ಬೆಂಗಳೂರು ಸಾಕಷ್ಟು ವಿಷಯಗಳಿಗೆ ಫೇಮಸ್ ಪ್ಲೇಸ್.. ಅದರಂತೆ ಪೂಜಾ ಸಾಮಗ್ರಿಗಳಿಗಂತೆಯೇ ಫೇಮಸ್ ಆಗಿರೋದು ಸತೀಶ್ ಸ್ಟೋರ್ಸ್. ೬೫ ವರ್ಷದ ಹಿನ್ನೆಲೆಯಿರೋ ಈ ಸತೀಶ್ ಸ್ಟೋರ್ ಇರೋದು ಬಸವನಗುಡಿಯಲ್ಲಿ.
ಪ್ರತಿಯೊಬ್ಬರ ಮನೆಗೂ ತುಂಬಾ ಅಗತ್ಯವಾಗಿ ಬೇಕೇ ಬೇಕು ಪೂಜಾ ಸಾಮಗ್ರಿಗಳು. ಮದುವೆ, ಗೃಹಪ್ರವೇಶ, ಸೀಮಂತ, ನಾಮಕರಣ ಹೀಗೆ ಸಾಕಷ್ಟು ಮನೆಯಲ್ಲಿ ನಡೆಯೋ ಶುಭ ಸಮಾರಂಭಗಳಿಗೆ ಪೂಜಾ ಸಾಮಗ್ರಿಗಳು ಬೇಕೆ ಬೇಕು. ಇದಕ್ಕೆ ಒನ್ ಸ್ಟಾಪ್ ಡೆಸ್ಟಿನೇಶನ್ “ಸತೀಶ್ ಸ್ಟೋರ್ಸ್” ಅಂದ್ರೆ ತಪ್ಪಾಗೋದಿಲ್ಲ. ಈ ಮಳಿಗೆಯಲ್ಲಿ ಬರೋಬ್ಬರಿ ೩- ೩ವರೆ ಸಾವಿರ ಪೂಜಾ ಸಾಮಗ್ರಿಗಳು ಸಿಗುತ್ತೆ. ಅರಶಿಣ, ಕುಂಕುಮ, ಗಂಧದ ಕಡ್ಡಿ, ಕರ್ಪೂರ, ಇಲ್ಲಿಂದ ಹಿಡಿದೂ ಇಲ್ಲೇ ತಯಾರಿಸೋ ೫೦ ಕ್ಕಿಂತ ಹೆಚ್ಚು ಪ್ರಾಡಕ್ಟ್ಗಳನ್ನ ಮಾರಾಟ ಮಾಡ್ತಾರೆ. ಹಿತ್ತಾಳೆ, ವೈಟ್ ಮೆಟಲ್, ಪಂಚಲೋಹ, ಫೋಟೋ ಫ್ರೇಮ್ಸ್, ಮಂಟಪಗಳು, ಕಾಂಡಿಮೆAಟ್ಸ್, ಅಷ್ಟೇ ಅಲ್ಲ ಉಪ್ಪಿನ ಕಾಯಿ, ಸಾಂಬಾರ್ ಪುಡಿ, ಚಟ್ನಿ ಪುಡಿ, ಡ್ರೆöÊ ಫ್ರೂಟ್ಸ್ ಮದುವೆ, ಗೃಹ ಪ್ರವೇಶದ ಪೂಜಾ ಸಾಮಾಗ್ರಿಗಳೆಲ್ಲವೂ ಸತೀಶ್ ಸ್ಟೋರ್ಸ್ ನಲ್ಲಿ ಸಿಗಲಿದೆ.
ಜೊತೆಗೆ ಕಸ್ಟಮೈಸ್ಡ್ ಬೇಕು ಅಂದ್ರೆ ಅಲಂಕಾರಿಕ ವಸ್ತುಗಳನ್ನ ರೆಡಿ ಮಾಡಿ ಕೊಡ್ತಾರೆ. ಒಟ್ನಲ್ಲಿ ನಿಮ್ಮ ಮನೆಯ ಪ್ರತಿಯೊಂದು ಶುಭ ಸಮಾರಂಭಗಳಿಗೆ ಪೂಜಾ ಸಾಮಗ್ರಿಗಳಿಗಾಗಿ ಸತೀಶ್ ಸ್ಟೊರ‍್ಸ್ಗೆ ಭೇಟಿ ಕೊಟ್ರೆ ಮತ್ತೆ ಮತ್ತೆ ನೀವು ಏನೇ ಬೇಕಿದ್ರೂ ಅಲ್ಲೇ ಹೋಗೋದು ಗ್ಯಾರಂಟಿ.
ನಳಿನಾಕ್ಷಿ ಕಾರಹಳ್ಳಿ, ಕರ್ನಾಟಕ ಟಿವಿ