ಮಹಿಳಾ ವಿಶ್ವಕಪ್ ಎಂದೆ ಖ್ಯಾತಿ ಪಡೆದಿರುವ ಟಿ20 ಚಾಲೆಂಜ್ ಟೂರ್ನಿಯಲ್ಲಿ ಸೂಪರ್ನೋವಾಸ್ ತಂಡ ಚಾಂಪಿಯನ್ನಾಗಿ ಹೊರಹೊಮ್ಮಿದೆ. 3ನೇ ಬಾರಿಗೆ ಸೂಪರ್ ನೋವಾಸ್ ತಂಡ ಚಾಂಪಿಯನ್ನಾಗಿದೆ.
ಮೊದಲೆರರಡು ಆವೃತ್ತಿಗಳಲ್ಲಿ ಪ್ರಶಸ್ತಿ ಗೆದ್ದಿದ್ದ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಸೂಪರ್ ನೋವಾಸ್ ಶನಿವಾರ ವೆಲಾಸಿಟಿ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ 4 ರನ್ ಗಳ ಅಂತರದಿಂದ ಸೋಲಿಸಿ 3ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಿತು.
ಮೊದಲ ಬಾರಿಗೆ ಪ್ರಶಸ್ತಿ ಕನಸು ಕಂಡಿದ್ದ ದೀಪ್ತಿ ಶರ್ಮಾ ನೇತೃಥ್ವದ ವೆಲಾಸಿಟಿ ತಂಡದ ಕನಸು ಭಗ್ನವಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಸೂಪರ್ ನೋವಾಸ್ 7 ವಿಕೆಟ್ ನಷ್ಟಕ್ಕೆ 165 ರನ್ ಕಲೆ ಹಾಕಿತು. ಕಠಿಣ ಗುರಿ ಬೆನ್ನತ್ತಿದ ವೆಲಾಸಿಟಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು.
ಶಫಾಲಿ ವರ್ಮಾ 15, ಯಸ್ತಿಕಾ ಭಾಟಿಯಾ 13 ರನ್, ಲಾರಾ ವೋಲ್ವಾರ್ಟ್ 65 ರನ್ ಸಿಡಿಸಿದರು. ಕೊನೆಯ ಓವರ್ನಲ್ಲಿ 17 ರನ್ ಬೇಕಿತ್ತು.ವೋಲ್ವಾರ್ಟ್ ಸಿಕ್ಸರ್ ಸಿಡಿಸಿದರು. ಕೊನೆಯ ಎಸೆತದಲ್ಲಿ 6 ರನ್ ಬೇಕಿದ್ದಾಗ ಸಿಮ್ರಾನ್ ರ ಪ್ರಯತ್ನ ಫಲ ಕೊಡಲಿಲ್ಲ.




