಿಂತು ಟ್ರಾಫಿಕ್ ಜಾಮ್ ಉಂಟಾಯಿತು.
ಪಾನಿಪುರಿ ಮಾರಾಟಗಾರರಿಂದ ಸಮಾಧಾನ ಸಿಗದ ಹಿನ್ನೆಲೆಯಲ್ಲಿ ಮಹಿಳೆ ರಸ್ತೆಯ ಮಧ್ಯೆ ಬಣ್ತುಂಬಿಕೊಂಡು ಕುಳಿತು ಪ್ರತಿಭಟಿಸಿದರು. ಕೊನೆಗೆ ಸ್ಥಳೀಯ ಪೊಲೀಸ್ ಸಿಬ್ಬಂದಿ ಬಂದು ಮಹಿಳೆಯನ್ನು ರಸ್ತೆಯಿಂದ ತೆರವಿಗೊಳಿಸಿ, ಟ್ರಾಫಿಕ್ ಸುಗಮಗೊಳಿಸಿದರು. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಜನರು ಇದನ್ನು ಹಾಸ್ಯಾತ್ಮಕವಾಗಿ ಬಿಚ್ಚಿಟ್ಟಿದ್ದಾರೆ.