Friday, April 18, 2025

Latest Posts

Women : 6 ಜನ ಕಾಮುಕರ ದಾಳಿಗೆ ನಲುಗಿದ ಮಹಿಳೆ : ರಾಜ್ಯವೇ ಬೆಚ್ಚಿ ಬೀಳಿಸೋ ಸಾಮೂಹಿಕ ಅತ್ಯಾಚಾರ

- Advertisement -

Belagavi News : ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆದಿದೆ. ಸೆಪ್ಟೆಂಬರ್ 5ರಂದು ಈ ಕೃತ್ಯ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶಿಕ್ಷಕ ದಿನಾಚರಣೆಯಂದು ಹಳ್ಳಿಯಿಂದ ಗೋಕಾಕ್​ ನಗರಕ್ಕೆ ಬಂದಿದ್ದ ಮಹಿಳೆಯೋರ್ವಳನ್ನು ವ್ಯಕ್ತಿಯೋರ್ವ ಮನೆಗೆ ಕರೆದುಕೊಂಡು ಹೋಗಿ ಬಳಿಕ ತನ್ನ ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಆದ್ರೆ, ಬೆದರಿಕೆ ಹಾಕಿದ್ದರಿಂದ ಮಹಿಳೆ ಯಾವುದೇ ದೂರು ನೀಡಿರಲಿಲ್ಲ. ಕಾಕತಾಳೀಯ ಎಂಬಂತೆ ಬೇರೊಂದು ದರೋಡೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದನ್ನು ಪೊಲೀಸರ ಮುಂದೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ.

ಪ್ರಕರಣದ ಹಿನ್ನೆಲೆ
ಮಹಿಳೆ(ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆ) ಸೆಪ್ಟೆಂಬರ್ 05 ರಂದು ಹಳ್ಳಿಯಿಂದ ಬಂದು ಗೋಕಾಕ್ ನಗರ ಬಸ್ ನಿಲ್ದಾಣದಲ್ಲಿ ಪರಿಚಯಸ್ಥ ವ್ಯಕ್ತಿಯ ಜತೆಗೆ ನಿಂತಿದ್ದರು. ಈ ಮಹಿಳೆ ಬಸವರಾಜ ಖಿಲಾರಿ ಎನ್ನುವರಿಗೂ ಪಪರಿಷಯ. ಹೀಗಾಗಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯನ್ನು ಬಸವರಾಜ್ ನೋಡಿದ್ದಾನೆ. ಬಳಿಕ ಟೀ ಕುಡಿಯಲು ಬನ್ನಿ ಎಂದು ಇಬ್ಬರನ್ನೂ ಆದಿತ್ಯ ನಗರದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಬಳಿಕ ಇಬ್ಬರನ್ನೂ ಒಳಗೆ ಹಾಕಿ ಹೊರಗಿನಿಂದ ಮನೆಯ ಬಾಗಿಲು ಹಾಕಿಕೊಂಡು ಹೋಗಿ ತನ್ನ ಪಟಾಲಂನ ಸದಸ್ಯರಿಗೆ ಸುದ್ದಿ ಮುಟ್ಟಿಸಿದ್ದಾನೆ. ನಂತರ ಮಧ್ಯಾಹ್ನದ ಸಮಯದಲ್ಲಿ ಮನೆಗೆ ಬಂದಿದ್ದ ಐದು ಜನರ ಗ್ಯಾಂಗ್, ಮಹಿಳೆಯನ್ನ ಬೆದರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಬಳಿಕ ದುರಳರು ಸಂಜೆ ವೇಳೆ ಮಹಿಳೆ ಹಾಗೂ ಆಕೆಯೊಂದಿಗಿದ್ದ ವ್ಯಕ್ತಿಯ ಹಣ, ಎಟಿಎಂ ಕಾರ್ಡ್ ಕಸಿದುಕೊಂಡು ಬಿಟ್ಟು ಕಳಿಸಿದ್ದಾರೆ. ಈ ವಿಷಯ ಪೊಲೀಸರಿಗೆ ಹೇಳದಂತೆ ಮಹಿಳೆ ಹಾಗೂ ಪುರುಷನಿಗೆ ಹೆದರಿಸಿದ್ದಾರೆ. ಅಲ್ಲದೇ ಜತೆಗಿದ್ದ ವ್ಯಕ್ತಿ ಜತೆಗೆ ಮಹಿಳೆ ವಿಡಿಯೋ ಮಾಡಿ ವೈರಲ್ ಮಾಡುವುದಾಗಿ ಧಮಕಿ ಹಾಕಿ ಕಳುಹಿಸಿದ್ದಾರೆ. ಈ ಹಿನ್ನೆಲೆ ಸಂತ್ರಸ್ಥೆ ಮಹಿಳೆ ದೂರು ನೀಡಲು ಹೆದರಿದ್ದಳು.

ಇನ್ನು ಸೆಪ್ಟೆಂಬರ್ 13ರಂದು ಡಕಾಯಿತಿ ಪ್ರಕರಣವೊಂದರಲ್ಲಿ ಪೊಲೀಸರು ಕೆಲವರನ್ನ ಬಂಧಿಸಿದ್ದರು. ಈ ಸಮಯದಲ್ಲಿ ಗ್ಯಾಂಗ್ ರೇಪ್ ಮಾಡಿದ್ದನ್ನು ಆರೋಫಿಗಳು ತಾವಾಗಿಯೇ ಬಾಯ್ಬಿಟ್ಟಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮಹಿಳೆಯನ್ನು ಹುಡುಕಿ ಕರೆದುಕೊಂಡು ಬಂದು ಆಕೆಯಿಂದ ಕೇಸ್ ದಾಖಲಿಸಿಕೊಂಡಿದ್ದಾರೆ.

ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಮಹಿಳೆ ಹುಡುಕಿ ಕೇಸ್ ದಾಖಲಿಸಿಕೊಂಡ ಗೋಕಾಕ್ ಪೊಲೀಸರು. ಪ್ರಕರಣದ ಸಂಬಂಧ ಪ್ರಮುಖ ಆರೋಪಿ ಸೇರಿ ಐದು ಜನರ ಬಂಧನವಾಗಿದ್ದು, ಬೆನಚಿಮರಡಿ ಗ್ರಾಮದ ರಮೇಶ್ ಖಿಲಾರಿ, ದುರ್ಗಪ್ಪಾ ವಡ್ಡರ್, ಯಲ್ಲಪ್ಪ ಗಿಸ್ನಿಂಗವ್ವಗೊಳ್, ಕೃಷ್ಣಾ ಪೂಜೇರಿ, ರಾಮಸಿದ್ದ ತಪ್ಸಿ ಬಂಧತ ಆರೋಪಿಗಳು. ಇನ್ನು ಮಹಿಳೆಯನ್ನ ಮನೆಗೆ ಕರೆದುಕೊಂಡು ಬಂದಿದ್ದ‌ ಪ್ರಮುಖ ಆರೋಪಿ ಬಸವರಾಜ ಖಿಲಾರಿ ತಲೆಮರಿಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Born Baby : ಧಾರವಾಡ: ನವಜಾತ ಶಿಶು ಗದ್ದೆಯಲ್ಲಿ ಪತ್ತೆ…!

Temple : ಸಾಗರದಲ್ಲಿ ದೇವರನ್ನು ಹಾಕಲು ಹುಂಡಿ…!

Post card; ರಕ್ತದಲ್ಲಿ ಪತ್ರ ಬರೆದು ಅಂಚೆ ಮೂಲಕ ಮೋದಿಗೆ ಪೋಸ್ಟ್..!

- Advertisement -

Latest Posts

Don't Miss