Dharwad News: ಧಾರವಾಡ : ಯೋಗಾಭ್ಯಾಸ ನಮ್ಮಲ್ಲಿ ಚೈತನ್ಯ, ಉತ್ಸಾಹ, ಆತ್ಮಸ್ಥೈರ್ಯ ತುಂಬುವ ಮೂಲಕ ಸಾಧನೆಗೆ ಪೂರಕವಾಗುತ್ತದೆ ಎಂದು ಯೋಗಪಟು ಪ್ರೀತಿ ಹಡಗಲಿ ತಿಳಿಸಿದರು.
ಧಾರವಾಡದ ಕುಮಾರೇಶ್ವರ ನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಸಾಂಸ್ಕೃತಿಕ ವೇದಿಕೆ, ಎನ್.ಎಸ್.ಎಸ್, ಎನ್.ಸಿ.ಸಿ ಹಾಗೂ ರೋವರ್ಸ್ & ರೇಂಜರ್ಸ್ ಯುವ ರೆಡ್ ಕ್ರಾಸ್ ಸಂಯುಕ್ತ ಆಶ್ರಯದಲ್ಲಿ 10 ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಿ ಮಾತನಾಡಿದ ಅವರು, ಯೋಗ ದೈನಂದಿನ ಬದುಕಿನಲ್ಲಿ ಬಹಳಷ್ಟು ಬದಲಾವಣೆ ತರುತ್ತದೆ. ಯೋಗ ಮಾಡುವವರಿಗೆ ರೋಗಗಳ ಭಯವಿಲ್ಲ, ಯೋಗದಿಂದ ಏಕಾಗ್ರತೆ ಹೆಚ್ಚುತ್ತದೆ. ಜ್ಞಾನ ಸಂಪತ್ತು ಅಧಿಕ ಆಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಳಿನಿ ಬೆಂಗೇರಿ ಮಾತನಾಡಿ, ಯೋಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಪ್ರಭಾವ ಬೀರುತ್ತಿದೆ. ಭಾರತೀಯರು ಯೋಗದ ಮೂಲಕ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಯೋಗವನ್ನು ದಿನಾಚರಣೆಯಂದು ಮಾತ್ರ ಆಚರಣೆ ಮಾಡದೇ ಪ್ರತಿದಿನವೂ ರೂಢಿಸಿಕೊಂಡರೇ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಡಿ.ಜಿ. ತಾಪಸ್, ಐ.ಕ್ಯೂ ಎಸ್.ಸಿ ಸಂಚಾಲಕ ಡಾ.ಜಿ.ಕೆ ಬಡಿಗೇರ, ಎನ್ ಸಿ ಸಿ ಅಧಿಕಾರಿ ವಿದ್ಯಾ ರಾಯ್ಕರ್, ಎನ್.ಎಸ್.ಎಸ್ ಅಧಿಕಾರಿ ಸಂಜೋತಾ, ಶಿಕ್ಷಕರಾದ ಸುಮೀತ್ರಾ, ಶಿವಾನಂದ ನರಹಟ್ಟಿ, ಪರಮೇಶ್ವರ ಗೆಜ್ಜಿ, ಜಯಾನಂದ, ವಿದ್ಯಾರ್ಥಿಗಳಾದ ಶೋಭಾ ಅಕ್ಕಿಮರಡಿ, ರುಚಿತಾ, ಅಶ್ವಿನಿ, ಮಲ್ಲಿಕಾರ್ಜುನ, ಸಿದ್ದಾರೂಢ ಬಳಗಲಿ ಸೇರಿದಂತೆ ಹಲವರು ಇದ್ದರು.