Thursday, April 17, 2025

Latest Posts

ಹಾಸನ: ಮುಂದುವರೆದ ಕಾಡಾನೆದಾಳಿ, ಜನಜೀವನ ತತ್ತರ

- Advertisement -

ಹಾಸನ : ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ದಾಂಧಲೆ ಮುಂದುವರಿದಿದೆ. ಕಾಡಾನೆಗಳ ಹಿಂಡಿನ ದಾಳಿಗೆ ಎರಡು ಎಕರೆ ಪ್ರದೇಶದ ಕಾಫಿ ತೋಟ ನಾಶವಾಗಿದೆ. ಹಾಸನ ಜಿಲ್ಲೆ, ಬೇಲೂರು ತಾಲೂಕಿನ, ಕೋಗೋಡು ಗ್ರಾಮದಲ್ಲಿ ಘಟನೆ ನಡೆದಿದೆ.

ಕೋಗೋಡು ಗ್ರಾಮದ ಪೂರ್ಣೇಶ್ ಎಂಬುವವರ ಕಾಫಿ ತೋಟದಲ್ಲಿ 18 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ಎರಡು ಎಕರೆ ಪ್ರದೇಶದಲ್ಲಿ ಬೆಳೆದಿರುವ ಅಡಿಕೆ , ಬಾಳೆ, ಕಾಫಿ ತೋಟದಲ್ಲೆಲ್ಲ ಓಡಾಡಿ ಬೆಳೆದಿರುವ ಕಾಫಿ ಗಿಡಗಳನ್ನು ತುಳಿದು ನಾಶ ಪಡಿಸಿದೆ.

ಈಗಾಗಲೆ ಕಳೆದ ಹಲವು ದಿನಗಳಿಂದ ಕಾಡಾನೆ ದಾಳಿಯಿಂದ ಕಂಗೆಟ್ಟಿರುವ ರೈತರು ಸಾಕಷ್ಟು ಪ್ರಮಾಣದ ಬೆಳೆಗಳನ್ನು ಕಾಡಾನೆಗಳಿಂದ ನಾಶ ಹೊಂದಿದ್ದಾರೆ,. ಕಾಡಾನೆ ದಾಳಿಯಿಂದ ಭಯಭೀತರಾದ ಗ್ರಾಮಸ್ಥರು ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗಲು ಹೆದರುತಿದ್ದಾರೆ. ಹಾಗಾಗಿ ಅರಣ್ಯ ಇಲಾಖೆ ಆದಷ್ಟು ಬೇಗ ಈ ಕಾಡಾನೆಗಳನ್ನು ಅರಣ್ಯಕ್ಕೆ ಸಾಗಿಸಬೇಕೆಂದು ಸ್ಥಳಿಯರು ಅಗ್ರಹಿಸಿದ್ದಾರೆ. ಹಾಗೆಯೆ ನಾಶವಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಕಾಫಿ ಬೆಳೆಗಾರರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಸೇರಲಿದ್ದಾರಾ ? ಯಡಿಯೂರಪ್ಪ ಸಂಬಂಧಿ

ದೈವಕೋಲ ಮನೋರಂಜನಾ ಕಾರ್ಯಕ್ರಮವಾಯಿತೇ..?! ಬಿಜೆಪಿ ಶಾಸಕನ ಆಕ್ರೋಶವೇಕೆ..?!

ಪುಂಡ ಯುವಕರ ಗುಂಪೊಂದು ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

 

- Advertisement -

Latest Posts

Don't Miss